ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಅಳಿಸಲಾದ ವ್ಯಕ್ತಿಗಳ ಗುರುತು ಮತ್ತು ಕಾರಣವನ್ನು ಆಗಸ್ಟ್ 19ರೊಳಗೆ ಬಹಿರಂಗಪಡಿಸಿ ಎಂದು ಚುನಾವಣಾ ಆಯೋಗಕ್ಕೆ(ಇಸಿ) ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 65 ಲಕ್ಷ ಜನರ ಹೆಸರುಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಳಿಸುವಿಕೆಗೆ ಕಾರಣದೊಂದಿಗೆ ಅಪ್ಲೋಡ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ
ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR)ಯನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠ, ಚುನಾವಣಾ ಆಯೋಗವು ಪಟ್ಟಿಯಿಂದ ಅಳಿಸಲಾದ 65 ಲಕ್ಷ ಹೆಸರುಗಳಲ್ಲಿ 22 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಹೇಳಿದೆ ಎಂದು ಗಮನಿಸಿದರು. 22 ಲಕ್ಷ ಜನರು ಮೃತಪಟ್ಟಿದ್ದರೆ ಅದನ್ನು ಬೂತ್ ಮಟ್ಟದಲ್ಲಿ ಏಕೆ ಬಹಿರಂಗಪಡಿಸಲಾಗಿಲ್ಲ? ಎಂದು ಪ್ರಶ್ನಿಸಿದೆ.