ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದುನ್ನು ಪ್ರತಿಭಟಿಸಿ ದೇಶದ ಪ್ರಮುಖ ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಬಿಡುವುದನ್ನು ರೈತ ನಾಯಕರು ತಡೆದಿದ್ದಾರೆ.
ಹರಿದ್ವಾರದಲ್ಲಿ ಕುಸ್ತಿಪಟುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ‘ರೈತ ನಾಯಕ’ ನರೇಶ್ ಟಿಕಾಯತ್, ನದಿಯಲ್ಲಿ ಬಿಡುವುದಕ್ಕಾಗಿ ಕುಸ್ತಿಪಟುಗಳು ತಂದಿದ್ದ ಪದಕಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಸಮಸ್ಯೆ ಪರಿಹಾರಕ್ಕೆ ತಮಗೆ ʻಐದು ದಿನಗಳ ಸಮಯವನ್ನು ಕೊಡಿʼ ಎಂದು ಟಿಕಾಯತ್ ಕುಸ್ತಿಪಟುಗಳಲ್ಲಿ ಮನವಿ ಮಾಡಿದ್ದಾರೆ.