ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್‌ನ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಆಪರೇಷನ್ ಸಿಂಧೂರ ಸಮಯದಲ್ಲಿ ಹಲವು ಇತರ ಖಾತೆಗಳ ಜೊತೆಗೆ ರಾಯಿಟರ್ಸ್‌ನ ಎಕ್ಸ್ ಖಾತೆಯನ್ನು ನಿರ್ಬಂಧಿಸುವಂತೆ ಸರ್ಕಾರ ಮನವಿ ಮಾಡಿತ್ತು. ಆದರೆ ಈಗ ನಿರ್ಬಂಧಿಸಲಾಗಿದೆ ಎನ್ನಲಾಗಿದೆ.
ರಾಯಿಟರ್ಸ್ ಖಾತೆಯನ್ನು ನಿರ್ಬಂಧಿಸಿದ್ದಕ್ಕಾಗಿ ಎಕ್ಸ್‌ನಿಂ ಸರ್ಕಾರ ವಿವರಣೆಯನ್ನು ಕೋರಿವೆ. ಆಪರೇಷನ್ ಸಿಂಧೂರ ಸಂದರ್ಭದಲ್ಲಿ ದೇಶದಲ್ಲಿ ಹಲವು ಎಕ್ಸ್ ಖಾತೆಗಳನ್ನು ನಿರ್ಬಂಧಿಸಲಾಗಿದ್ದರೂ, ರಾಯಿಟರ್ಸ್ ಎಕ್ಸ್ ಖಾತೆ ನಿರ್ಬಂಧಿಸಿರಲಿಲ್ಲ. ಆದರೆ ಈಗ ನಿರ್ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ್ – ಇನ್ನೂ ಉತ್ತರಿಸದ ಪ್ರಶ್ನೆಗಳು
ಪ್ರಸ್ತುತ ಆಪರೇಷನ್ ಸಿಂಧೂರ ವಿಷಯ ಪ್ರಸ್ತುತವಲ್ಲದ ಕಾರಣ ರಾಯಿಟರ್ಸ್ ಎಕ್ಸ್ ಖಾತೆ ನಿರ್ಬಂಧವನ್ನು ಹಿಂಪಡೆಯುವಂತೆ ಸರ್ಕಾರವು ಎಕ್ಸ್‌ಗೆ ತಿಳಿಸಿದೆ ಎನ್ನಲಾಗಿದೆ.
ಮೇ 7ರಂದು (ಆಪರೇಷನ್ ಸಿಂಧೂರ ಸಮಯದಲ್ಲಿ) ಆದೇಶ ಹೊರಡಿಸಲಾಗಿತ್ತು. ಆದರೆ ಎಕ್ಸ್ ಆ ಆದೇಶವನ್ನು ಈಗ ಜಾರಿಗೊಳಿಸಿದಂತೆ ತೋರುತ್ತದೆ. ಇದು ಎಕ್ಸ್ ಕಡೆಯಿಂದಾಗಿರುವ ತಪ್ಪು. ಅದನ್ನು ಆದಷ್ಟು ಬೇಗ ಪರಿಹರಿಸಲು ಸರ್ಕಾರವು ಎಕ್ಸ್ ಅನ್ನು ಸಂಪರ್ಕಿಸಿದೆ ಎಂದು ವರದಿ ಉಲ್ಲೇಖಿಸಿದೆ.

ರಾಯಿಟರ್ಸ್ ಟೆಕ್ ನ್ಯೂಸ್, ರಾಯಿಟರ್ಸ್ ಫ್ಯಾಕ್ಟ್ ಚೆಕ್, ರಾಯಿಟರ್ಸ್ ಏಷ್ಯಾ ಮತ್ತು ರಾಯಿಟರ್ಸ್ ಚೀನಾದಂತಹ ಎಕ್ಸ್ ಖಾತೆಗಳು ಕಾರ್ಯನಿರ್ವಹಿಸುತ್ತಿದ್ದರೂ ಸುದ್ದಿ ಸಂಸ್ಥೆಯ ಅಧಿಕೃತ ಎಕ್ಸ್ ಖಾತೆ ಮತ್ತು ರಾಯಿಟರ್ಸ್ ವರ್ಲ್ಡ್ ಖಾತೆ ನಿರ್ಬಂಧಿಸಲಾಗಿದೆ.
