ಲೋಕಸಭೆಯ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ಅವರನ್ನು ನಟ ಸೈಫ್ ಅಲಿ ಖಾನ್ ಹಾಡಿಹೊಗಳಿದ್ದು, ‘ಧೈರ್ಯಶಾಲಿ ರಾಜಕಾರಣಿ’ ಎಂದು ಕರೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ನಟ ಸೈಫ್ ಅಲಿ ಖಾನ್ ಬಳಿ ನೀವು ಯಾವ ರಾಜಕಾರಣಿಯನ್ನು ಇಷ್ಟಪಡುತ್ತೀರಿ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ “ನಾನು ‘ಧೈರ್ಯಶಾಲಿ ರಾಜಕಾರಣಿ’ಯನ್ನು ಇಷ್ಟಪಡುತ್ತೇನೆ” ಎಂದು ತಿಳಿಸಿದ್ದಾರೆ.
ಭಾರತದ ಪ್ರಮುಖ ರಾಜಕಾರಣಿಗಳಾದ ರಾಹುಲ್ ಗಾಂಧಿ, ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪೈಕಿ ಯಾರು ‘ಧೈರ್ಯಶಾಲಿ ರಾಜಕಾರಣಿ’ ಎಂದು ನಿಮಗನಿಸುತ್ತದೆ ಮತ್ತು ಯಾರು ಭವಿಷ್ಯದಲ್ಲಿ ಭಾರತವನ್ನು ಮುನ್ನಡೆಸಬಲ್ಲ ಯಶಸ್ವಿ ರಾಜಕಾರಣಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ನಟ ಸೈಫ್ ಅಲಿ ಖಾನ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಶ್ಲಾಘಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿಯನ್ನ ಮುಗಿಸುವ ಸಂಚು..! | Rahul Gandhi
“ಇವರೆಲ್ಲವೂ ಧೈರ್ಯಶಾಲಿ ರಾಜಕಾರಣಿಗಳು. ಆದರೆ ರಾಹುಲ್ ಗಾಂಧಿಯವರ ಕಾರ್ಯವೂ ಕೂಡಾ ಅತೀ ಪ್ರಭಾವಶಾಲಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಹಿಂದೆ ರಾಹುಲ್ ಗಾಂಧಿ ಅವರು ಮಾಡುತ್ತಿದ್ದ ಕಾರ್ಯಕ್ಕೆ, ಅವರ ಮಾತುಗಳಿಗೆ ಜನರು ಗೌರವ ನೀಡುತ್ತಿರಲಿಲ್ಲ. ಆದರೆ ಆಸಕ್ತಿದಾಯಕ ರೀತಿಯಲ್ಲಿ ಅತೀ ಕಷ್ಟಪಟ್ಟು ಕೆಲಸ ಮಾಡುವ ಮೂಲಕ ರಾಹುಲ್ ಗಾಂಧಿ ಜನರ ಅಭಿಪ್ರಾಯವನ್ನು ಬದಲಾಯಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ಅಭಿಪ್ರಾಯಿಸಿದರು.
ರಾಹುಲ್ ಗಾಂಧಿಯ ಬಗ್ಗೆ ಸೈಫ್ ಅಲಿ ಖಾನ್ ಅವರ ಮೆಚ್ಚುಗೆ ಮಾತುಗಳ ವಿಡಿಯೋ ತುಣುಕು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. ಕೆಲವು ನೆಟ್ಟಿಗರು ಸೈಫ್ ಅಲಿ ಖಾನ್ ಅವರನ್ನು ರಾಹುಲ್ ಗಾಂಧಿಯ ಪ್ರಚಾರಕ ಎಂದು ಕರೆದರೆ, ಇನ್ನು ಕೆಲವರು ನಟನ ಹೇಳಿಕೆಗೆ ಸಮ್ಮತಿ ವ್ಯಕ್ತಪಡಿಸಿದ್ದಾರೆ.
ಇನ್ನು ಸೈಫ್ ಅಲಿ ಖಾನ್ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ‘ದೇವಾರ: ಪಾರ್ಟ್ 1’ ಶುಕ್ರವಾರ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೊರ್ಟಾಲ ಶಿವ ನಿರ್ದೇಶನದ ಈ ಸಿನಿಮಾ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
Saif Ali Khan praising Rahul Gandhi for being a Brave and honest politician! 🙌🏻 pic.twitter.com/ARf2ZbJdkX
— Reshma Alam (@Reshma_alamD) September 26, 2024
