ಮಹಿಳೆಯೊಬ್ಬರ ಮೇಲೆ ಕಾಮುಕ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ತನ್ನ ಸಹಚರನ ಜೊತೆ ಸೇರಿ ಅತ್ಯಾಚಾರ ಎಸಗಿರುವ ಅಮಾನಷ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಉದ್ಯಮಿ ಜನಾರ್ಧನ್ ಮತ್ತು ಆತನ ಸಂಗಡಿಗ ಸಂಗ ರೆಡ್ಡಿ ಮಹಿಳೆಗೆ ಮಂಪುರ ಬರುವ ಔಷಧಿ ನೀಡಿ, ಕಾರಿನಲ್ಲಿ ಅತ್ಯಾಚಾರ ಎಸಿಗಿದ್ದಾರೆ ಎಂದು ವರದಿಯಾಗಿದೆ. ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.
“ಜಾಗವೊಂದರ ವಿಚಾರವಾಗಿ ಮಿಯಾಪುರಕ್ಕೆ ಹೋಗಿದ್ದೆ, ಅಲ್ಲಿಂದ ಯಾದಗಿರಿಗುಟ್ಟಕ್ಕೆ ಹೋಗಲು ಆರೋಪಿಗಳಿಬ್ಬರು ತಮ್ಮನ್ನು ಕಾರಿನಲ್ಲಿ ಕರೆದೊಯ್ದಿದ್ದರು. ರಾತ್ರಿ ಮರಳಿ ಬರುವಾಗ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರ ಬಳಿ ನಿಲ್ಲಿಸಿ, ಕಾರು ಕಟ್ಟಿದೆ ಎಂದರು. ಕುಡಿಯಲು ತಂಪು ಪಾನೀಯ ಕೊಟ್ಟು. ಅದನ್ನು ಕುಡಿದ ಬಳಿಕ, ತಲೆ ತಿರುಗಲು ಶುರುವಾಗಿತ್ತು” ಎಂದು ದೂರಿನಲ್ಲಿ ಸಂತ್ರಸ್ತೆ ವಿವರಿಸಿದ್ದಾರೆ.
“ನನಗೆ ಮಂಪರು ಕವಿದಂತಾದ ಸಮಯವನ್ನು ದುರ್ಬಳಕೆ ಮಾಡಿಕೊಂಡ ಆರೋಪಿಗಳನ್ನು ಕಾರಿನಲ್ಲಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ, ಥಳಿಸಿ ಮಿಯಾಪುರಕ್ಕೆ ಬಿಟ್ಟು, ಪರಾರಿಯಾಗಿದ್ದಾರೆ” ಎಂದು ಸಂತ್ರಸ್ತೆ ಹೇಳಿದ್ದಾರೆ.
ಸಂತ್ರಸ್ತೆ ದೂರಿನ ಆಧಾರದ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.