RCBಯದ್ದು ಕಳ್ಳ ಒಪ್ಪಂದ; ಆರ್‌ ಅಶ್ವಿನ್ ಬಹಿರಂಗ ಟೀಕೆ

Date:

Advertisements

2025ರ ಐಪಿಎಲ್‌ ಟೂರ್ನಿಗಾಗಿ ನಡೆದ ಮೆಗಾ ಹರಾಜಿನ ಸಮಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟಿಮ್ ಡೇವಿಡ್‌ ಅವರನ್ನು ಬಿಡ್‌ ಮಾಡುವಂತೆ ಐಪಿಎಲ್‌ ತಂಡಗಳಿಗೆ ಸಲಹೆ ನೀಡಿದ್ದೆ. ಆದರೆ, ನನ್ನ ಸಲಹೆಯನ್ನು ಎಲ್ಲ ತಂಡಗಳು ನಿರ್ಲಕ್ಷಿಸಿದವು. ಟಿಮ್ ಡೇವಿಡ್ ಅವರನ್ನು ಆರ್‌ಸಿಬಿ ಕೇವಲ3 ಕೋಟಿ ರೂ.ಗೆ ಖರೀದಿಸಿತು. ಇದು ಆರ್‌ಸಿಬಿಯ ಕಳ್ಳ ಒಪ್ಪಂದ ಎಂದು ಭಾರತ ಕ್ರಿಕೆಟ್‌ ತಂಡ ಮಾಜಿ ಆಲ್‌ರೌಂಡರ್‌ ಆರ್‌ ಅಶ್ಚಿನ್ ಆರೋಪಿಸಿದ್ದಾರೆ.

2024ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದ ಟಿಮ್‌ ಡೇವಿಡ್ ಅವರನ್ನು 2025ರ ಟೂರ್ನಿಯಲ್ಲಿ ತಂಡ ಕೈಬಿಟ್ಟಿತ್ತು. ಬ್ಯಾಟಿಂಗ್‌ನಲ್ಲಿ ಪ್ರಬಲ ಹೊಡೆತಗಳ ಪ್ರದರ್ಶನ ನೀಡುವ ಟಿಮ್ ಡೇವಿಡ್‌ಅನ್ನು ಮೆಗಾ ಹರಾಜಿನಲ್ಲಿ ಖರೀದಿಸಲು ಯಾವುದೇ ತಂಡವು ಬಿಡ್‌ ಮಾಡಲು ಮುಂದೆ ಬರಲಿಲ್ಲ. ಅವರನ್ನುಆರ್‌ಸಿಬಿ ಪ್ರಾಂಚೈಸಿ ಕೇವಲ 3 ಕೋಟಿ ರೂ.ಗೆ ಖರೀದಿಸಿ, ತಂಡಕ್ಕೆ ಸೇರಿಸಿಕೊಂಡಿತು.

ಟಿಮ್‌ ಡೇವಿಡ್‌ ಆಯ್ಕೆಯು ಆರ್‌ಸಿಬಿಗೆ ಗೆಮ್‌ ಚೇಂಜರ್‌ ಆಗಿ ಪರಿಣಮಿಸಿತು. ಆರ್‌ಸಿಬಿಯ ಚೊಚ್ಚಲ ಕಪ್ ಗೆಲ್ಲುವಲ್ಲಿ ಡೇವಿಡ್ ನಿರ್ಣಾಯಕ ಪಾತ್ರ ವಹಿಸಿದರು. ಐಪಿಎಲ್-2025ರ ಸೀಸನ್‌ನಲ್ಲಿ ಡೇವಿಡ್‌ 12 ಪಂದ್ಯಗಳನ್ನು ಆಡಿ, 185.15ರ ಅದ್ಭುತ ಸ್ಟ್ರೈಕ್ ರೇಟ್‌ನೊಂದಿಗೆ 187 ರನ್ ಗಳಿಸಿದರು.

Advertisements

ಡೇವಿಡ್‌ ಖರೀದಿಯ ಬಗ್ಗೆ 2025ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಪರವಾಗಿ ಆಡಿದ್ದ ಆರ್‌ ಅಶ್ವಿನ್ ಮಾತನಾಡಿದ್ದಾರೆ. ಹರಾಜಿನ ಸಮಯದಲ್ಲಿ ಡೇವಿಡ್ ಅವರನ್ನು ಬಿಡ್ ಮಾಡಲು ಎಲ್ಲ ತಂಡಗಳಿಗೆ ಸಲಹೆ ನೀಡಿದದ್ದೆ. ಆದರೆ, ಯಾರೂ ಅವರನ್ನು ಖರೀದಿಸಲಿಲ್ಲ ಎಂದು ಹೇಳಿದ್ದಾರೆ. ಆರ್‌ಸಿಬಿಯ ನಡೆಯನ್ನು ‘ಕಳ್ಳ ಒಪ್ಪಂದ’ ಎಂದು ಬಣ್ಣಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಕ್ಯೂಬಾ ಕ್ರಾಂತಿಯ ಕಿಡಿ, ಬಂಡವಾಳಿಗರ ದುಸ್ವಪ್ನ ಫಿಡೆಲ್ ಕ್ಯಾಸ್ಟ್ರೋ

“ನಾನು ಇದನ್ನು ಹೇಳಬಾರದು. ಆದರೆ, ಕೆಲವು ಐಪಿಎಲ್ ತಂಡಗಳಲ್ಲಿ ನಿರ್ಧಾರ ತೆಗೆದುಕೊಳ್ಳುವವರಿಗೆ ಡೇವಿಡ್‌ ಅವರನ್ನು ಆಯ್ಕೆ ಮಾಡಲು ಸಲಹೆ ನೀಡಿದ್ದೆ. ಆದರೆ, ಅವರೆಲ್ಲರೂ ‘ಇಲ್ಲ, ಅವರ ಆಟ ತೀವ್ರವಾಗಿ ಕುಸಿದಿದೆ’ ಎಂಬುದಾಗಿ ಹೇಳಿದರು. ಬಿಡ್‌ನಿಂದ ಹಿಂದೆ ಸರಿದರು” ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಶ್ವಿನ್ ಹೇಳಿದ್ದಾರೆ.

“ಟಿ20 ಕ್ರಿಕೆಟ್‌ನ ಭವಿಷ್ಯವು ಬಲವಾದ ಮೈಕಟ್ಟು ಹೊಂದಿರುವ ಎತ್ತರದ ಬ್ಯಾಟ್ಸ್‌ಮನ್‌ಗಳ ಮೇಲೆ ಅವಲಂಬಿತವಾಗುತ್ತಿದೆ. ವೈಡ್ ಲೈನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ತರದಿದ್ದರೆ, ಟಿ20 ಕ್ರಿಕೆಟ್‌ನಲ್ಲಿ ಅವರು ಮೇಲುಗೈ ಸಾಧಿಸಲಿದ್ದಾರೆ. ಮೂಲ ಬೆಲೆಗೆ (3 ಕೋಟಿ ರೂ.) ಖರೀದಿಯಾದ ಡೇವಿಡ್‌ ಅವರು ಆರ್‌ಸಿಬಿಯ ಆಟವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದಿದ್ದಾರೆ. ಆರ್‌ಸಿಬಿಯ ನಡೆ ನಿಜವಾಗಿಯೂ ಕಳ್ಳತನ” ಎಂದು ಅವರು ಹೇಳಿದ್ದಾರೆ.

ಜೂನ್ 3ರಂದು ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ಅನ್ನು ಸೋಲಿಸಿ, ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿಯನ್ನು ಗೆದ್ದಿತು. 191 ರನ್‌ಗಳ ಬೆನ್ನಟ್ಟಿದ ಪಂಜಾಬ್ ತಂಡವು ಕೇವಲ ಆರು ರನ್‌ಗಳಿಂದ ಸೋಲುಂಡಿತು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ದೆಹಲಿಯ 50ಕ್ಕೂ ಹೆಚ್ಚು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

ದೆಹಲಿಯ 50ಕ್ಕೂ ಅಧಿಕ ಶಾಲೆಗಳಿಗೆ ಬುಧವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ...

ಮುಂಬೈ | ಭಾರೀ ಮಳೆಗೆ ಹಳಿಯಲ್ಲೇ ಸಿಲುಕಿದ ಎರಡು ಮೊನೋ ರೈಲು: 782 ಪ್ರಯಾಣಿಕರ ರಕ್ಷಣೆ

ಮುಂಬೈನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಎಲ್ಲೆಡೆ ನೀರು ತುಂಬಿದೆ, ಸಂಚಾರ ಅಸ್ತವ್ಯಸ್ತವಾಗಿದೆ....

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

Download Eedina App Android / iOS

X