ಪುಷ್ಪಾ 2 ಪ್ರದರ್ಶನದ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ನಟ ಅಲ್ಲು ಅರ್ಜುನ್ ತೆಲಂಗಾಣ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ.
ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಪ್ರೀಮಿಯರ್ ಶೋ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.
ಇದನ್ನು ಓದಿದ್ದೀರಾ? ಹೈದರಾಬಾದ್ | ಪುಷ್ಪಾ 2 ಪ್ರೀಮಿಯರ್ ವೇಳೆ ಕಾಲ್ತುಳಿತ; ಮಹಿಳೆ ಸಾವು, ಬಾಲಕ ಗಂಭೀರ
ಮಧ್ಯರಾತ್ರಿ ಪುಷ್ಪಾ 2 ಪ್ರೀಮಿಯರ್ ಪ್ರದರ್ಶನವಿತ್ತು. ಈ ವೇಳೆ ಥಿಯೇಟರ್‌ಗೆ ನಟ ಅಲ್ಲು ಅರ್ಜುನ್ ಆಗಮಿಸಿದ್ದಾರೆ. ನಾಯಕನನ್ನು ನೋಡುವ ತರಾತುರಿಯಲ್ಲಿ ಜನರು ಪ್ರವೇಶ ದ್ವಾರದತ್ತ ನುಗ್ಗಿದ್ದು ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ್ದರು. ಈ ಸಂಬಂಧ ನಟನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಎಫ್‌ಐಆರ್ ರದ್ದು ಕೋರಿ ಅಲ್ಲು ಅರ್ಜುನ್ ತೆಲಂಗಾಣ ಹೈಕೋರ್ಟ್ ಕದ ತಟ್ಟಿದ್ದಾರೆ. ಇನ್ನು ಬಂಧನ ಸೇರಿದಂತೆ ಎಲ್ಲಾ ಕಾನೂನು ಪ್ರಕ್ರಿಯೆಗಳಿಗೆ ತಡೆ ನೀಡುವಂತೆ ಅಲ್ಲು ಅರ್ಜುನ್ ತನ್ನ ಅರ್ಜಿಯಲ್ಲಿ ವಿನಂತಿಸಿದ್ದಾರೆ.
Woman killed, son Injured in a stampede At 'Pushpa 2' screening in Hyderabad. Chaos erupted outside the theatre when fans surged to see the actor @alluarjun According to police, the theatre's main gate collapsed under the pressure of the crowd.#AlluArjun #Pushpa2… pic.twitter.com/eiTSiOAtxn
— Payal Mohindra (@payal_mohindra) December 5, 2024
ಘಟನೆ ವೇಳೆ ನಟ ರಂಗಮಂದಿರ ಒಳಗಿದ್ದ ಕಾರಣ ನಟನಿಗೆ ಹೊರಗೆ ಏನು ನಡೆಯುತ್ತಿದೆ ಎಂದು ತಿಳಿದಿರಲಿಲ್ಲ ಎಂದು ಅಲ್ಲು ಪರ ವಕೀಲರು ವಾದಿಸಿದ್ದಾರೆ. ಹಾಗೆಯೇ ಯಾವುದೇ ಅವಘಡ ತಪ್ಪಿಸಲು ಸಿನಿಮಾ ತಂಡವು ಥಿಯೇಟರ್ ಆಡಳಿತ ಮತ್ತು ಸಹಾಯಕ ಪೊಲೀಸ್ ಆಯುಕ್ತರಿಗೆ ನಟನ ಆಗಮನದ ಬಗ್ಗೆ ಮಾಹಿತಿ ನೀಡಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ‘ಪುಷ್ಪಾ-2’ ನಟನೆಗಾಗಿ ಅಲ್ಲು ಅರ್ಜುನ್‌ಗೆ 300 ಕೋಟಿ ರೂ. ಸಂಭಾವನೆ; ರಶ್ಮಿಕಾ ಪಡೆದದ್ದೆಷ್ಟು?
ಇನ್ನು ಥಿಯೇಟರ್ ಆಡಳಿತವು ಇದನ್ನು ದೃಢಪಡಿಸಿದೆ. ಹೆಚ್ಚಿನ ಜನರು ಬರುವ ಕಾರಣ ಜನರ ನಿಯಂತ್ರಣಕ್ಕಾಗಿ ಹೆಚ್ಚುವರಿ ಪೊಲೀಸರು ನಿಯೋಜಿಸುವಂತೆ ಮನವಿ ಮಾಡಲಾಗಿದೆ. ಆದರೆ ಸೀಮಿತ ಸಂಖ್ಯೆಯ ಅಧಿಕಾರಿಗಳನ್ನು ಮಾತ್ರ ನಿಯೋಜಿಸಲಾಗಿದೆ ಎಂದು ಅಲ್ಲು ಪರ ವಕೀಲರು ಹೇಳಿದ್ದಾರೆ.
ರೇವತಿ ಪತಿ ನೀಡಿದ ದೂರಿನ ಆಧಾರದ ಮೇಲೆ ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್ ಮತ್ತು ಭದ್ರತಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
