ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಸದ್ಯದಲ್ಲಿಯೇ ವೆಂಕಟದತ್ತ ಸಾಯಿ ಅವರನ್ನು ಮದುವೆಯಾಗಲಿದ್ದಾರೆ. ವಿವಾಹದ ನಂತರ ಜನವರಿಯಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಸ್ಪರ್ಧೆಗಳಿಗೆ ಹಿಂತಿರುಗಲಿದ್ದಾರೆ ಸಿಂಧು.
ವೆಂಕಟದತ್ತ ಸಾಯಿ ಅವರು ಐಪಿಎಲ್ ತಂಡವನ್ನು ಮ್ಯಾನೇಜ್ ಮಾಡಿದ್ದವರು. ಹೈದರಾಬಾದ್ ನ ಖಾಸಗಿ ಕಂಪನಿಯೊಂದರ ನಿರ್ವಾಹಕ ನಿರ್ದೇಶಕ. ಹಣಕಾಸು,ಡೇಟಾ ಸೈನ್ಸ್ ಹಾಗೂ ಅಸೆಟ್ ಮ್ಯಾನೇಜ್ಮೆಂಟ್ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ವ್ಯಕ್ತಿ.
2018ರಲ್ಲಿ ಪದವಿ ಗಳಿಸಿರುವಾತ. ಬೆಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಯೊಂದರಲ್ಲಿ ಡೇಟಾ ಸೈನ್ಸ್ ಮತ್ತು ಮಶೀನ್ ಲರ್ನಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಸಿಂಧು ಒಲಿಂಪಿಕ್ಸ್ ಪದಕಗಳ ವಿಜೇತೆ.