ಡ್ರಗ್ಸ್ ದಂಯಲ್ಲಿ ಶಾಮೀಲಾಗಿದ್ದಾರೆ. ಮಾತ್ರವಲ್ಲದೆ, ಮಾದಕ ವಸ್ತುಗಳನ್ನು ಸಾಗಿಸಲು ಆ್ಯಂಬುಲೆನ್ಸ್ ಬಳಸಿದ್ದಾರೆ ಎಂಬ ಆರೋಪದ ಮೇಲೆ ಪಂಜಾಬ್‌ನ ಹಿರಿಯ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಪಂಜಾಬ್‌ನ ಹಿರಿಯ ಮಹಿಳಾ ಕಾನ್‌ಸ್ಟೇಬಲ್ ಅಮನ್‌ದೀಪ್ ಕೌರ್ ಅವರನ್ನು ಪಂಜಾಬ್ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಬಂಧಿಸಿದೆ. ಕೌರ್ ಅವರು 17.71 ಕೆ.ಜಿ ಹೆರಾಯಿನ್ಅನ್ನು ಸಾಗಿಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಪಂಜಾಬ್ ಸರ್ಕಾರವು ಮಾದಕ ದ್ರವ್ಯಗಳ ಮಾರಟ ಮತ್ತು ಬಳಕೆ ವಿರುದ್ಧ ‘ಯುದ್ಧ್ ನಶೇಯನ್ ವಿರುಧ್’ ಅಭಿಯಾನ ನಡೆಸುತ್ತಿದೆ. ಅದಕ್ಕಾಗಿ, ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಯನ್ನು ರಚಿಸಿದೆ. ಭಟಿಂಡಾ ಸಮೀಪದ ಬಾದಲ್ ಫ್ಲೈಓವರ್ ಬಳಿ ಕಾರ್ಯಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 17.71 ಕೆ.ಜಿ ಹೆರಾಯಿನ್‌ಅನ್ನು ವಶಕ್ಕೆ ಪಡೆಯಲಾಗಿದೆ. ಹೆರಾಯಿನ್‌ಅನ್ನು ಸಾಗಿಸುತ್ತಿದ್ದ ವಾಹನವು ಕೌರ್ ಅವರಿಗೆ ಸಂಬಂಧಿಸಿದ್ದಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
“ವಾಹನದ ಮಾಲೀಕರ ಗುರುತ ಪತ್ತೆ ಮಾಡಿದ ಬಳಿಕ, ಕೌರ್ ಅವರನ್ನು ಬಂಧಿಸಲಾಗಿದೆ. ಅವರ ಎಸ್‌ಯುವಿ, ಮಹೀಂದ್ರಾ ಥಾರ್ ಅನ್ನು ಕಾರ್ಯಪಡೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಹರ್ಬನ್ಸ್ ಸಿಂಗ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಸುಪ್ರೀಂ ಕೋರ್ಟ್ ತೀರ್ಪು ಮತ್ತು ‘ಬುಲ್ಡೋಜರ್ ನ್ಯಾಯ’: ದಂಡನೆಯ ಹೆಸರಿನಲ್ಲಿ ದ್ವೇಷ ಸಾಧನೆ
ಕಾನ್‌ಸ್ಟೆಬಲ್ ಕೌರ್ ವಿರುದ್ಧ ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಕೌರ್ ವಿರುದ್ಧ ಗುರ್ಮೀತ್ ಕೌರ್ ಎಂಬ ಮಹಿಳೆ ಹಲವು ಆರೋಪಗಳನ್ನು ಮಾಡಿದ್ದಾರೆ. “ಅಮನ್‌ದೀಪ್ ಕೌರ್ ಅವರು ತನ್ನ ಪತಿ ಬಲ್ವಿಂದರ್ ಸಿಂಗ್ ಅವರೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದಾರೆ. ತಮ್ಮ ಪತಿ ಆ್ಯಂಬುಲೆನ್ಸ್ ಚಾಲಕನಾಗಿದ್ದು, ಆ ಆ್ಯಂಬುಲೆನ್ಸ್‌ಅನ್ನು ಹೆರಾಯಿನ್ ಸಾಗಾಟಕ್ಕೆ ಬಳುತ್ತಾರೆ. ಕಾನ್ಸ್‌ಟೇಬರ್ ಆಗಿರುವ ಅಮನ್‌ದೀಪ್ ಕೌರ್ ಅವರು 2 ಕೋಟಿ ರೂ. ಮೌಲ್ಯದ ಮನೆ, ಕಾರುಗಳು ಮತ್ತು ಒಂದು ಲಕ್ಷ ಮೌಲ್ಯದ ಗಡಿಯಾರವನ್ನು ಹೊಂದಿದ್ದಾರೆ. ಇಷ್ಟು ಆಡಂಬರದ ಜೀವನ ನಡೆಸಲು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದ್ದಾರೆ.