ಆರ್‌ಎಸ್‌ಎಸ್ ಮತ್ತು ಸಿಪಿಐಎಂ ಎರಡೂ ಒಂದೇ ಎಂಬ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಎಡಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇಂಡಿಯಾ ಒಕ್ಕೂಟದಲ್ಲಿ ಅಸಮಾಧಾನ ಸೃಷ್ಟಿಯಾಗಿದೆ. ರಾಹುಲ್ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಬೇಕು, ವಿಭಜನೆಗಳನ್ನು ಸೃಷ್ಟಿಸಬಾರದು ಎಂದು ಭಾನುವಾರ, ಸಿಪಿಐ(ಎಂ) ರಾಜ್ಯಸಭೆಯ ಸದನದ ನಾಯಕ ಜಾನ್ ಬ್ರಿಟ್ಟಾಸ್ ಹೇಳಿದ್ದಾರೆ.
ಇನ್ನು ರಾಹುಲ್ ಹೇಳಿಕೆ ವಿರುದ್ಧ ಸಿಪಿಐ ನಾಯಕ ಪಿ. ಸಂದೋಷ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಹುಲ್ ಅವರ ಹೆಚ್ಚಿನ ತಂಡ ಬಿಜೆಪಿಯನ್ನು ಸೇರಿದೆ. ಹಾಗಾಗಿ ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಅವರು ಕೇಡರ್‌ಗಳ ಪ್ರಮುಖ ಪೂರೈಕೆದಾರರು ಎಂದು ಪರಿಗಣಿಸಬಹುದು. ಆದ್ದರಿಂದ ಎಡ ಮತ್ತು ಆರ್‌ಎಸ್‌ಎಸ್ ಅನ್ನು ಹೋಲಿಸಬೇಡಿ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಸಿಪಿಐ(ಎಂ)ಗೆ ಎಂ ಎ ಬೇಬಿ ಸಾರಥ್ಯ; ಪಕ್ಷವನ್ನು ತಳಮಟ್ಟದಿಂದ ಕಟ್ಟುವರೇ?
ಕಳೆದ ಶುಕ್ರವಾರ ಕೇರಳದಲ್ಲಿ ರಾಹುಲ್ ಗಾಂಧಿ ಅವರು ಆರ್‌ಎಸ್‌ಎಸ್ ಮತ್ತು ಸಿಪಿಐ(ಎಂ) ಎರಡೂ “ಜನರ ಬಗ್ಗೆ ಯಾವುದೇ ಭಾವನೆಗಳನ್ನು ಹೊಂದಿಲ್ಲ” ಎಂದು ಹೇಳಿದ್ದರು. ಈ ಹೇಳಿಕೆಯನ್ನು ಸಿಪಿಐಎಂ ಖಂಡಿಸಿದ್ದು, ಈ ಹೇಳಿಕೆ ಅಸಂಬದ್ಧ ಎಂದಿದೆ. ಕಾಂಗ್ರೆಸ್ ಮತ್ತು ಸಿಪಿಐಎಂ ಇಂಡಿಯಾ ಬಣಕ್ಕೆ ಸೇರಿದ್ದರೂ ಕೇರಳದಲ್ಲಿ ಪರಸ್ಪರ ವಿರುದ್ದವಾಗಿ ಸ್ಪರ್ಧಿಸುತ್ತದೆ.
The Congress party in Kerala seems determined to keep Rahul Gandhi politically naïve. He and his sister chose Kerala as their staging ground for their so-called full-frontal attack on the RSS – launched from the safe zone of Wayanad, a bastion of their coalition partner Indian… pic.twitter.com/6ejBAznSDi
— John Brittas (@JohnBrittas) July 19, 2025
ರಾಹುಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬ್ರಿಟ್ಟಾಸ್, “ಜಾತ್ಯತೀತ ಶಕ್ತಿಗಳ ನಡುವೆ ಗೊಂದಲ ಮತ್ತು ವಿಭಜನೆಯನ್ನು ಸೃಷ್ಟಿಸುವ ಬದಲು ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸುವುದು ಲೋಕಸಭೆ ವಿಪಕ್ಷ ನಾಯಕರ ಮುಖ್ಯ ಕೆಲಸವಾಗರಬೇಕು. ಗೋಡೆಯ ಮೇಲಿನ ಬರವಣಿಯನ್ನು ಅರ್ಥಮಾಡಿಕೊಳ್ಳುವಷ್ಟು ಅವರು ಪ್ರಬುದ್ಧರಾಗಿದ್ದಾರೆ ಎಂದು ನಾವು ಭಾವಿಸುತ್ತೇವೆ. ಕಾಂಗ್ರೆಸ್‌ನ ರಾಜ್ಯ ಘಟಕವು ವಾಸ್ತವವಾಗಿ ರಾಷ್ಟ್ರೀಯ ಕಾಂಗ್ರೆಸ್‌ನ ಭಾಗವಲ್ಲ. ಅವರು ಕೇರಳದಲ್ಲಿ ಬಿಜೆಪಿ ಮೈತ್ರಿಕೂಟದ ಭಾಗವಾಗಿದ್ದಾರೆ” ಎಂದು ದೂರಿದರು.
ಇನ್ನು ಸಿಪಿಐ ನಾಯಕ ಸಂದೋಷ್ ಕುಮಾರ್, “ರಾಹುಲ್ ಇಂಡಿಯಾ ಒಕ್ಕೂಟದ ನಾಯಕರಾಗಿರುವ ಕಾರಣ ಸ್ವಲ್ಪ ಮಟ್ಟಿಗೆ ಪ್ರಬುದ್ಧತೆಯನ್ನು ತೋರಿಸಬೇಕು. ಯಾವುದೇ ಸಂವೇದನಾಶೀಲ ವ್ಯಕ್ತಿ ಆರ್‌ಎಸ್‌ಎಸ್ ಅನ್ನು ಎಡ ಪಕ್ಷಗಳೊಂದಿಗೆ ಹೋಲಿಸಲು ಸಾಧ್ಯವಿಲ್ಲ. ರಾಹುಲ್ ಅವರು ಮಾತನಾಡುವಾಗಲೆಲ್ಲಾ ಅವರು ಯಾವಾಗಲೂ ಸ್ವಲ್ಪ ಮಟ್ಟಿಗೆ ಅಪ್ರಬುದ್ಧರು ಎಂಬುದನ್ನು ತೋರಿಸುತ್ತದೆ. ರಾಹುಲ್ ಅವರಿಗೆ ಕಾಂಗ್ರೆಸ್ ಸಲಹೆ ನೀಡಬೇಕು” ಎಂದು ಹೇಳಿದ್ದಾರೆ.
ಇನ್ನು ಎಡಪಕ್ಷ ನಾಯಕರು ಮತ್ತು ರಾಹುಲ್ ಇಂಡಿಯಾ ನಾಯಕರ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿದ್ದರೂ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಈ ವಿಷಯವನ್ನು ಪ್ರಸ್ತಾಪಿಸಿಲ್ಲ. ಆದರೆ ಸಿಪಿಐ ನಾಯಕ ಡಿ.ರಾಜಾ ಅವರು ರಾಹುಲ್ ಹೆಸರು ಉಲ್ಲೇಖಿಸದೆಯೇ “ಯಾರೂ ಎಡ ಮತ್ತು ಆರ್‌ಎಸ್‌ಎಸ್ ಅನ್ನು ಹೋಲಿಸಬಾರದು” ಎಂದು ಹೇಳಿದ್ದಾರೆ ಎನ್ನಲಾಗಿದೆ.
