ಪುಷ್ಪಾ 2 ಸಿನಿಮಾದ ಪ್ರೀಮಿಯರ್ ಶೋ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಬಾಲಕನ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ ಮತ್ತು ಪುಷ್ಪಾ 2 ಸಿನಿಮಾದ ನಿರ್ಮಾಪಕರು 2 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಅಲ್ಲು ಅರ್ಜುನ್ 1 ಕೋಟಿ ರೂಪಾಯಿ, ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ತಲಾ 50 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಈ ಕಾಲ್ತುಳಿತದಲ್ಲಿ ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ. ಓರ್ವ ಬಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಬಾಲಕನನ್ನು ಭೇಟಿಯಾದ ಬಳಿಕ ಚಿತ್ರ ನಿರ್ಮಾಪಕ ಮತ್ತು ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಪುಷ್ಪಾ 2 ಕಾಲ್ತುಳಿತ ಪ್ರಕರಣ | ನಟ ಅಲ್ಲು ಅರ್ಜುನ್‌ಗೆ ಸಮನ್ಸ್
“ವೈದ್ಯರೊಂದಿಗೆ ಮಾತನಾಡಿದ ಬಳಿಕ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದು ಬಂದಿದ್ದು ನಮಗೆ ತುಂಬಾ ಸಂತೋಷವಾಗಿದೆ. ಬಾಲಕ ಮತ್ತು ಕುಟುಂಬವನ್ನು ಬೆಂಬಲಿಸಲು ನಾವು 2 ಕೋಟಿ ರೂಪಾಯಿಗಳನ್ನು ನೀಡಲು ನಿರ್ಧರಿಸಿದ್ದೇವೆ. ಅಲ್ಲು ಅರ್ಜುನ್ ಒಂದು ಕೋಟಿ ರೂಪಾಯಿ, ನಿರ್ಮಾಪಕರು 50 ಲಕ್ಷ ರೂಪಾಯಿ ಮತ್ತು ನಿರ್ದೇಶಕರು 50 ಲಕ್ಷ ರೂಪಾಯಿ ನೀಡಿದ್ದಾರೆ. ಈ ಮೊತ್ತವನ್ನು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ದಿಲ್ ರಾಜು ಅವರಿಗೆ ಹಸ್ತಾಂತರಿಸಲಾಗುತ್ತಿದೆ” ಎಂದು ತಿಳಿಸಿದರು.
ಡಿಸೆಂಬರ್ 4ರಂದು ‘ಪುಷ್ಪಾ-2’ ಚಿತ್ರದ ಪ್ರದರ್ಶನದ ವೇಳೆ ನಟ ಅಲ್ಲು ಅರ್ಜುನ್ ಹೈದಾರಾಬಾದ್‌ನ ಸಂಧ್ಯಾ ಥಿಯೇಟರ್‌ಗೆ ಬಂದಿದ್ದು ಈ ವೇಳೆ ಕಾಲ್ತುಳಿತ ಉಂಟಾಗಿದೆ. ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದರೆ, ಎಂಟು ವರ್ಷ ಬಾಲಕ ಇನ್ನೂ ಚೇತರಿಸಿಕೊಂಡಿಲ್ಲ. ಆಮ್ಲಜನಕ ಮತ್ತು ವೆಂಟಿಲೇಟರ್ ಬೆಂಬಲದಲ್ಲಿದ್ದಾನೆ ಎಂದು ಬಾಲಕನ ತಂದೆ ಭಾಸ್ಕರ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅಲ್ಲು ಅರ್ಜುನ್ ಕೇಸಿನಲ್ಲಿ ಭಾರೀ ಅನಿರೀಕ್ಷಿತ ತಿರುವು!
ಇನ್ನು ಈಗಾಗಲೇ ಅಲ್ಲು ಅರ್ಜುನ್ ಅವರು ಬಾಲಕನ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ಚೆಕ್ ನೀಡಿದ್ದರು. ಹಾಗೆಯೇ ಭಾಸ್ಕರ್ ದೂರನ್ನು ಕೂಡಾ ಹಿಂಪಡೆದಿದ್ದಾರೆ. “ಘಟನೆಯ ಮರುದಿನ ಅಲ್ಲು ಅರ್ಜುನ್ ಸಿಬ್ಬಂದಿಯಿಂದ ನನಗೆ ಬೆಂಬಲ ಸಿಕ್ಕಿತು, ನನ್ನ ಮೇಲೆ ಯಾವುದೇ ಒತ್ತಡವಿಲ್ಲ” ಎಂದು ಭಾಸ್ಕರ್ ಹೇಳಿಕೊಂಡಿದ್ದಾರೆ.
#WATCH | Hyderabad | After meeting the child injured in the Sandhya Theatre incident during the premier show of 'Pushpa 2', Film Producer and Actor Allu Arjun’s father Allu Aravind says, “…After speaking to the doctors, we are very happy to know that the boy is recovering… To… pic.twitter.com/DnvTlDP99u
— ANI (@ANI) December 25, 2024
ಇನ್ನು ಇನ್ನೋರ್ವ ಬಾಲಕ ಶ್ರೀತೇಜ್ ಆರೋಗ್ಯ ಸುಧಾರಿಸಿದೆ. ವೆಂಟಿಲೇಟರ್ ಬೆಂಬಲವಿಲ್ಲದೆಯೇ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮಂಗಳವಾರ ಹೇಳಿದೆ.
