ಮುಂಬೈನಲ್ಲಿರುವ ಆರ್‌ಬಿಐ ಮುಖ್ಯ ಕಚೇರಿಗೆ ಬಾಂಬ್ ಇಂದು ಬೆದರಿಕೆ ಬಂದಿದೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧಿಕೃತ ಇಮೇಲ್ ಐಡಿಗೆ ರಷ್ಯನ್ ಭಾಷೆಯಲ್ಲಿ ಬಾಂಬ್ ಬೆದರಿಕೆ ಬಂದಿದ್ದು, ನಿಮ್ಮನ್ನು ಸ್ಪೋಟಿಸುತ್ತೇವೆ ಎಂದು ಬರೆಯಲಾಗಿದೆ.
ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಭಾರತೀಯ ನ್ಯಾಯ ಸಂಹಿತಿಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉತ್ತರ ಕರ್ನಾಟಕ ಜನತೆಯ ಆಶೋತ್ತರಗಳು ಈ ಬಾರಿಯಾದರೂ ಈಡೇರಲಿ
ತಿಂಗಳ ಅವಧಿಯಲ್ಲಿ ಹೀಗೆ ಬೆದರಿಕೆ ಬರುತ್ತಿರುವುದು ಇದು ಎರಡನೇ ಬಾರಿ. ಪ್ರಕರಣ ಸಂಬಂಧ ಮುಂಬೈ ನಮಾತಾ ರಾಮಾಬಾಯಿ ಮಾರ್ಗ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಬೆದರಿಕೆ ಪತ್ರ ಕಳುಹಿಸಿದವರ ಪತ್ತೆಗೆ ಪ್ರಯತ್ನ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 16ರಂದು ಆರ್‌ಬಿಐನ ಗ್ರಾಹಕ ಸೇವಾ ಸಂಖ್ಯೆಗೆ ಕರೆಮಾಡಿ ಬಾಂಬ್ ಬೆದರಿಕೆ ಹಾಕಲಾಗಿತ್ತು. ‘ಲಷ್ಕರ್–ಎ–ತಯಬಾ’ ಸಂಘಟನೆಯ ಸಿಇಒ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ. ಕರೆ ಸ್ಥಗಿತಗೊಳಿಸುವುದಕ್ಕೂ ಮೊದಲು ಹಾಡು ಹಾಡಿದ್ದ ಎಂದು ವರದಿಯಾಗಿತ್ತು.
