ಮತಕ್ಕಾಗಿ ಮೀನೂಟ ಜಪ: ಅಧಿಕಾರಕ್ಕೇರಿ ಬಡ ಮಕ್ಕಳ ಕೈಯಿಂದ ಮೊಟ್ಟೆ ಕಿತ್ತುಕೊಂಡ ಬಿಜೆಪಿ!

Date:

ಯಾವ ದೇಶದಲ್ಲಿ ಕೋಟ್ಯಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೋ, ಅಲ್ಲಿ ಆಹಾರದ ಆಯ್ಕೆಯನ್ನೂ ಕಿತ್ತುಕೊಂಡು ಮಕ್ಕಳನ್ನು ಇನ್ನಷ್ಟು ಅಪೌಷ್ಟಿಕತೆಯೆಡೆ ದೂಡಲಾಗುತ್ತಿದೆ. ಎಲ್ಲ ವರ್ಗದ ಜನರ ವಿಕಾಸದ ಭರವಸೆ ನೀಡಿ ಬಿಜೆಪಿ ಬಡ ಮಕ್ಕಳ ಪೌಷ್ಟಿಕಾಂಶದ ಹರಣ ಮಾಡುತ್ತಿದೆ. ಇವೆಲ್ಲವುದಕ್ಕೂ ಮುಖ್ಯವಾಗಿ ಮೊಟ್ಟೆ ತಿನ್ನುವ ಆಹಾರದ ಆಯ್ಕೆಗೆ ಬಿಜೆಪಿ ಸರ್ಕಾರ ಹಾಕುವ ಕಡಿವಾಣವಿದು.

ಮತಕ್ಕಾಗಿ ಬಿಜೆಪಿ ಆಡುವ ಆಟ ಒಂದೆರಡಲ್ಲ. ತಮ್ಮ ಸಿದ್ಧಾಂತವನ್ನೇ ತಾತ್ಕಾಲಿಕವಾಗಿ ಬುಡಮೇಲು ಮಾಡಿ ಮತಗಿಟ್ಟಿಸಿಕೊಳ್ಳುವ ಚಾಳಿ ಬಿಜೆಪಿಯದ್ದು. ಅಂತಹ ಬಿಜೆಪಿಯ ಚುನಾವಣಾ ತಂತ್ರಗಳಲ್ಲಿ ಆಹಾರವೂ ಒಂದು. ಆಹಾರ ಸಂಸ್ಕೃತಿಯನ್ನು ಮುಂದಿಟ್ಟುಕೊಂಡು ಮತ ಬೇಟೆಯಾಡುವುದು ಬಿಜೆಪಿಯ ರೂಢಿ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜೋತು ಬಿದ್ದದ್ದು ಇದೇ ತಂತ್ರಕ್ಕೆ. ಆದರೆ ಅಧಿಕಾರಕ್ಕೆ ಏರಿದ ಬಳಿಕ ಎಂದಿನಂತೆ ಬಿಜೆಪಿ ವರಸೆಯೇ ಬದಲಾಯಿಸಿಕೊಂಡಿದೆ. ಚುನಾವಣೆ ವೇಳೆ ಮೀನು ಪ್ರಿಯರಂತೆ ವರ್ತಿಸಿದ ಬಿಜೆಪಿ ನಾಯಕರು ಬಡ ಮಕ್ಕಳ ಕೈಯಿಂದ ಮೊಟ್ಟೆಯನ್ನು ಕಿತ್ತುಕೊಂಡಿದ್ದಾರೆ.

- Advertisement -

ಪಶ್ಚಿಮ ಬಂಗಾಳ ಮತ್ತು ಒಡಿಶಾದಂತಹ ಪೂರ್ವ ಭಾರತದ ರಾಜ್ಯಗಳಲ್ಲಿ ಮೀನು ಕೇವಲ ಆಹಾರವಲ್ಲ. ಅದು ಅಲ್ಲಿನ ಸಂಸ್ಕೃತಿ, ದೈನಂದಿನ ಜೀವನದ ಅವಿಭಾಜ್ಯ ಅಂಗ. ಮಂಗಳೂರಿಗರಂತೆ ‘ಮೀನು ಇಲ್ಲದೆ ಊಟ ಸೇರದು’ ಎನ್ನುವವರು ಪಶ್ಚಿಮ ಬಂಗಾಳದ ಬಹುತೇಕರು. ಹಾಗಾಗಿ ಸದಾ ಸಸ್ಯಾಹಾರದ ಪರವಾಗಿಯೇ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿ ನಾಯಕರು ಪಶ್ಚಿಮ ಬಂಗಾಳದ ಮತದಾರರನ್ನು ಸೆಳೆಯಲು ಸಿದ್ಧಾಂತವನ್ನು ಚುನಾವಣೆ ಮುಗಿಯುವವರೆಗೆ ಸಡಿಲಿಸಿಕೊಂಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಇದನ್ನೂ ಓದಿ: ಬಂಗಾಳ ಸರ್ಕಾರಿ ಶಾಲೆಗಳ ಬಿಸಿಯೂಟಕ್ಕೆ ‘ಇಸ್ಕಾನ್’ ಎಂಟ್ರಿ: ಊಟದಿಂದ ‘ಮೊಟ್ಟೆ’ ಔಟ್!

Advertisements

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ಬಂಗಾಳಿಗಳ ಭಾವನೆಯನ್ನು ಸ್ಪರ್ಶಿಸಿದಂತೆ ನಾಟಕಕ್ಕೆ ಇಳಿಯಿತು ಬಿಜೆಪಿ. “ಮೀನು ಹಿಡಿದು ಪ್ರಚಾರ” ಮಾಡಿದ್ದೇನೂ, ಕೇಂದ್ರ ಮಂತ್ರಿಗಳೇ ಖುದ್ದಾಗಿ ಬಂದು “ಭರ್ಜರಿ ಮೀನೂಟ” ಸವಿದಿದ್ದೇನೂ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದೇನೂ, “ನಾವು ಬಂಗಾಳಿಗಳ ಸಾಂಪ್ರದಾಯಿಕ ಮೀನು-ಮಾಂಸದ ಆಹಾರ ಪದ್ಧತಿಯನ್ನು ಗೌರವಿಸುತ್ತೇವೆ” ಎಂದೂ ಬಿಜೆಪಿ ನಾಯಕರು ಭಾಷಣ ಬಿಗಿದಿದ್ದೇನೂ- ಅಬ್ಬಾ! ಇವೆಲ್ಲವೂ ಇತಿಹಾಸ. ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಊಸರವಳ್ಳಿಯಂತೆ ಬಣ್ಣ ಬದಲಾಯಿಸಿದೆ. ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಯೋಜನೆಯಲ್ಲಿನ ಮೊಟ್ಟೆಯನ್ನು ಕಿತ್ತುಕೊಂಡಿದೆ.

ಅಧಿಕಾರಕ್ಕೆ ಬಂದ ನಂತರ ಉಲ್ಟಾ ಹೊಡೆದ ಬಿಜೆಪಿ

“ಆಡುವುದೊಂದು, ಮಾಡುವುದೊಂದು” ಎಂಬ ಗಾದೆ ಬಿಜೆಪಿಗೆ ಒಪ್ಪುವಂತದ್ದು. ಚುನಾವಣೆ ಮುಗಿದು ಅಧಿಕಾರ ಸಿಗುತ್ತಿದ್ದಂತೆಯೇ ಬಿಜೆಪಿ ತನ್ನ ಸಸ್ಯಾಹಾರಿ ಸೈದ್ಧಾಂತಿಕ ಕಾರ್ಯಸೂಚಿಯನ್ನು ಹರಡಿ ಹಾಕಿದೆ. ಸಸ್ಯಾಹಾರ ವಾದವನ್ನು ಬಡ ಶಾಲಾ ಮಕ್ಕಳ ಮೇಲೆ ಹೇರಿದೆ. ಪಶ್ಚಿಮ ಬಂಗಾಳದಲ್ಲಿ ಮಧ್ಯಾಹ್ನ ಶಾಲೆಗಳಿಗೆ ಬಿಸಿಯೂಟ ಒದಗಿಸುವ ಜವಾಬ್ದಾರಿಯನ್ನು ಇಸ್ಕಾನ್‌ ಸಂಸ್ಥೆಗೆ ಸರ್ಕಾರ ವಹಿಸಿದೆ. ಬ್ರಾಹ್ಮಣ್ಯವನ್ನು ಪ್ರತಿಪಾದಿಸುತ್ತಾ ಬಂದಿರುವ ಇಸ್ಕಾನ್ ಬಿಸಿಯೂಟದಿಂದ ಮೊಟ್ಟೆಯನ್ನು ತೆಗೆದುಹಾಕಿದೆ. ಮಾಂಸಾಹಾರಿ ಪದಾರ್ಥಗಳನ್ನು ತೆಗೆದು ಸಸ್ಯಾಹಾರಿ ಪರ್ಯಾಯಗಳನ್ನು ಸೇರಿಸಿಕೊಂಡಿದೆ.

ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಿಗೆ ಬರುವ ಬಹುತೇಕ ಮಕ್ಕಳು ಅತ್ಯಂತ ಬಡತನದ ಹಿನ್ನೆಲೆ ಉಳ್ಳವರು. ಅವರಿಗೆ ಸಿಗುವ ಏಕೈಕ ಗುಣಮಟ್ಟದ ಪೌಷ್ಟಿಕಾಂಶ ವಾರಕ್ಕೆರಡು ಬಾರಿ ಸಿಗುವ ಮೊಟ್ಟೆ. ಆದರೆ, ಸಾರ್ವಜನಿಕವಾಗಿ ಮಾಂಸಾಹಾರವನ್ನು ಗೌರವಿಸುತ್ತೇವೆ ಎಂದು ಹೇಳಿಕೊಂಡ ಬಿಜೆಪಿ ಸರ್ಕಾರ, ಮಕ್ಕಳ ಹಕ್ಕನ್ನು ಕಿತ್ತುಕೊಂಡಿದೆ. ಮೊಟ್ಟೆಯ ಬದಲು ಪನೀರ್ ನೀಡುತ್ತೇವೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಶಾಲಾ ಮಕ್ಕಳಿಗೆ ತಮಗೆ ಇಷ್ಟಬಂದದ್ದನ್ನು ತಿನ್ನುವ ಆಹಾರದ ಆಯ್ಕೆ ಕಿತ್ತುಕೊಳ್ಳುವುದಲ್ಲವೇ? ಅಷ್ಟಕ್ಕೂ ಮೊಟ್ಟೆಯ ಪ್ರೊಟೀನ್ ಅಂಶವನ್ನು ಪನೀರ್ ಸರಿದೂಗಿಸುತ್ತದೆಯೇ?

ಮಕ್ಕಳ ಪ್ರೊಟೀನ್‌ಗೆ ಬಿಜೆಪಿ ಸರ್ಕಾರದ ಕತ್ತರಿ

ದೇಶವು ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ (Global Hunger Index) ತೀರಾ ಹಿಂದುಳಿದಿದೆ. ದೇಶದ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಮತ್ತು ಬೆಳವಣಿಗೆ ಕುಂಠಿತಗೊಳ್ಳುವಿಕೆ ಅತಿ ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಹಾಗಿರುವಾಗ ಕೊಂಚ ಅಗ್ಗದ, ಸುಲಭವಾಗಿ ಲಭ್ಯವಾಗುವ ಮತ್ತು ಕಲಬೆರಕೆ ಮಾಡಲು ಸಾಧ್ಯವಿಲ್ಲದ ಅತ್ಯುತ್ತಮ ಪ್ರೊಟೀನ್ ಮೊಟ್ಟೆಯನ್ನು ಅಧಿಕ ಸೇವಿಸುವಂತೆ ಹಲವು ವೈದ್ಯರು ಸಲಹೆ ನೀಡುತ್ತಾರೆ. ಇದರಲ್ಲಿ ವಿಟಮಿನ್ ಬಿ12, ಡಿ ಮತ್ತು ಅಗತ್ಯ ಅಮಿನೋ ಆಮ್ಲಗಳಿರುವುದೂ ಇದಕ್ಕೆ ಕಾರಣ. ಹೀಗಿರುವಾಗ ಶಾಲೆಯಲ್ಲಿ ಸಿಗುವ ಮೊಟ್ಟೆಯೇ ಬಡ ಮಕ್ಕಳಿಗೆ ಪೌಷ್ಟಿಕಾಂಶದ ಮೂಲ.

ಇದನ್ನೂ ಓದಿ: ಮೊಟ್ಟೆ ಬೆಲೆ ಏರಿಕೆ; ಮಧ್ಯಾಹ್ನದ ಬಿಸಿಯೂಟಕ್ಕೆ ಬಜೆಟ್‌ ಕೊರತೆ

ಇದೀಗ ಪಶ್ಚಿಮ ಬಂಗಾಳದ ಬಿಸಿಯೂಟದಲ್ಲಿ ಮೊಟ್ಟೆಯ ಬದಲಿಗೆ ಪನೀರ್, ಸೋಯಾ ನೀಡುವುದಾಗಿ ಸರ್ಕಾರ ಹೇಳುತ್ತದೆ. ಆದರೆ, ತಜ್ಞರ ಪ್ರಕಾರ ಇವು ಮೊಟ್ಟೆಗೆ ಸಮಾನವಾದ ಪೌಷ್ಟಿಕಾಂಶವನ್ನು ಒದಗಿಸಲು ಸಾಧ್ಯವಿಲ್ಲ. ಸೋಯಾಚಂಕ್ಸ್ ಅಧಿಕ ಪ್ರೊಟೀನ್ ಹೊಂದಿದ್ದರೂ ಜೀರ್ಣವಾಗುವ ಸಾಮರ್ಥ್ಯ ಮೊಟ್ಟೆಗಿಂತ ಕಡಿಮೆ ಇರುತ್ತದೆ. ಇವು ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

1 ಬೇಯಿಸಿದ ಮೊಟ್ಟೆ (ದೊಡ್ಡದು) ಸುಮಾರು 6 ಗ್ರಾಂ ಪ್ರೊಟೀನ್ ಹೊಂದಿರುತ್ತದೆ. 100 ಗ್ರಾಂ ಪನೀರ್‌ನಲ್ಲಿ ಸುಮಾರು 18 ರಿಂದ 20 ಗ್ರಾಂ ಪ್ರೊಟೀನ್ ಇರುತ್ತದೆ. ಅಂದರೆ ಸುಮಾರು 30-35 ಗ್ರಾಂ ಪನೀರ್ ತಿಂದರೆ ಒಂದು ಮೊಟ್ಟೆಯಷ್ಟು ಪ್ರೊಟೀನ್ ಸಿಗುತ್ತದೆ. ಬಿಸಿಯೂಟದಲ್ಲಿ ಪ್ರತಿ ಮಕ್ಕಳಿಗೆ 30-35 ಗ್ರಾಂ ಪನೀರ್ ನೀಡುತ್ತದೆಯೇ? ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪನೀರ್‌ನಲ್ಲಿ ಕಲಬೆರಕೆ ಹೆಚ್ಚಾಗಿದೆ. ಹಾಗಿದ್ದಾಗ ಮಕ್ಕಳಿಗೆ ನೀಡುವ ಪನೀರ್ ಅಸಲಿಯೇ ನಕಲಿಯೇ ಎನ್ನುವುದು ಹೇಗೆ? ಇವೆಲ್ಲವುದಕ್ಕೂ ಮುಖ್ಯವಾಗಿ ಮಕ್ಕಳ ಆಹಾರದ ಆಯ್ಕೆಗೆ ಬಿಜೆಪಿ ಸರ್ಕಾರ ಹಾಕುವ ಕಡಿವಾಣವಲ್ಲವೇ? ಎಲ್ಲ ವರ್ಗದ ಜನರ ವಿಕಾಸದ ಭರವಸೆ ನೀಡಿ ಬಿಜೆಪಿ ಬಡ ಮಕ್ಕಳ ಪೌಷ್ಟಿಕಾಂಶದ ಹರಣ ಮಾಡುವುದಲ್ಲವೇ?

ಹೀಗೆ ಚುನಾವಣೆಯಲ್ಲಿ ಗೆಲ್ಲಲು ಮೀನೂಟದ ನಾಟಕವಾಡಿ, ಗೆದ್ದ ನಂತರ ಬಡ ಮಕ್ಕಳ ಕೈಯಲ್ಲಿದ್ದ ಮೊಟ್ಟೆಯನ್ನು ಕಿತ್ತುಕೊಳ್ಳುವುದು ಕೇವಲ ರಾಜಕೀಯ ಕಪಟತೆ ಮಾತ್ರವಲ್ಲ, ಬದಲಿಗೆ ದೇಶದ ಭವಿಷ್ಯದ ಮಕ್ಕಳ ಆರೋಗ್ಯದ ಜೊತೆ ಆಡುವ ಆಟ. ಯಾವ ದೇಶದಲ್ಲಿ ಕೋಟ್ಯಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೋ, ಅಲ್ಲಿ ಆಹಾರದ ಆಯ್ಕೆಯನ್ನೂ ಕಿತ್ತುಕೊಂಡು ಮಕ್ಕಳನ್ನು ಇನ್ನಷ್ಟು ಅಪೌಷ್ಟಿಕತೆಯೆಡೆ ದೂಡಲಾಗುತ್ತಿದೆ. ಅಷ್ಟಕ್ಕೂ ಬಿಜೆಪಿ ಚುನಾವಣಾ ಪ್ರಚಾರದ ವೇಳೆ ತೋರುವ ‘ಸಾಂಸ್ಕೃತಿಕ ಉದಾರತೆ’ಯನ್ನು ಅಧಿಕಾರಕ್ಕೆ ಬಂದ ಮೇಲೂ ಬಡ ಮಕ್ಕಳ ತಟ್ಟೆಯ ವಿಷಯದಲ್ಲಿ ಕಾಯ್ದುಕೊಳ್ಳಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳುವುದು ತಿಳಿಗೇಡಿತನ!

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

‘ದೇವರೇ ಈ ದೇಶವನ್ನು ಕಾಪಾಡಬೇಕು’: ರೈಲು ಪ್ರಯಾಣದ ಗದ್ದಲಕ್ಕೆ ಬೇಸತ್ತ ತೇಜಸ್ವಿ ಸೂರ್ಯ ಪತ್ನಿ

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ...

ಬೀದರ್ | ಬರ ಪರಿಸ್ಥಿತಿ : ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬೆಳೆ...