ಸನಾತನ ಸಂಸ್ಥೆಯು ದೇಶದ ಸಂಸ್ಕೃತಿಯ, ಶಿಕ್ಷಣದ ಭಾಗವಾಗಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.
ದಕ್ಷಿಣ ಮುಂಬೈನಲ್ಲಿರುವ ಕೆಪಿಬಿ ಹಿಂದೂಜಾ ಕಾಲೇಜಿನ ವಾರ್ಷಿಕ ದಿನದ ಸಮಾರಂಭದಲ್ಲಿ ಮಾತನಾಡಿದ ಅವರು, “ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳು ಸರಕೀಕರಣ ಮತ್ತು ವಾಣಿಜ್ಯೀಕರಣದಿಂದ ಬಳಲುತ್ತಿವೆ” ಎಂದು ಹೇಳಿದರು.
ಹಾಗೆಯೇ “ಸನಾತನ ಸಂಸ್ಥೆಯು ಭಾರತದ ನಾಗರಿಕತೆಯ ನೀತಿ ಮತ್ತು ಸಾರದ ಭಾಗವಾಗಿದೆ. ಸನಾತನ ಸಂಸ್ಥೆಯು ಸಮಗ್ರತೆಯನ್ನು ಪ್ರತಿನಿಧಿಸುವುದರಿಂದ ಅದು ದೇಶದ ಸಂಸ್ಕೃತಿ ಮತ್ತು ಶಿಕ್ಷಣದ ಭಾಗವಾಗಿರಬೇಕು. ಸನಾತನ ಸಂಸ್ಥೆಯು ಬೇರೂರುವ ಅಗತ್ಯವಿದೆ” ಎಂದರು.
ಇದನ್ನು ಓದಿದ್ದೀರಾ? ಯಾವುದೇ ಪ್ರದೇಶವನ್ನು ವಶಕ್ಕೆ ಪಡೆಯಲು ಅದರ ಭಾಷೆ, ಸಂಸ್ಕೃತಿ ನಾಶ ಮಾಡಬೇಕು: ಉಪ ರಾಷ್ಟ್ರಪತಿ ಧನಕರ್
ಆರ್‌ಎಸ್‌ಎಸ್, ಬಿಜೆಪಿಯ ಬಲಪಂಥೀಯ ಧೋರಣೆ ಇರುವವರು ನಿರಂತರವಾಗಿ ಶಿಕ್ಷಣದಲ್ಲಿ ಕೇಸರೀಕರಣ ಮಾಡುವ ಯತ್ನವನ್ನು ಮಾಡುತ್ತಲೇ ಇದೆ. ಆರ್‌ಎಸ್‌ಎಸ್ ನಾಯಕರುಗಳು ಕೂಡಾ ಶಿಕ್ಷಣದಲ್ಲಿ ಕೇಸರೀಕರಣವನ್ನು ಅಳವಡಿಸಬೇಕೆಂಬ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದಾರೆ.
ಇದರೊಂದಿಗೆ ಒಂದು ದೇಶ ಒಂದು ಚುನಾವಣೆ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ನೀತಿ – ಹೀಗೆ ಹಲವು ಕಾನೂನು, ಯೋಜನೆಗಳ ಮೂಲಕ ಬಹುತ್ವ ಭಾರತವನ್ನು ಬದಲಾಯಿಸುವ ಹುನ್ನಾರವನ್ನು ನಡೆಸುತ್ತಿದೆ. ಈಗಾಗಲೇ ಕೋಮು ದ್ವೇಷ ಹರಡುವ ಮೂಲಕ ತಮ್ಮ ಅಜೆಂಡಾ ವಿಸ್ತರಿಸಿಕೊಂಡಿದೆ. ಒಂದು ಭಾಷೆ, ಒಂದು ಧರ್ಮ, ಒಬ್ಬನೇ ನಾಯಕ ಎಂಬ ಸರ್ವಾಧಿಕಾರದತ್ತ ಭಾರತವನ್ನು ಹೊತ್ತೊಯ್ಯುತ್ತಿದೆ. ಅದಕ್ಕಾಗಿ ಶಿಕ್ಷಣವನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ.
