ಸದ್ಗುರು ಜಗ್ಗಿ ವಾಸುದೇವ್‌ ಆಶ್ರಮದಲ್ಲಿ ಮಹಿಳೆಯರ ಅಕ್ರಮ ಬಂಧನ; ಪ್ರಕರಣ ವಜಾಗೊಳಿಸಿದ ಸುಪ್ರೀಂ

Date:

ತಮಿಳುನಾಡಿನ ಕೊಯಂಬತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಇಶಾ ಫೌಂಡೇಷನ್‌ ಆಶ್ರಮದಲ್ಲಿ ಮಹಿಳೆಯರನ್ನು ಅಕ್ರಮವಾಗಿ ಹಿಡಿದಿಟ್ಟುಕೊಳ್ಳಲಾಗಿದೆ ಎಂಬ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಮಹಿಳೆಯರ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಮಹಿಳೆಯರು ಸ್ವಯಂಪ್ರೇರಿತವಾಗಿ ಆಶ್ರಮದಲ್ಲಿದ್ದು, ಯಾವುದೇ ಬಲವಂತ ಕಂಡುಬಂದಿಲ್ಲ ಎಂದು ತೀರ್ಪಿನಲ್ಲಿ ತಿಳಿಸಿದೆ.

ಮಹಿಳೆಯರನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡಿದ್ದಾರೆ ಎಂದು ತಮಿಳುನಾಡು ಪೊಲೀಸರು ಆರೋಪಿಸಿದ ಮದ್ರಾಸ್‌ ಹೈಕೋರ್ಟ್‌ನಲ್ಲಿ ವಿಚಾರಣೆಗೊಳಪಟ್ಟಿತ್ತು. ತಾವು ಸ್ವಯಂಪ್ರೇರಿತವಾಗಿ ಇರುವುದಾಗಿ ಮಹಿಳೆಯರು ಪೊಲೀಸರಿಗೆ ಹೇಳಿಕೆ ನೀಡಿದ ನಂತರ ಪ್ರಕರಣವನ್ನು ಕೈಬಿಡಲಾಯಿತು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮಹಾ’ ಚುನಾವಣೆಗಾಗಿ ಒಂದಾದ ಮನುವಾದಿಗಳು, ಒಂದಾಗದ ಜಾತ್ಯತೀತರು

ಇಶಾ ಫೌಂಡೇಷನ್‌ ಆಶ್ರಮವನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ಮುಕುಲ್ ರೊಹಟಗಿ, ಮಹಿಳೆಯರು ತಾವು 24 ಹಾಗೂ 27 ವರ್ಷವಿರುವಾಗಲೇ ಸ್ವಯಂಪ್ರೇರಿತವಾಗಿ ಆಶ್ರಮಕ್ಕೆ ಸೇರಿದ್ದಾರೆ. ಆಶ್ರಮದ ಎಲ್ಲ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ತಮ್ಮ ಪೋಷಕರೊಂದಿಗೂ ನಿರಂತರವಾಗಿ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಅಕ್ರಮವಾಗಿ ಇರುವುದು ಕಂಡುಬಂದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ವಿ ಚಂದ್ರಚೂಡ್‌ ಪೀಠಕ್ಕೆ ಮನವರಿಕೆ ಮಾಡಿದರು.

ಸೆಪ್ಟೆಂಬರ್‌ನಲ್ಲಿ, ಮದ್ರಾಸ್ ಹೈಕೋರ್ಟ್ ಸಂಸ್ಥೆಯ ವಿರುದ್ಧ ದಾಖಲಾಗಿರುವ ಎಲ್ಲ ಕ್ರಿಮಿನಲ್ ಪ್ರಕರಣಗಳ ಸ್ಥಿತಿಗತಿ ವರದಿಯನ್ನು ಕೇಳಿತ್ತು .

ಕೊಯಂಬತ್ತೂರಿನ ಎಸ್‌ಪಿ ಕೆ ಕಾರ್ತಿಕೇಯನ್‌ ಅವರು ಆಶ್ರಮದಲ್ಲಿ ಕಳೆದ 15 ವರ್ಷಗಳಿಂದ 6 ವ್ಯಕ್ತಿಗಳು ಕಾಣೆಯಾಗಿರುವ ಬಗ್ಗೆ ಅಲನ್‌ದೊರೈ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, 5 ಪ್ರಕರಣಗಳು ಇತ್ಯರ್ಥವಾಗಿದ್ದು, ಒಂದು ಪ್ರಕರಣ ತನಿಖಾ ಹಂತದಲ್ಲಿದೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಈ ಮುದಿಯನ ಹತ್ತಿರ ಕಮ್ಮಿ ಹಣ ಇದೆಯಾ, ಸಾವಿರಾರು ಕೋಟಿ, ಆ ಗಡ್ಡಾನೆ ಬಂಡವಾಳ, ಪ್ರಜೆಗಳಲ್ಲಿ ಇರುವ ಬಯ, ಮುಠ್ಠಾಳತನವೆ ಆಯುಧ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾನು ಕರುಣಾನಿಧಿ ಮೊಮ್ಮಗ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಉದಯನಿಧಿ ಸ್ಟಾಲಿನ್

ನಾನು ಕರುಣಾನಿಧಿ ಅವರ ಮೊಮ್ಮಗ, ಸನಾತನ ಧರ್ಮದ ಕುರಿತ ತನ್ನ ಹೇಳಿಕೆಗೆ...

ಚುನಾವಣೆ ಗೆದ್ದರೆ ಶಾಸಕರಿಗೆ ತಲಾ 50 ಕೋಟಿ ರೂ. ನೀಡುವುದಾಗಿ ಶಿಂದೆ ಭರವಸೆ: ಸಂಜಯ್ ರಾವತ್

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಚುನಾವಣೆಯಲ್ಲಿ ಗೆದ್ದರೆ ಪ್ರತಿ ಶಾಸಕರಿಗೆ 50...

ಫೆಡರೇಶನ್ ಅಧ್ಯಕ್ಷರಾಗಲು ಬಿಜೆಪಿಯ ಬಬಿತಾ ಫೋಗಟ್ ಕುಸ್ತಿಪಟುಗಳ ಪ್ರತಿಭಟನೆಗೆ ಉತ್ತೇಜನ ನೀಡಿದರು: ಸಾಕ್ಷಿ ಮಲಿಕ್

ಬಿಜೆಪಿಯ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆಯನ್ನು ಆರಂಭಿಸಲು ಕುಸ್ತಿಪಟುಗಳನ್ನು...

ಅ.24ರಂದು ಒಡಿಶಾಕ್ಕೆ ಅಪ್ಪಳಿಸಲಿರುವ ಚಂಡಮಾರುತ: ಕರ್ನಾಟಕ ಸೇರಿ ಹಲವು ಕಡೆ ಮಳೆ

ಬಂಗಾಳ ಕೊಲ್ಲಿ ಹಾಗೂ ಅಂಡಮಾನ್‌ನಲ್ಲಿ ಸೋಮವಾರ ವಾಯುಭಾರ ಕುಸಿತ ಉಂಟಾಗಿದೆ.ಅ.24ರ ಒಳಗಾಗಿ...