ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಶನಿವಾರ ಮತ್ತೆ ವಕ್ಫ್ ಕಾಯ್ದೆ ವಿರುದ್ಧವಾಗಿ ಪ್ರತಿಭಟನೆ ನಡೆದಿದ್ದು ಹಿಂಸಾಚಾರ ಉಂಟಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಶುಕ್ರವಾರವಷ್ಟೇ ಹಿಂಸಾಚಾರ ನಡೆದಿದ್ದು ಯಾವುದೇ ಪ್ರಾಣಾಪಾಯವಾಗಿರಲಿಲ್ಲ. ಆದರೆ ನೂರಾರು ಮಂದಿಯನ್ನು ಬಂಧಿಸಲಾಗಿದೆ.
ಇದೀಗ ಶನಿವಾರ ಮತ್ತೆ ಹಿಂಸಾಚಾರ ನಡೆದಿದೆ. ಬಿಎಸ್‌ಎಫ್ ನಡೆಸಿದ ಗುಂಡಿನ ದಾಳಿಯಿಂದಾಗಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ 118ಕ್ಕೂ ಅಧಿಕ ಮಂದಿ ಬಂಧನಕ್ಕೆ ಒಳಗಾಗಿದ್ದಾರೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ಹಿಂಸಾಚಾರ; 110ಕ್ಕೂ ಹೆಚ್ಚು ಮಂದಿ ಬಂಧನ
ಇವೆಲ್ಲವುದರ ನಡುವೆ ರಾಜ್ಯದಲ್ಲಿ ಈ ವಿವಾದಿತ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ಭರವಸೆ ನೀಡಿದ್ದಾರೆ. “ನಾವು ಈ ಕಾಯ್ದೆಯನ್ನು ರಚಿಸಿರುವುದಲ್ಲ, ಕೇಂದ್ರ ಸರ್ಕಾರ ರಚಿಸಿರುವುದು ಎಂಬುದು ನನೆಪಿರಲಿ. ಆದ್ದರಿಂದ ನಿಮ್ಮಲಿರುವ ಪ್ರಶ್ನೆಯನ್ನು ನೀವು ಕೇಂದ್ರ ಸರ್ಕಾರದ ಬಳಿಯೇ ಕೇಳಬೇಕು. ನಾವು ಈಗಾಗಲೇ ಈ ವಿಚಾರದಲ್ಲಿ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ನಾನು ವಕ್ಫ್ ಕಾಯ್ದೆಯನ್ನು ಬೆಂಬಲಿಸಲ್ಲ, ಕಾಯ್ದೆಯನ್ನು ನಮ್ಮ ರಾಜ್ಯದಲ್ಲಿ ಜಾರಿಗೊಳಿಸಲ್ಲ. ಹಾಗಿರುವಾಗ ಈ ಗಲಭೆ ಯಾಕಾಗಿ” ಎಂದು ಪಶ್ಚಿಮ ಬಂಗಾಳ ಸಿಎಂ ಪ್ರಶ್ನಿಸಿದ್ದಾರೆ.
ಶುಕ್ರವಾರ ನಡೆದ ಹಿಂಸಾಚಾರದಲ್ಲಿ 15 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಡಿಜಿಪಿ ರಾಜೀವ್ ಕುಮಾರ್, “ನಾವು ಇಂತಹ ಗೂಂಡಾಗಿರಿಯನ್ನು ಸಹಿಸಲಾರೆವು. ನಾವು ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಪ್ರತಿಭಟನೆ ಆರಂಭಿಸಿ ಬಳಿಕ ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡಲಾಗಿದೆ. ಬಳಿಕ ಕೋಮು ಬಣ್ಣ ಪಡೆದುಕೊಂಡಿದೆ. ಮತ್ತೆ ಹಿಂಸಾಚಾರ ನಡೆದಿದೆ” ಎಂದಿದ್ದಾರೆ.
