ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸತತ 9ನೇ ಬಾರಿ ರೆಪೋ ದರ (ಬಡ್ಡಿದರ) ಸ್ಥಿರವಾಗಿರಿಸಿದ್ದು ರೆಪೋ ದರ ಶೇಕಡ 6.5ರಲ್ಲಿ ಮುಂದುವರಿಯಲಿದೆ.
ಆಗಸ್ಟ್ 6ರಿಂದ ನಡೆದ ಹಣಕಾಸು ನೀತಿ ಸಮಿತಿ(ಎಂಪಿಸಿ) ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು (ಆಗಸ್ಟ್ 8) ಪ್ರಕಟಿಸಿದರು.
ಇದನ್ನು ಓದಿದ್ದೀರಾ? ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ: ಶೇ.6.5 ಮುಂದುವರಿಕೆ
ಆರ್‌ಬಿಐ 2023ರ ಫೆಬ್ರವರಿಯಲ್ಲಿ ಬಡ್ಡಿದರ ಮೇಲೆ ಪ್ರಭಾವ ಬೀರುವ ರೆಪೋ ದರವನ್ನು 25 ಮೂಲಾಂಕ ಏರಿಸಿದ್ದು ದರವು ಶೇಕಡ 6.5ಕ್ಕೆ ತಲುಪಿದೆ. ಅದಾದ ಬಳಿಕ ಆರ್‌ಬಿಐ ನಿರಂತರವಾಗಿ ಬಡ್ಡಿದರವನ್ನು ಸ್ಥಿರವಾಗಿರಿಸಿದೆ.
ಸತತವಾಗಿ 10 ಬಾರಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಆರ್‌ಬಿಐ ಹಣದುಬ್ಬರದ ನಡುವೆ 2022ರ ಮೇ ತಿಂಗಳಿನಿಂದ ನಿರಂತರವಾಗಿ ಆರು ಬಾರಿ ರೆಪೋ ದರ ಪರಿಷ್ಕರಿಸಿತ್ತು. ಇದರಿಂದಾಗಿ 2022ರಲ್ಲಿ ಶೇಕಡ 3.35ರಷ್ಟಿದ್ದ ರೆಪೋ ದರ ಶೇಕಡ 6.50ಕ್ಕೆ ಏರಿಕೆಯಾಗಿದೆ.
RBI’s Monetary Policy Committee decided to maintain the status quo, Repo Rate kept unchanged at 6.50%: RBI Governor Shaktikanta Das pic.twitter.com/56Npvugx2F
— ANI (@ANI) August 8, 2024