ನ.1ರಿಂದ GST ವಿನಾಯಿತಿ ಸಡಿಲಿಕೆ; ಉದ್ದೇಶಿತ ಬದಲಾವಣೆಗಳೇನು?

Date:

ಸಣ್ಣ ಇ-ಕಾಮರ್ಸ್ ಮಾರಾಟಗಾರರಿಗೆ GST ನೋಂದಣಿ ಸರಳಗೊಳಿಸುವುದು, ತೆರಿಗೆ ಮರುಪಾವತಿಯನ್ನು ತ್ವರಿತಗೊಳಿಸುವುದು ಹಾಗೂ ದಾಖಲೆಗಳ ಸಲ್ಲಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಸೇರಿದಂತೆ ಹಲವು ಸುಧಾರಣೆಗಳು ಇದೇ ನವೆಂಬರ್‌ 1 ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ.

- Advertisement -

ಅಕ್ಟೋಬರ್ 8ರಂದು ನಡೆದ 57ನೇ GST ಮಂಡಳಿ ಸಭೆಯಲ್ಲಿ ಈ ಸುಧಾರಣೆಗಳಿಗೆ ಅನುಮೋದನೆ ನೀಡಲಾಗಿದ್ದು, ಹಂತ ಹಂತವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಆಡಳಿತಾತ್ಮಕ ಕ್ರಮಗಳ ಮೂಲಕ ಅನುಷ್ಠಾನಗೊಳಿಸಬಹುದಾದ ಸುಧಾರಣೆಗಳು 2026ರ ನವೆಂಬರ್ 1ರಿಂದ ಜಾರಿಗೆ ಬರುವ ಸಾಧ್ಯತೆಯಿದೆ. GST ಕಾಯ್ದೆಗೆ ತಿದ್ದುಪಡಿ ಅಗತ್ಯವಿರುವ ಕ್ರಮಗಳನ್ನು 2027ರ ಏಪ್ರಿಲ್ 1ರಿಂದ ಜಾರಿಗೊಳಿಸುವ ಉದ್ದೇಶವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧದ ಅಧಿಸೂಚನೆಗಳು ಮತ್ತು ಸುತ್ತೋಲೆಗಳಿಗೆ ಕಾನೂನು ವಿಭಾಗದ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಪ್ರಕಟವಾಗುವ ನಿರೀಕ್ಷೆಯಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇ-ಕಾಮರ್ಸ್ ವೇದಿಕೆಗಳ ಮೂಲಕ ಸರಕುಗಳನ್ನು ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳಿಗೆ ಹೊಸ ನಿಯಮಗಳಿಂದ ಅನುಕೂಲವಾಗಲಿದೆ.

Advertisements

ಸರಕುಗಳನ್ನು ಸಂಗ್ರಹಿಸುವ ಪ್ರತಿಯೊಂದು ರಾಜ್ಯದಲ್ಲೂ ಸ್ವಂತ ಕಚೇರಿ ಹೊಂದಿರದ ಮಾರಾಟಗಾರರು, ನಿಗದಿತ ಷರತ್ತುಗಳ ಅಡಿಯಲ್ಲಿ ಇ-ಕಾಮರ್ಸ್ ಸಂಸ್ಥೆಯ ಗೋದಾಮನ್ನು ತಮ್ಮ ವ್ಯವಹಾರದ ಪ್ರಧಾನ ಸ್ಥಳವಾಗಿ ಘೋಷಿಸಬಹುದು. ಇದಕ್ಕಾಗಿ ತಿಂಗಳಿಗೆ ಗರಿಷ್ಠ ₹2.5 ಲಕ್ಷದವರೆಗಿನ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ವರ್ಗಾವಣೆಗೆ ಸಂಬಂಧಿಸಿದ ಷರತ್ತು ಸೇರಿದಂತೆ ನಿಗದಿತ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಮಾರಾಟಗಾರರು ತಾವು ನೋಂದಣಿ ಪಡೆಯುವ ಒಂದು ರಾಜ್ಯದಲ್ಲಿ ನೈಜ ವ್ಯವಹಾರಿಕ ಅಸ್ತಿತ್ವವನ್ನು ಹೊಂದಿರಬೇಕು. ಆ ರಾಜ್ಯದಲ್ಲಿ ಭೌತಿಕ ಪರಿಶೀಲನೆ ಮತ್ತು ಆಧಾರ್ ದೃಢೀಕರಣ ಪೂರ್ಣಗೊಳಿಸಿದ ಬಳಿಕ, ಇ-ಕಾಮರ್ಸ್ ವೇದಿಕೆಯ ಒಪ್ಪಿಗೆಯೊಂದಿಗೆ ಇತರ ರಾಜ್ಯಗಳಲ್ಲಿ ನೋಂದಣಿ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕೆ ಪ್ರತಿ ರಾಜ್ಯದಲ್ಲೂ ತೆರಿಗೆ ಅಧಿಕಾರಿಗಳ ಪ್ರತ್ಯೇಕ ಹಸ್ತಕ್ಷೇಪದ ಅಗತ್ಯವನ್ನು ಕಡಿಮೆ ಮಾಡುವ ಉದ್ದೇಶವಿದೆ. ಈ ಕ್ರಮದಿಂದ ಸುಮಾರು 9.5 ಲಕ್ಷ ಸಣ್ಣ ಮಾರಾಟಗಾರರಿಗೆ ಪ್ರಯೋಜನವಾಗುವ ನಿರೀಕ್ಷೆಯಿದೆ. ಪ್ರತಿ ರಾಜ್ಯದಲ್ಲೂ ಕಚೇರಿ ಸ್ಥಾಪಿಸದೆ ದೇಶಾದ್ಯಂತ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಇದರಿಂದ ಅನುಕೂಲವಾಗಲಿದೆ.

GST ನೋಂದಣಿಗೆ ಅಗತ್ಯವಿರುವ ದಾಖಲೆಗಳು ಮತ್ತು ಮಾಹಿತಿಯ ಕುರಿತು ಸರ್ಕಾರ ಸಮಗ್ರ ಸುತ್ತೋಲೆ ಹೊರಡಿಸಲಿದೆ. GST REG-01 ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ಆಯ್ಕೆ ಮಾಡಿಕೊಳ್ಳಲು ಡ್ರಾಪ್‌ಡೌನ್ ಆಯ್ಕೆಗಳನ್ನು ಒದಗಿಸಲಾಗುತ್ತದೆ.

ಜಿಎಸ್‌ಟಿ ಪೋರ್ಟಲ್‌ನಲ್ಲಿ ಸುಲಭವಾದ ನ್ಯಾವಿಗೇಷನ್, ಸ್ಪಷ್ಟ ಸೂಚನೆಗಳು ಮತ್ತು ಟೂಲ್‌ಟಿಪ್‌ಗಳನ್ನು ಪರಿಚಯಿಸುವ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಬಳಕೆದಾರ ಸ್ನೇಹಿಯಾಗಿಸಲು ಉದ್ದೇಶಿಸಲಾಗಿದೆ. ಇದರಿಂದ ಅಪೂರ್ಣ ದಾಖಲೆಗಳು ಅಥವಾ ತಪ್ಪು ಮಾಹಿತಿಯ ಕಾರಣಕ್ಕೆ ಅರ್ಜಿಗಳು ತಿರಸ್ಕೃತವಾಗುವುದು ಮತ್ತು ಹೆಚ್ಚುವರಿ ಸ್ಪಷ್ಟೀಕರಣ ಕೇಳುವ ಪ್ರಕರಣಗಳು ಕಡಿಮೆಯಾಗುವ ನಿರೀಕ್ಷೆಯಿದೆ. ನೋಂದಣಿ ಪ್ರಕ್ರಿಯೆಯೂ ವೇಗಗೊಳ್ಳಲಿದೆ.

ವ್ಯವಹಾರಗಳ ಬಂಡವಾಳದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಜಿಎಸ್‌ಟಿ ಮರುಪಾವತಿ ವ್ಯವಸ್ಥೆಯಲ್ಲೂ ಬದಲಾವಣೆಗಳನ್ನು ತರಲಾಗುತ್ತಿದೆ.

  • ಎಲೆಕ್ಟ್ರಾನಿಕ್ ಕ್ಯಾಶ್ ಲೆಡ್ಜರ್‌ನಲ್ಲಿನ ಹೆಚ್ಚುವರಿ ಮೊತ್ತ: ಈ ಮೊತ್ತದ ಮರುಪಾವತಿಯನ್ನು ತೆರಿಗೆ ಅಧಿಕಾರಿಗಳ ಹಸ್ತಕ್ಷೇಪವಿಲ್ಲದೆ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಮಂಜೂರು ಮಾಡುವ ಪ್ರಸ್ತಾವವಿದೆ.
  • ಸ್ವೀಕೃತಿ ಅಥವಾ ಕೊರತೆ ಸೂಚನೆ: ಮರುಪಾವತಿ ಅರ್ಜಿಗೆ ಸಂಬಂಧಿಸಿದ ಸ್ವೀಕೃತಿ ಅಥವಾ ಕೊರತೆ ಮೆಮೊ ನೀಡಲು ಇರುವ ಕಾಲಮಿತಿಯನ್ನು 15 ದಿನಗಳಿಂದ 10 ದಿನಗಳಿಗೆ ಇಳಿಸಲಾಗುತ್ತದೆ.
  • ಶೂನ್ಯ ದರದ ಪೂರೈಕೆ ಮತ್ತು ಇನ್‌ವರ್ಟೆಡ್ ಡ್ಯೂಟಿ ಸ್ಟ್ರಕ್ಚರ್: ಅಪಾಯ ಮೌಲ್ಯಮಾಪನದ ಆಧಾರದ ಮೇಲೆ, ಅರ್ಜಿಯಲ್ಲಿ ಕೋರಿದ ಮರುಪಾವತಿ ಮೊತ್ತದ ಶೇ.90ರಷ್ಟನ್ನು ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ತಾತ್ಕಾಲಿಕವಾಗಿ ಮಂಜೂರು ಮಾಡುವ ಕ್ರಮವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಈ ಕ್ರಮಗಳು ಮರುಪಾವತಿ ವಿಳಂಬವನ್ನು ತಗ್ಗಿಸಿ, ವ್ಯವಹಾರಗಳಿಗೆ ಹಣಕಾಸಿನ ಹರಿವು ಸುಧಾರಿಸಲು ನೆರವಾಗಲಿವೆ.

ಇದನ್ನೂ ಓದಿ: ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ ಭಾರತ

ಜಿಎಸ್‌ಟಿ ವಿವಾದಗಳು ಮತ್ತು ಅನಗತ್ಯ ಕಾನೂನು ಪ್ರಕ್ರಿಯೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಶೋಕಾಸ್ ನೋಟಿಸ್‌ಗಳನ್ನು ನೀಡಲು ಕನಿಷ್ಠ ₹10,000 ಮಿತಿಯನ್ನು ಪರಿಚಯಿಸುವ ಪ್ರಸ್ತಾವವೂ ಇದೆ. ಈ ಕ್ರಮದ ಅನುಷ್ಠಾನವು ಸಂಬಂಧಿತ ಜಿಎಸ್‌ಟಿ ನಿಯಮಗಳು ಮತ್ತು ಕಾಯ್ದೆಗಳಲ್ಲಿ ಅಗತ್ಯವಿರುವ ಬದಲಾವಣೆಗಳ ಮೇಲೆ ಅವಲಂಬಿತವಾಗಿರಲಿದೆ.

ಒಟ್ಟಾರೆ, ನೋಂದಣಿ, ರಿಟರ್ನ್ ಸಲ್ಲಿಕೆ, ಮರುಪಾವತಿ ಮತ್ತು ತೆರಿಗೆ ವಿವಾದಗಳ ನಿರ್ವಹಣೆಯಲ್ಲಿ ಸರಳತೆ ತರಲು ಈ ಸುಧಾರಣೆಗಳನ್ನು ರೂಪಿಸಲಾಗಿದೆ. ಸಣ್ಣ ವ್ಯಾಪಾರಿಗಳ ಅನುಸರಣೆ ವೆಚ್ಚ ಮತ್ತು ದಾಖಲೆಗಳ ಹೊರೆ ತಗ್ಗಿಸುವುದರ ಜೊತೆಗೆ, ತೆರಿಗೆ ಆಡಳಿತದ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿದೆ.

ಜಿಎಸ್‌ಟಿ ಮಂಡಳಿ ಕೇಂದ್ರ ಮಟ್ಟದಲ್ಲಿ ನಿರ್ಧಾರ ಕೈಗೊಂಡರೂ, ಪ್ರತಿಯೊಂದು ರಾಜ್ಯದ ತೆರಿಗೆ ಇಲಾಖೆಗಳು ಹಾಗೂ ಅಧಿಕಾರಿಗಳು ಕೆಳಹಂತದಲ್ಲಿ ಇದನ್ನು ಹೇಗೆ ಅನುಷ್ಠಾನಗೊಳಿಸುತ್ತಾರೆ ಎಂಬುದು ಮುಖ್ಯ. ರಾಜ್ಯಮಟ್ಟದ ಅಧಿಕಾರಿಗಳ ಹಸ್ತಕ್ಷೇಪ ಸಂಪೂರ್ಣವಾಗಿ ನಿಲ್ಲುತ್ತದೆಯೇ ಎಂಬ ಶಂಕೆ ವ್ಯಾಪಾರಿಗಳಲ್ಲಿದೆ. ₹10,000 ಕ್ಕಿಂತ ಕಡಿಮೆ ಮೊತ್ತಕ್ಕೆ ಶೋಕಾಸ್ ನೋಟಿಸ್ ನೀಡಬಾರದು ಎಂಬ ನಿಯಮವಿದ್ದರೂ, ಅಧಿಕಾರಿಗಳು ಸಣ್ಣ ವ್ಯತ್ಯಾಸಗಳನ್ನು ಒಟ್ಟುಗೂಡಿಸಿ ₹10,000 ಕ್ಕಿಂತ ಹೆಚ್ಚು ತೋರಿಸಿ ನೋಟಿಸ್ ನೀಡುವ ಸಾಧ್ಯತೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿಬೆಟ್‌ನಲ್ಲಿ ಭೀಕರ ಭೂಕಂಪ: 16 ಸಾವು, ನೂರಾರು ಮನೆಗಳು ನೆಲಸಮ

ಟಿಬೆಟ್‌ನ ಉತ್ತರದ ಪರ್ವತ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಭೀಕರ ಭೂಕಂಪ ಸಂಭವಿಸಿದೆ.‌...

ಚುನಾವಣಾ ಆಯೋಗದಲ್ಲಿ ಭಿನ್ನಮತ? ಅಧಿಕಾರಿ ವಿರುದ್ಧ ಕ್ರಮಕ್ಕೆ ಇಬ್ಬರು ಆಯುಕ್ತರ ಆಗ್ರಹ; ‘ಹಸ್ತಕ್ಷೇಪ’ ಎಂದಿದ್ದ ಕೇಂದ್ರ

ಕೇಂದ್ರ ಚುನಾವಣಾ ಆಯೋಗದೊಳಗೆ ಎಲ್ಲವೂ ಸರಿಯಿಲ್ಲವೇ? ಇಬ್ಬರು ಚುನಾವಣಾ ಆಯುಕ್ತರು ಹಿರಿಯ...

ಬಸವಕಲ್ಯಾಣ | ಪ್ರತಾಪೂರ ಗ್ರಾ.ಪಂ.ನಲ್ಲಿ ₹25.34 ಲಕ್ಷ ಅಕ್ರಮದ ಆರೋಪ, ತನಿಖೆಗೆ ಆದೇಶವಿದ್ದರೂ ವಿಳಂಬ!

ಬಸವಕಲ್ಯಾಣ ತಾಲೂಕಿನ ಪ್ರತಾಪೂರ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಆಯೋಗದ ಅನುದಾನದಡಿ...

ವಿಜಯಪುರ | ಜಿಪಂನಿಂದ ಉಚಿತ ಕಂಪ್ಯೂಟರ್ ತರಬೇತಿ: ಅಭ್ಯರ್ಥಿಗಳಿಗೆ ₹1,500 ಸಹಾಯಧನ

ನಿರುದ್ಯೋಗಿ ಯುವಜನರನ್ನು ಸ್ವಯಂ ಉದ್ಯೋಗದತ್ತ ಪ್ರೇರೇಪಿಸುವ ಉದ್ದೇಶದಿಂದ ವಿಜಯಪುರ ಜಿಲ್ಲಾ ಪಂಚಾಯಿತಿಯ...