ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶುಕ್ರವಾರ ಪರಿಷ್ಕೃತ ನೀಟ್-ಯುಜಿ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಪರಿಷ್ಕೃತ ಫಲಿತಾಂಶದಲ್ಲಿ ಟಾಪರ್‌ಗಳ ಸಂಖ್ಯೆಯು 61ರಿಂದ 17ಕ್ಕೆ ಇಳಿಕೆಯಾಗಿದೆ.
ಆರಂಭದಲ್ಲಿ ಟಾಪರ್‌ಗಳೆಂದು ಘೋಷಿಸಲ್ಪಟ್ಟ 67 ಅಭ್ಯರ್ಥಿಗಳಲ್ಲಿ ಒಟ್ಟಾಗಿ 44 ಅಭ್ಯರ್ಥಿಗಳು ಸಂಪೂರ್ಣ ಅಂಕವನ್ನು ಪಡೆದಿದ್ದರು. ನಿರ್ದಿಷ್ಟ ಭೌತಶಾಸ್ತ್ರ ವಿಷಯಕ್ಕೆ ಗ್ರೇಸ್ ಅಂಕ ನೀಡಿದ್ದರಿಂದ ಪೂರ್ಣ ಅಂಕಗಳನ್ನು ಈ ಅಭ್ಯರ್ಥಿಗಳು ಗಳಿಸಿದ್ದರು.
ಬಳಿಕ ಕೆಲವು ಕೇಂದ್ರಗಳಲ್ಲಿ ಸಮಯ ವ್ಯರ್ಥವಾಗಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್ ಅಂಕಗಳನ್ನು ಹಿಂಪಡೆಯಲಾಗಿದ್ದು, ಟಾಪರ್‌ಗಳ ಸಂಖ್ಯೆಯು 67ರಿಂದ 61ಕ್ಕೆ ಇಳಿಕೆಯಾಗಿತ್ತು. ಇದೀಗ ಪರಿಷ್ಕೃತ ನೀಟ್-ಯುಜಿ ಫಲಿತಾಂಶ ಪ್ರಕಟವಾದ ಬಳಿಕ ಟಾಪರ್‌ಗಳ ಸಂಖ್ಯೆ 61ರಿಂದ 17ಕ್ಕೆ ಇಳಿಕೆಯಾಗಿದೆ.
ಇದನ್ನು ಓದಿದ್ದೀರಾ? ನೀಟ್-ಯುಜಿ ಅಂತಿಮ ಫಲಿತಾಂಶ ಎರಡು ದಿನಗಳಲ್ಲಿ ಪ್ರಕಟ: ಧರ್ಮೇಂದ್ರ ಪ್ರಧಾನ್
ಫಲಿತಾಂಶದ ಪ್ರಕಾರ ಟಾಪ್ ಸ್ಕೋರರ್‌ಗಳು 99.9992714 ಪ್ರತಿಶತದೊಂದಿಗೆ ಪರಿಪೂರ್ಣ 720 ಅಂಕಗಳನ್ನು ಸಾಧಿಸಿದ್ದಾರೆ. ಪ್ರತಿ ಪ್ರಶ್ನೆಗೆ ಒಂದೇ ಒಂದು ನಿಖರವಾದ ಉತ್ತರವನ್ನು ಸ್ವೀಕರಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಪರಿಷ್ಕೃತ ಫಲಿತಾಂಶದಲ್ಲಿ ಬದಲಾವಣೆ ಕಂಡುಬಂದಿದೆ.
ಇದರ ಪರಿಣಾಮವಾಗಿ ಈ ಹಿಂದೆ 720ಕ್ಕೆ 715 ಅಂಕ ಪಡೆದಿದ್ದ 44 ವಿದ್ಯಾರ್ಥಿಗಳು 720 ಅಂಕ ಪಡೆದವರ ಮತ್ತು 720ಕ್ಕೆ 716 ಅಂಕ ಪಡೆದ 70 ವಿದ್ಯಾರ್ಥಿಗಳ ನಂತರದ ಸ್ಥಾನವನ್ನು ಪಡೆದಿದ್ದಾರೆ.
ಮೇ 5ರಂದು ನಡೆಸಿದ ನೀಟ್-ಯುಜಿ ಪರೀಕ್ಷೆಯು 14 ಅಂತರಾಷ್ಟ್ರೀಯ ಸ್ಥಳಗಳನ್ನು ಒಳಗೊಂಡಂತೆ 571 ನಗರಗಳಲ್ಲಿ 4,750 ಕೇಂದ್ರಗಳಲ್ಲಿ ನಡೆಸಲಾಗಿದೆ. ಆದರೆ ಪರೀಕ್ಷೆಯ ವೇಳೆ ಸಮಯದ ನಿರ್ಬಂಧ ಎದುರಿಸಿದ 1,563 ಅಭ್ಯರ್ಥಿಗಳಿಗೆ ಜೂನ್ 23ರಂದು ಮರು-ಪರೀಕ್ಷೆ ಮಾಡಲಾಗಿದೆ.