ಹಂಗಾಮಿ ಮುಖ್ಯ ನ್ಯಾ. ಸಂಜೀವ್ ಪ್ರಕಾಶ್ ಶರ್ಮಾ ವಿರುದ್ಧ ಪ್ರತಿಭಟನೆ: ಸೆ.6ರವರೆಗೆ ಜೈಪುರ, ಜೋಧಪುರ ವಕೀಲರಿಂದ ಮುಷ್ಕರ

Date:

ರಾಜಸ್ಥಾನ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾ. ಸಂಜೀವ್ ಪ್ರಕಾಶ್ ಶರ್ಮಾ ಅವರ ವಿರುದ್ಧ ನ್ಯಾಯಾಲಯದ ಹೊರಗೆ ಸೋಮವಾರ ಜೈಪುರದ ಕೆಲವು ವಕೀಲರು ಪ್ರತಿಭಟನೆ ನಡೆಸಿದ್ದು, ಸೆಪ್ಟೆಂಬರ್‌ 6ರವರೆಗೆ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

- Advertisement -

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರು “ರಾಜಸ್ಥಾನ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯವರು ʼಅಧಿಕಾರದ ದುರುಪಯೋಗʼ ಮಾಡುತ್ತಿದ್ದಾರೆ. ಹಾಗಾಗಿ ತಕ್ಷಣದಿಂದಲೇ ಬೇರೆ ರಾಜ್ಯದ ಮುಖ್ಯ ನ್ಯಾಯಮೂರ್ತಿಯೊಬ್ಬರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ ಸಿಜೆಐ ಸೂರ್ಯಕಾಂತ್‌ ಅವರಿಗೆ ಆಗಸ್ಟ್‌ ಮೊದಲ ವಾರದಲ್ಲಿ ಪತ್ರ ಬರೆದಿದ್ದರು. ಅವುಗಳು ಸಾರ್ವಜನಿಕವಾಗಿ ಬಂದ ನಂತರ ಈ ಬೆಳವಣಿಗೆಗಳು ನಡೆದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಜೋಧ್‌ಪುರದಲ್ಲಿ, ಹಂಗಾಮಿ ಸಿಜೆ ಅವರನ್ನು ನ್ಯಾಯಾಂಗ ಮತ್ತು ಆಡಳಿತಾತ್ಮಕ ಕರ್ತವ್ಯಗಳಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ವಕೀಲರ ಸಂಘಗಳು ಸೆಪ್ಟೆಂಬರ್‌ 6ರವರೆಗೆ ಮುಷ್ಕರ ನಡೆಸುವುದಾಗಿ ಘೋಷಿಸಿವೆ.

ಜೋಧ್‌ಪುರದಲ್ಲಿ ಎರಡೂ ವಕೀಲರ ಸಂಘಗಳು ಭಾನುವಾರದವರೆಗೆ ಮುಷ್ಕರ ಘೋಷಿಸಿವೆ. ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನು ನ್ಯಾಯಿಕ ಮತ್ತು ಆಡಳಿತಾತ್ಮಕ ಕರ್ತವ್ಯಗಳಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ನ್ಯಾಯಮೂರ್ತಿ ಮೆಹ್ತಾ ಅವರು ಸಿಜೆಐ ಸೂರ್ಯಕಾಂತ್‌ಗೆ ಆಗಸ್ಟ್ 2, 10 ಮತ್ತು 17ರಂದು ಕಳುಹಿಸಿದ ಪತ್ರಗಳು ಸಾರ್ವಜನಿಕವಾಗಿ ಬಂದ ಕೆಲವು ದಿನಗಳ ನಂತರ ಇದು ನಡೆದಿದೆ. ಈ ಪತ್ರಗಳನ್ನು ಸುಪ್ರೀಂ ಕೋರ್ಟ್ ಕೊಲೀಜಿಯಂನ ಇತರ ಸದಸ್ಯರಿಗೂ ಕಳುಹಿಸಲಾಗಿತ್ತು.

ನ್ಯಾಯಮೂರ್ತಿ ಮೆಹ್ತಾ ಅವರು ತಮ್ಮ ಪತ್ರಗಳಲ್ಲಿ‌, “ನ್ಯಾಯಮೂರ್ತಿ ಶರ್ಮಾ ಅವರು ʼಅಧಿಕಾರದ ದುರುಪಯೋಗʼ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಹಲವಾರು ದೂರುಗಳನ್ನು ಹೊತ್ತಿರುವುದು ಹಂಗಾಮಿ ಮುಖ್ಯ ನ್ಯಾಯಮೂರ್ತಿಯ ʼನೈತಿಕತೆʼಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಇದರ ಆಧಾರದ ಮೇಲೆ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನು ಇನ್ನೊಂದು ಹೈಕೋರ್ಟ್‌ಗೆ ವರ್ಗಾಯಿಸಬೇಕು ಮತ್ತು ಹೊಸ ಮುಖ್ಯ ನ್ಯಾಯಮೂರ್ತಿಯನ್ನು ನೇಮಕ ಮಾಡಬೇಕು” ಎಂದು ಕೋರಿದ್ದಾರೆ.

ಜೈಪುರದಲ್ಲಿ ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷ ರಾಜೀವ್ ಸೋಗರ್‌ವಾಲ್ ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿರುವ ಪ್ರಕಾರ, “ನಾವು ಇಂದು ಸಭೆ ನಡೆಸಿ ಸಮಾಲೋಚಿಸಿದ ಬಳಿಕ, ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಯವರು ರಾಜಸ್ಥಾನದ ಹಂಗಾಮಿ ಮುಖ್ಯ ನ್ಯಾಯಮೂರ್ತಿಯ ಬಗ್ಗೆ ಎತ್ತಿರುವ ವಿಷಯಗಳು ಮತ್ತು ಸಮಸ್ಯೆಗಳನ್ನು ವಿವರಿಸಿ ಸಿಜೆಐಗೆ ಬಲವಾದ ಪ್ರತಿನಿಧಿ ಪತ್ರ ಕಳುಹಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದರು.

“ಈ ವಿಷಯ ಈಗ ಸಾರ್ವಜನಿಕ ವಲಯದಲ್ಲಿರುವುದರಿಂದ ತೀರ್ಮಾನವನ್ನೂ ಸಾರ್ವಜನಿಕ ವಲಯದಲ್ಲೇ ಇಡಬೇಕು. ತನಿಖೆಯನ್ನು ನಿಗದಿತ ಅವಧಿಯಲ್ಲಿ ಮುಗಿಸಬೇಕು. ವಿಳಂಬವಾದರೆ ವಕೀಲರಿಗೂ ನ್ಯಾಯಾಂಗಕ್ಕೂ ಹಿತಕರವಲ್ಲ. ಹಾಗಾಗಿ ಆದಷ್ಟು ಬೇಗ ಈ ವಿಷಯವನ್ನು ಮುಗಿಸುವಂತೆ ನಾವು ಸಿಜೆಐ ಅವರನ್ನುಕೋರುತ್ತೇವೆ” ಎಂದು ಸೋಗರ್‌ವಾಲ್ ಹೇಳಿದ್ದಾರೆ.

ಕೆಲವು ವಕೀಲರು ಬೆಳಿಗ್ಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯ ನ್ಯಾಯಾಲಯದ ಹೊರಗೆ ಘೋಷಣೆಗಳನ್ನೂ ಕೂಗಿದ್ದಾರೆ. ಜೋಧ್‌ಪುರದಲ್ಲಿಯೂ ರಾಜಸ್ಥಾನ ಹೈಕೋರ್ಟ್ ಲಾಯರ್ಸ್ ಅಸೋಸಿಯೇಷನ್ ಮತ್ತು ರಾಜಸ್ಥಾನ ಹೈಕೋರ್ಟ್ ಅಡ್ವೊಕೇಟ್ಸ್ ಅಸೋಸಿಯೇಷನ್ ಮುಂದಿನ ಭಾನುವಾರದವರೆಗೆ ಮುಷ್ಕರ ಘೋಷಿಸಿವೆ.

ವಕೀಲರ ಸಂಘಗಳ ತುರ್ತು ಸಭೆ

ಆಗಸ್ಟ್ 27ರಂದು ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಷನ್(ಜೈಪುರ), ರಾಜಸ್ಥಾನ ಹೈಕೋರ್ಟ್ ಲಾಯರ್ಸ್ ಅಸೋಸಿಯೇಷನ್(ಜೋಧ್‌ಪುರ) ಮತ್ತು ರಾಜಸ್ಥಾನ ಹೈಕೋರ್ಟ್ ಅಡ್ವೊಕೇಟ್ಸ್ ಅಸೋಸಿಯೇಷನ್(ಜೋಧ್‌ಪುರ) ಮೂರು ಸಂಘಗಳ ಕಾರ್ಯನಿರ್ವಾಹಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತುರ್ತು ಸಭೆ ನಡೆಸಿದ್ದವು. ಅಲ್ಲಿ ಅವರು ʼಮಾಧ್ಯಮಗಳ ಮೂಲಕ ಬೆಳಕಿಗೆ ಬಂದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಗಂಭೀರ ಕಾಳಜಿʼ ವ್ಯಕ್ತಪಡಿಸಿದ್ದರು.

“ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಾಂಸ್ಥಿಕ ತನಿಖೆ ಕೋರಿದ್ದಾರೆ. ಈ ವಿಷಯ ಅತ್ಯಂತ ಗಂಭೀರವಾಗಿದ್ದು ನ್ಯಾಯಾಂಗದ ಸಾಂಸ್ಥಿಕ ಗೌರವ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ. ಆದ್ದರಿಂದ ಕಾನೂನು ಸಮುದಾಯವು ಈ ಸಂಪೂರ್ಣ ಬೆಳವಣಿಗೆಯನ್ನು ಆಳವಾದ ಕಾಳಜಿಯಿಂದ ನೋಡುತ್ತಿದೆ” ಎಂದು ಸಂಘಗಳು ಹೇಳಿದ್ದವು.

“ನ್ಯಾಯಾಂಗದಲ್ಲಿ ಯಾವುದೇ ಹುದ್ದೆ, ಕಚೇರಿ ಅಥವಾ ಸಾಂಸ್ಥಿಕ ವ್ಯವಸ್ಥೆಯ ಯಾವುದೇ ಆರೋಪಿತ ದುರುಪಯೋಗವನ್ನು ನಾವು ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ. ನ್ಯಾಯಾಂಗವು ಕೇವಲ ನ್ಯಾಯ ನೀಡುವ ಸಂಸ್ಥೆಯಲ್ಲ; ಅದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಜನರ ಅಂತಿಮ ನಂಬಿಕೆಯ ಸ್ಥಾನವೂ ಹೌದು. ಆದ್ದರಿಂದ ನ್ಯಾಯಾಂಗದ ನಿಷ್ಪಕ್ಷಪಾತತೆ, ಗೌರವ ಅಥವಾ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಯಾವುದೇ ಘಟನೆ, ವರ್ತನೆ ಅಥವಾ ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು” ಎಂದು ಹೇಳಿದ್ದರು.

“ನಾವು ಗೌರವಾನ್ವಿತ ನ್ಯಾಯಾಂಗದಿಂದ ಈ ಸಂಪೂರ್ಣ ವಿಷಯದಲ್ಲಿ ಸಾಂಸ್ಥಿಕ ಗೌರವ, ಸ್ವಾತಂತ್ರ್ಯ ಹಾಗೂ ಪಾರದರ್ಶಕತೆಗೆ ಪ್ರಮುಖ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿನಮ್ರವಾಗಿ ನಿರೀಕ್ಷಿಸುತ್ತೇವೆ. ಇದರಿಂದ ಸಾಮಾನ್ಯ ಜನರ ನ್ಯಾಯಾಂಗದ ಮೇಲಿನ ನಂಬಿಕೆ ಅಚಲವಾಗಿರುತ್ತದೆ. ವಕೀಲ ಸಮುದಾಯ ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗದ ನ್ಯಾಯ ವ್ಯವಸ್ಥೆಯ ಮೇಲಿನ ವಿಶ್ವಾಸ ಬಲಗೊಳ್ಳುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ನ್ಯಾಯಾಂಗದ ಗೌರವವನ್ನು ರಕ್ಷಿಸುವುದು ಕೇವಲ ಗೌರವಾನ್ವಿತ ನ್ಯಾಯಾಧೀಶರು ಅಥವಾ ವಕೀಲರ ವಿಷಯವಲ್ಲ; ಅದು ಸಂಪೂರ್ಣ ಸಮಾಜದ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವ ಪ್ರಶ್ನೆಯಾಗಿದೆ. ರಾಜಸ್ಥಾನದ ಕಾನೂನು ಸಮುದಾಯವು ನ್ಯಾಯಾಂಗದ ಸ್ವಾತಂತ್ರ್ಯ, ನಿಷ್ಪಕ್ಷಪಾತತೆ, ಗೌರವ ಹಾಗೂ ಸಾಂಸ್ಥಿಕ ಶಿಸ್ತಿಗೆ ಸಂಪೂರ್ಣವಾಗಿ ಬದ್ಧವಾಗಿದೆ. ಎಲ್ಲಾ ಪರಿಸ್ಥಿತಿಗಳಲ್ಲೂ ಸಾರ್ವಜನಿಕರು ಮತ್ತು ಬಾರ್‌ನ ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಕಾಪಾಡುವಲ್ಲಿ ಸಕಾರಾತ್ಮಕ, ಜವಾಬ್ದಾರಿಯುತ ಹಾಗೂ ಸಾಂಸ್ಥಿಕ ಪಾತ್ರವನ್ನು ವಹಿಸುತ್ತಲೇ ಇರುತ್ತದೆ” ಎಂದು ಮೂರು ಸಂಘಗಳೂ ಹೇಳಿದ್ದವು.

ಈ ಸುದ್ದಿ ಓದಿದ್ದೀರಾ? ಸೆ.5ರ ಸಿಜೆಪಿ ಪ್ರತಿಭಟನಾ ಮೆರವಣಿಗೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ಹಿಂದೆ ಜೋಧ್‌ಪುರದ ರಾಜಸ್ಥಾನ ಹೈಕೋರ್ಟ್ ಅಡ್ವೊಕೇಟ್ಸ್ ಅಸೋಸಿಯೇಷನ್ ಕನಿಷ್ಠ ಎರಡು ಬಾರಿ ಸಿಜೆಐಗೆ ಪತ್ರ ಬರೆದು ಹೈಕೋರ್ಟ್‌ಗೆ ಶಾಶ್ವತ ಮುಖ್ಯ ನ್ಯಾಯಮೂರ್ತಿ ನೇಮಕ ಮಾಡುವಂತೆ ಮತ್ತು ರಾಜಸ್ಥಾನದ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನು ಇನ್ನೊಂದು ಹೈಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿತ್ತು ಎನ್ನಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...

​ಪ್ರತಿಭಟನೆಗಳ ವರದಿಗಾರಿಕೆಗೆ ಭಾರತೀಯ ಪ್ರೆಸ್ ಕೌನ್ಸಿಲ್‌ನಿಂದ ನೂತನ ಮಾರ್ಗದರ್ಶಿ ಸೂತ್ರಗಳ ಬಿಡುಗಡೆ

ಪ್ರತಿಭಟನೆಗಳು ಮತ್ತು ಧರಣಿ ಸತ್ಯಾಗ್ರಹಗಳ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆಯನ್ನು ಕಾಯ್ದುಕೊಳ್ಳಲು, ಜವಾಬ್ದಾರಿಯುತ...