ುಪ30 ವಾರಗಳ ಗರ್ಭಿಣಿಯಾಗಿರುವ 14 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ತಕ್ಷಣವೇ ಗರ್ಭಪಾತ ಮಾಡಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಬಾಲಕಿಯ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಬಾಂಬೆ ಹೈಕೋರ್ಟ್ ಆದೇಶವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್ ಬಾಲಕಿಗೆ ಪ್ರತಿ ಗಂಟೆಯು ನಿರ್ಣಾಯಕವಾಗಿದೆ ಎಂದು ತೀರ್ಪು ನೀಡಿದೆ.
ಗರ್ಭಪಾತಕ್ಕೆ ವೈದ್ಯಕೀಯ ತಂಡ ನಿಯೋಜಿಸಲು ಮುಂಬೈನ ಸಿಯೋನ್ ಆಸ್ಪತ್ರೆಗೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪೀಠವು ಆದೇಶಿಸಿದೆ.
ಆಸ್ಪತ್ರೆಯು ವೈದ್ಯಕೀಯ ಸೌಲಭ್ಯದೊಂದಿಗೆ ಅಪ್ರಾಪ್ತೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಪ್ರಕ್ರಿಯೆಗಳ ವೆಚ್ಚಗಳನ್ನು ಮಹಾರಾಷ್ಟ್ರ ಸರ್ಕಾರ ವಹಿಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿತು.
ಮುಂದುವರೆದ ಹಂತವಾದ ಕಾರಣ ಗರ್ಭಾಪಾತಕ್ಕೆ ಅನುಮತಿ ನೀಡಲು 2023ರಲ್ಲಿ ನಿರಾಕರಿಸಿದ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅತ್ಯಾಚಾರ ಸಂತ್ರಸ್ತೆಯ ತಾಯಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಡಿ ಎಂಬ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಮೋದಿಯ ‘ಮಹಾನ್’ ಸಾಧನೆ
ಅತ್ಯಾಚಾರ ಸಂತ್ರಸ್ತೆಯ ಪ್ರಕಾರ ಆಕೆಯ ಪುತ್ರಿ ಫೆ.2023ರಲ್ಲಿ ಕಾಣೆಯಾಗಿ ಮೂರು ತಿಂಗಳ ನಂತರ ರಾಜಸ್ಥಾನದಲ್ಲಿ ಪತ್ತೆಯಾಗಿದ್ದರು. ವ್ಯಕ್ತಿಯೊಬ್ಬ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದಳು.
ಬಾಲಕಿ ಮನೆಗೆ ತೆರಳಿದ ನಂತರ ಪೋಕ್ಸೋ ಕಾಯ್ದೆಯಡಿ ಅತ್ಯಾಚಾರಿಯ ವಿರುದ್ಧ ದೂರು ದಾಖಲಿಸಲಾಗಿತ್ತು.
”ಇದೊಂದು ಅತ್ಯಾಚಾರ ಪ್ರಕರಣ ಹಾಗೂ ಇದೊಂದು ಅಪರೂಪದ ಪ್ರಕರಣವಾದ ಕಾರಣ ನಾವು 14 ವರ್ಷದ ಬಾಲಕಿಗೆ ಗರ್ಭಪಾತಕ್ಕೆ ಅನುಮತಿಸುತ್ತೇವೆ. ವೈದ್ಯಕೀಯ ಮಂಡಳಿ ಬಾಲಕಿಯ ಜೀವಕ್ಕೆ ಅಪಾಯವಿದೆ ಎಂದು ಅಭಿಪ್ರಾಯ ಪಟ್ಟಿದ್ದರೂ ಹೆರಿಗೆಯ ನಂತರ ಇದಕ್ಕಿಂತ ಹೆಚ್ಚಿನ ಅಪಾಯವಿದೆ. ಈ ಪ್ರಕರಣನ್ನು ಸಿಯೋನ್ ಆಸ್ಪತ್ರೆ ಇದನ್ನು ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನಿರ್ದೇಶಿಸಿದರು
ವೈದ್ಯಕೀಯ ಗರ್ಭಾಪಾತ ಕಾಯ್ದೆ ಪ್ರಕಾರ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಅತ್ಯಾಚಾರ ಸಂತ್ರಸ್ತೆಯರು ಹಾಗೂ ವಿಕಲಾಂಗ ಚೇತನವುಳ್ಳ ಇತರ ದುರ್ಬಲ ಮಹಿಳೆಯರು ಒಳಗೊಂಡ ವಿವಾಹಿತೆಯರ ಗರ್ಭಾಪಾತದ ಅವಧಿ 24 ವಾರಗಳನ್ನು ಮೀರಿರಬಾರದು.
