ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಉದ್ಯಮಿ ರತನ್ ಟಾಟಾ ಅವರು ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ರಾಜ್ಯಕಾರಣಗಳು, ನಟ-ನಟಿಯರು, ಉದ್ಯಮಿಗಳು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಮದುವೆಯಾಗದೆ, ಅವಿವಾಹಿತ ಜೀವನ ನಡೆಸುತ್ತಿದ್ದ ಟಾಟಾ ಅವರು ನಿಧನರಾದ ಬೆನ್ನಲ್ಲೇ, ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ರತನ್ ಟಾಟಾ ಅವರ ತಂದೆ ನವಲ್ ಟಾಟಾ ಅವರಿಗೆ ಇಬ್ಬರು ಪತ್ನಿಯರಿದ್ದರು. ಅವರಲ್ಲಿ, ಮೊದಲ ಪತ್ನಿಯ ಮಕ್ಕಳು ರತನ್ ಟಾಟಾ ಮತ್ತು ಜಿಮ್ಮಿ ಟಾಟಾ ಹಾಗೂ ಎರಡನೇ ಪತ್ನಿಯ ಮಕ್ಕಳು ನೋಹಲ್ ಟಾಟಾ. ಹೀಗಾಗಿ, ರತನ್ ಟಾಟಾ ಅವರ ಉದ್ಯಮವನ್ನು ಜಿಮ್ಮಿ ಟಾಟಾ ಅಥವಾ ನೋಯಲ್ ಟಾಟಾ ಅವರ ಮಕ್ಕಳು ಮುನ್ನಡೆಸಬೇಕು ಎಂಬ ಪ್ರಸ್ತಾವಿದೆ ಎಂದು ತಿಳಿದುಬಂದಿದೆ.
ಆದರೆ, ಜಿಮ್ಮಿ ಟಾಟಾ ಅವರಿಗೆ ಉದ್ಯಮದಲ್ಲಿ ಆಸಕ್ತಿ ಇಲ್ಲದ ಕಾರಣ, ನೋಯಲ್ ಟಾಟಾ ಅವರ ಮಕ್ಕಳು ಟಾಟಾ ಉದ್ಯಮವನ್ನು ಮುನ್ನಡೆಸಬಹುದು. ಆಥವಾ ಟಾಟಾ ಅವರು ಕಟ್ಟಿದ್ದ ‘ಟ್ರಸ್ಟ್’ ಟಾಟಾ ಉದ್ಯಮವನ್ನು ಮುನ್ನಡೆಸಬಹುದು ಎಂದೂ ಹೇಳಲಾಗುತ್ತಿದೆ.
ಈ ವರದಿ ಓದಿದ್ದೀರಾ?: ಮಧ್ಯಮ ವರ್ಗದವರ ಕನಸು ನನಸು – ಮುಚ್ಚುವಂತಹ ಸ್ಥಿತಿಯಲ್ಲಿದ್ದ ಸಂಸ್ಥೆ ಲಾಭದೆಡೆಗೆ; ರತನ್ ಟಾಟಾ ವಿಶಿಷ್ಟ ಸಾಧನೆಗಳು
ನೋಯೆಲ್ ಟಾಟಾ ಅವರ ಮಕ್ಕಳಲ್ಲಿ ಹಿರಿಯರಾದ ಲೇಹ್ ಟಾಟಾ ಅವರು ಟಾಟಾ ಸಮೂಹದ ‘ತಾಜ್ ಹೋಟೆಲ್ಸ್ ರೆಸಾರ್ಟ್ಸ್ ಅಂಡ್ ಪ್ಯಾಲೆಸ್’ನ ಸಹಾಯಕ ಮಾರಾಟ ವ್ಯವಸ್ಥಾಪಕರಾಗಿದ್ದಾರೆ. ಜೊತೆಗೆ ‘ದಿ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್’ (ಐಎಚ್‌ಸಿಎಲ್) ಉಪಾಧ್ಯಕ್ಷರೂ ಆಗಿದ್ದಾರೆ.
ಕಿರಿಯ ಪುತ್ರಿ ಮಾಯಾ ಅವರು ಟಾಟಾ ಸಮೂಹದ ಹಣಕಾಸು ಸೇವಾ ಕಂಪನಿ ‘ಟಾಟಾ ಕ್ಯಾಪಿಟಲ್ಸ್’ನಲ್ಲಿ ವಿಶ್ಲೇಷಕರಾಗಿದ್ದಾರೆ. ಅವರ ಪುತ್ರ ನೆವಿಲ್ಲೆ ಟಾಟಾ ಸಮೂಹದ ರೀಟೆಲ್ ವ್ಯವಹಾರದ ಕಂಪನಿ ‘ಟ್ರೆಂಟ್’ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.