ಕಸೂತಿ ಕಾರ್ಮಿಕರೊಬ್ಬರ ದಾಖಲೆಗಳನ್ನು ಬಳಸಿಕೊಂಡು ವಂಚಕರು ನಕಲಿ ರಫ್ತು ಘಟಕವನ್ನು ಸ್ಥಾಪಿಸಿಕೊಂಡಿದ್ದಾರೆ. ರಫ್ತು ಘಟಕದ ಹೆಸರಿನಲ್ಲಿ ಕಾರ್ಮಿಕನಿಗೆ 232 ಕೋಟಿ ರೂ.ಗಳ ವಹಿವಾಟಿಗೆ ತೆರಿಗೆ ನೋಟಿಸ್ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಬರೇಲಿಯ ಕಾರ್ಮಿಕ ಫೂಲ್ ಮಿಯಾನ್ ಎಂಬಾತನಿಗೆ ತೆರಿಗೆ ನೋಟಿಸ್ ಬಂದಿದೆ. ಆತನಿಗೆ ವಂಚಕರು ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಆತನ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಆ ದಾಖಲೆಗಳನ್ನು ಬಳಿಕೊಂಡು ದೆಹಲಿಯಲ್ಲಿ ನಕಲಿ ರಫ್ತು ಘಟಕವನ್ನು ಸ್ಥಾಪಿಸಿದ್ದಾರೆ. ಜೊತೆಗೆ, 232 ಕೋಟಿ ರೂಪಾಯಿ ಮೌಲ್ಯದ ವಹಿವಾಟನ್ನೂ ನಡೆಸಿದ್ದಾರೆ. ಆ ವಹಿವಾಟಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಕಾರ್ಮಿಕ ಮಿಯಾನ್‌ಗೆ ನೋಟಿಸ್ ಕಳಿಸಿದೆ. ನಂತರ, ಪ್ರಕರಣ ಬೆಳಕಿಗೆ ಬಂದಿದೆ.
ನೋಟಿಸ್ ಬಂದ ಹಿನ್ನೆಲೆ ಕಾರ್ಮಿಕ ಫೂಲ್ ಮಿಯಾನ್, ತಮಗೆ ವಂಚಕರು ವಂಚಿಸಿದ್ದಾರೆ. ತನ್ನ ಹೆಸರಿನಲ್ಲಿ ರಫ್ತು ಘಟಕ ತೆರೆದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿರುವ ವಿಯಾನ್, “ತಾನು ಕಸೂತಿ ಕೆಲಸ ಮಾಡುತ್ತಿದ್ದೇನೆ. ನನಗೆ ಒಳ್ಳೆಯ ಸಂಬಳ ಬರುವ ಕೆಲಸ ಕೊಡಿಸುವುದಾಗಿ ಗುಡ್ಡು ಸುಂದರ್ ಅಲಿಯಾಸ್ ಉವೈಸ್, ಸುಹೈಲ್ ಮತ್ತು ಆಸಿಫ್ ಖಾನ್ ಎಂಬವರು ಭರವಸೆ ನೀಡಿದ್ದರು. ನನ್ನ ಆಧಾರ್ ಕಾರ್ಡ್, ಪಾನ್ ಕಾರ್ಡ್, ಫೋಟೊ ಮತ್ತು ಇತರ ದಾಖಲೆಗಳನ್ನು ಪಡೆದುಕೊಂಡಿದ್ದರು. ಆದರೆ, ಕೊರೊನಾ ಸಮಯದಲ್ಲಿ ಲಾಕ್‌ಡೌನ್ ಆದ ಕಾರಣ ವಿಳಂಬವಾಗುತ್ತಿದೆ ಎಂಬ ನೆಪವೊಡ್ಡಿ ಉದ್ಯೋಗ ಕೊಡಿಸಿರಲಿಲ್ಲ. ಇದೀಗ, ರಫ್ತು ಘಟಕದ ಹೆಸರಿನಲ್ಲಿ ನೋಟಿಸ್ ಬಂದಿದೆ. ವಂಚಕರು ನನ್ನ ದಾಖಲೆಗಳನ್ನು ಬಳಿಸಿಕೊಂಡು ನಕಲಿ ರಫ್ತು ಘಟಕ ತೆರೆದಿದ್ದಾರೆ” ಎಂದು ವಿವರಿಸಿದ್ದಾರೆ.