ಟಾಕ್ಸಿಕ್ ಜಾಬ್ ಎನ್ನುವುದು ಈಗ ಸಾಮಾನ್ಯವಾಗಿ ಕೇಳಿ ಬರುವ ಪದವಾಗಿದೆ. ಆದರೆ ಈ ಸವಾಲಿನಿಂದ ಹೊರಬರಲು ಹಲವಾರು ಮಂದಿಗೆ ಹಣಕಾಸು ಸ್ಥಿತಿ ಅಡ್ಡಿಯಾಗುತ್ತಿದೆ. ಇವೆಲ್ಲವುದರ ನಡುವೆ ಪುಣೆಯ ಸೇಲ್ಸ್ ಎಕ್ಸಿಕ್ಯೂಟಿವ್ ಓರ್ವ ತನ್ನ ಈ ಟಾಕ್ಸಿಕ್ ಜಾಬ್ ತೊರೆದು ಮ್ಯಾನೇಜರ್ ಎದುರೇ ಡೋಲು ಬಾರಿಸಿ ಕುಣಿದಾಡಿದ ಘಟನೆ ಇತ್ತೀಚೆಗೆ ನಡೆದಿದ್ದು ಇದರ ವಿಡಿಯೋ ಭಾರೀ ವೈರಲ್ ಆಗಿದೆ.
ಈ ಉದ್ಯೋಗಿಯ ಸ್ನೇಹಿತ ಮತ್ತು ಕಂಟೆಂಟ್ ಕ್ರಿಯೇಟರ್ ಅನೀಶ್ ಭಗತ್ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅನಿಕೇತ್ ಎಂಬ ಪುಣೆಯ ಸೇಲ್ಸ್ ಎಕ್ಸಿಕ್ಯೂಟಿವ್ ತನ್ನ ಟಾಕ್ಸಿಕ್ ಜಾಬ್ ಬಗ್ಗೆ ವಿವರಿಸಿದ್ದಾನೆ.
View this post on Instagram
ಹಾಗೆಯೇ ಕಂಪನಿಯಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದರೂ ಸ್ವಲ್ಪವೇ ವೇತನ ಹೆಚ್ಚಿಸಲಾಗಿದೆ. ನಮ್ಮ ಬಾಸ್ ನಮ್ಮನ್ನು ಅಗೌರವದಿಂದ ನೋಡುತ್ತಾರೆ. ಮಧ್ಯಮವರ್ಗದ ಕುಟುಂಬದಿಂದ ಬಂದ ನನಗೆ ಕೆಲಸ ತೊರೆಯುವುದು ಕಷ್ಟ ಎಂದು ಅನಿಕೇತ್ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್‌ನ ಭಾರತದ ಮುಖ್ಯಸ್ಥ ಸ್ಥಾನಕ್ಕೆ ಮೇರಿ ಕೋಮ್ ರಾಜೀನಾಮೆ
ಕೊನೆಗೂ ಕೆಲಸವನ್ನು ತೊರೆಯುವ ನಿರ್ಧಾರ ಮಾಡಿದ ಅನಿಕೇತ್ ಇದನ್ನು ವಿಭಿನ್ನವಾಗಿಸುವ ಪ್ರಯತ್ನ ಮಾಡಿದ್ದಾರೆ. ಭಗತ್ ತನ್ನ ಸ್ನೇಹಿತರೊಂದಿಗೆ ಡೋಲಿನೊಂದಿಗೆ ಅನಿಕೇತ್‌ನ ಕಚೇರಿಯ ಹೊರಗೆ ನಿಂತಿದ್ದು ಅನಿಕೇತ್ ತನ್ನ ಮ್ಯಾನೇಜರ್ ಕಛೇರಿಯಿಂದ ಹೊರಬರುತ್ತಿದ್ದಂತೆ, ಅವರ ಕೈ ಕುಲುಕಿಸಿ “ಕ್ಷಮಿಸಿ ಸರ್, ಬೈ-ಬೈ” ಎಂದು ಹೇಳಿ ಕುಣಿದಾಡಿದ್ದಾರೆ. ಆದರೆ ಆಕ್ರೋಶಗೊಂಡ ಮ್ಯಾನೇಜರ್ ಕೂಗಾಡಿದ್ದಾರೆ.
ಇನ್ನು ಸಣ್ಣ ವಯಸ್ಸಿನಲ್ಲಿಯೇ ಫಿಟ್ನೆಸ್ ತರಬೇತುದಾರರಾಗಲು ಬಯಸಿದ್ದ ಅನಿಕೇತ್‌ಗೆ ಸ್ನೇಹಿತರು ಶೂ ನೀಡಿದ್ದಾರೆ. ಈ ವಿಡಿಯೋ 70 ಸಾವಿರಕ್ಕೂ ಅಧಿಕ ಲೈಕ್ ಪಡೆದಿದೆ. ಇನ್ನು ಕೆಲವರು ಸಂಸ್ಥೆಯ ಹೆಸರು ಹೇಳಿ ಎಂದು ಕಾಮೆಂಟ್ ಮಾಡಿದ್ದಾರೆ.