ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. 54 ವರ್ಷದ ನಟನ ಮೇಲೆ ಮುಂಬೈನಲ್ಲಿರುವ ನಿವಾಸದಲ್ಲಿ ವ್ಯಕ್ತಿಯೋರ್ವ ಚಾಕುವಿನಿಂದ ಇರಿದಿದ್ದ. ಸದ್ಯ ಸೈಫ್ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ಮುಂಬೈನಿಂದ ಹೌರಾಕ್ಕೆ ತೆರಳುವ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಲ್ಲಿ ತೆರಳುತ್ತಿದ್ದ ಶಂಕಿತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ರೈಲ್ವೆ ತಂಡ (ಆರ್‌ಪಿಎಫ್) ತಿಳಿಸಿದರುವುದಾಗಿ ವರದಿಯಾಗಿದೆ. ಇನ್ನು ಆರೋಪಿಯನ್ನು ಆಕಾಶ್ ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ? ಸೈಫ್ ಅಲಿ ಖಾನ್ ಚೇತರಿಕೆ, ಮೂರು ದಿನಗಳಲ್ಲಿ ಡಿಸ್ಚಾರ್ಜ್: ವೈದ್ಯರು
“ಮುಂಬೈ ಪೊಲೀಸರು ಶಂಕಿತ ಆರೋಪಿಯ ಚಿತ್ರ, ರೈಲು ಸಂಖ್ಯೆ, ಸ್ಥಳದ ವಿವರವನ್ನು ಆರ್‌ಪಿಎಫ್‌ಗೆ ಕಳುಹಿಸಿದ್ದರು. ಪ್ರಸ್ತುತ ಆರೋಪಿ ಆಕಾಶ್ ಆರ್‌ಪಿಎಫ್ ವಶದಲ್ಲಿದ್ದಾನೆ. ಮುಂಬೈ ಪೊಲೀಸರು ಬಂದು ಆತನೇ ಆರೋಪಿಯೇ ಎಂಬುದನ್ನು ವಿಚಾರಣೆ ನಡೆಸಿ ಖಚಿತಪಡಿಸಲಿದ್ದಾರೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಟ ಸೈಫ್ ಆರೋಗ್ಯ ಸುಧಾರಿಸುತ್ತಿದ್ದು, ಇನ್ನೆರಡು ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಎಂದು ವೈದ್ಯರು ಶನಿವಾರ ತಿಳಿಸಿದ್ದಾರೆ.
ಸೈಫ್ ಪತ್ನಿ ನಟಿ ಕರೀನಾ ಕಪೂರ್ ವಿಚಾರಣೆಯನ್ನು ಪೊಲೀಸರು ಮಾಡಿದ್ದು, “ಆರೋಪಿ ಸೈಫ್ ಮೇಲೆ ಹಲವು ಬಾರಿ ಚಾಕುವಿನಿಂದ ಇರಿದನು. ಆತ ಆಕ್ರೋಶದಲ್ಲಿದ್ದ. ಸೈಫ್ ಅನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವುದೇ ನಮ್ಮ ಆದ್ಯತೆಯಾಗಿತ್ತು” ಎಂದು ಹೇಳಿದ್ದಾರೆ.
