ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಉದ್ಯಮಿ ಅದಾನಿ ಸಮೂಹವು 2014ರಲ್ಲಿ ಇಂಡೋನೇಷ್ಯಾದಿಂದ ಕಡಿಮೆ ಗುಣಮಟ್ಟದ ಕಲ್ಲಿದ್ದಲು ಖರೀದಿಸಿ, ಭಾರತದಲ್ಲಿ ಮೂರು ಪಟ್ಟು ಬೆಲೆಗೆ ಮಾರಾಟ ಮಾಡಿದೆ ಎನ್ನಲಾದ ಪ್ರಕರಣವನ್ನು ಸಂಸತ್ತಿನ ಜಂಟಿ ಸ್ಥಾಯಿ ಸಮಿತಿ ಮೂಲಕ ತನಿಖೆ ನಡೆಸುವುದಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಗೌತಮ್ ಅದಾನಿ ಸಮೂಹವು ಕಳಪೆ ಗುಣಮಟ್ಟದ ಕಲ್ಲಿದ್ದಲು ಖರೀದಿ ಮಾಡಿ ಅದನ್ನು ಭಾರತದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದೆ ಎನ್ನುವ ಲಂಡನ್‌ನ ‘ಫೈನಾನ್ಶಿಯಲ್ ಟೈಮ್ಸ್’ನ ವರದಿ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ, ‘ಫೈನಾನ್ಶಿಯಲ್ ಟೈಮ್ಸ್’ನ ವರದಿಯನ್ನು ಹಂಚಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಅತಿದೊಡ್ಡ ಕಲ್ಲಿದ್ದಲು ಹಗರಣ ಬೆಳಕಿಗೆ ಬಂದಿದೆ. ವರ್ಷಗಳಿಂದ ನಡೆಯುತ್ತಿರುವ ಈ ಹಗರಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ನೇಹಿತ ಅದಾನಿ ಮೂರುಪಟ್ಟು ಕಡಿಮೆ ದರ್ಜೆಯ ಕಲ್ಲಿದ್ದಲನ್ನು ಮಾರಾಟ ಮಾಡಿದ್ದಾರೆ ಎಂದು ದೂರಿದ್ದಾರೆ. ಇಂಡಿಯಾ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬಂದರೆ, ಈ ಹಗರಣವನ್ನು ಜೆಪಿಸಿ ಮೂಲಕ ತನಿಖೆ ನಡೆಸಲು ಸಮಿತಿ ರಚಿಸುವುದಾಗಿ ಅವರು ತಿಳಿಸಿದ್ದಾರೆ.
ಅದಾನಿ ಕಡಿಮೆ ದರ್ಜೆಯ ಕಲ್ಲಿದ್ದಲನ್ನು ಮೂರು ಪಟ್ಟು ಬೆಲೆಗೆ ಮಾರಾಟ ಮಾಡಿದ್ದಾರೆ. ಇದೊಂದು ಭ್ರಷ್ಟಾಚಾರ ಪ್ರಕರಣ. ಇದರ ಬಗ್ಗೆ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಮೌನ ವಹಿಸಿರುವುದನ್ನು ಕೂಡ ಇದೇ ವೇಳೆ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
भाजपा सरकार में भीषण कोयला घोटाला सामने आया है।
वर्षों से चल रहे इस घोटाले के ज़रिए मोदी जी के प्रिय मित्र अडानी ने लो-ग्रेड कोयले को तीन गुने दाम पर बेच कर हज़ारों करोड़ रुपए लूटे हैं, जिसकी कीमत आम जनता ने बिजली का महंगा बिल भर कर अपनी जेब से चुकाई है।
क्या प्रधानमंत्री… pic.twitter.com/05bqI4azvh
— Rahul Gandhi (@RahulGandhi) May 22, 2024
“ಕಳೆದ ದಶಕದಲ್ಲಿ ಪ್ರಧಾನಿಯವರ ಆಪ್ತರು ಕಾನೂನನ್ನು ಉಲ್ಲಂಘಿಸುವ ಮೂಲಕ ಮತ್ತು ಅತ್ಯಂತ ದುರ್ಬಲ ಭಾರತೀಯರನ್ನು ಶೋಷಿಸುವ ಮೂಲಕ ತಮ್ಮನ್ನು ತಾವು ಶ್ರೀಮಂತಗೊಳಿಸಿರುವ ನಿರ್ಭಯಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ” ಎಂದಿದ್ದಾರೆ.
ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿರುವ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆಯ ತನಿಖೆಯು 2014ರಲ್ಲಿ ಇಂಡೋನೇಷ್ಯಾದಿಂದ ಅದಾನಿ ಅಗ್ಗವಾಗಿ ಖರೀದಿಸಿದ ಕಡಿಮೆ ಗುಣಮಟ್ಟದ, ಹೆಚ್ಚಿನ ಬೂದಿ ಕಲ್ಲಿದ್ದಲಿನ ಹತ್ತಾರು ಸಾಗಣೆಯನ್ನು ಮೂರು ಬಾರಿ ಮೋಸದಿಂದ ಮಾರಾಟ ಮಾಡಲಾಗಿದೆ ಎನ್ನುವ ಸಂಗತಿ ಬಯಲು ಮಾಡಿದೆ.
ಇದನ್ನು ಓದಿದ್ದೀರಾ? ಅಸಮಾನತೆ ಪೋಷಿಸುವ ಜಾತಿ ವ್ಯವಸ್ಥೆ ಅಳಿಸಲು ಬುದ್ಧ, ಬಸವ, ಅಂಬೇಡ್ಕರ್ ಹೋರಾಡಿದ್ದರು: ಸಿಎಂ ಸಿದ್ದರಾಮಯ್ಯ
ಸಾರ್ವಜನಿಕ ವಲಯದ ತಮಿಳುನಾಡು ಉತ್ಪಾದನೆ ಮತ್ತು ವಿತರಣಾ ನಿಗಮಕ್ಕೆ ಉತ್ತಮ ಗುಣಮಟ್ಟದ, ಕಡಿಮೆ ಬೂದಿ ಕಲ್ಲಿದ್ದಲು ಇದರಿಂದ 3000 ಕೋಟಿ ರೂ.ಗಳಷ್ಟು ಹೆಚ್ಚುವರಿ ಲಾಭ ಗಳಿಸಿದೆ. ಆದರೆ ಸಾಮಾನ್ಯ ಜನರು ಅಧಿಕ ಬೆಲೆಯ ವಿದ್ಯುತ್ ಮತ್ತು ಅತೀ ಹೆಚ್ಚು ವಾಯುಮಾಲಿನ್ಯ ಅನುಭವಿಸುವಂತಾಗಿದೆ ಎಂದು ಫೈನಾನ್ಶಿಯಲ್ ಟೈಮ್ಸ್‌ನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
