ದಾರಿತಪ್ಪಿಸುವ ಪತಂಜಲಿ ಜಾಹೀರಾತು ಪ್ರಕರಣದಲ್ಲಿ ಪತಂಜಲಿ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರು ಸಲ್ಲಿಸಿದ ಮತ್ತೊಂದು ಕ್ಷಮಾಪತ್ರವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, “ನಾವು ಕುರುಡರಲ್ಲ, ಈ ಪ್ರಕರಣದಲ್ಲಿ ಉದಾರವಾಗಿರಲು ಬಯಸುವುದಿಲ್ಲ” ಎಂದು ಹೇಳಿದೆ. ಅಷ್ಟೇ ಅಲ್ಲ, ಕೋರ್ಟ್ ಈ ಸಂದರ್ಭದಲ್ಲೇ “ಈ ವಿಚಾರದಲ್ಲಿ ಕೇಂದ್ರದ ಉತ್ತರದಿಂದ ತೃಪ್ತವಾಗಿಲ್ಲ” ಎಂದೂ ತಿಳಿಸಿದೆ.
“ಕ್ಷಮಾಪಣೆಯು ಕಾಗದದ ಮೇಲಿದೆ. ಅವರ ಬೆನ್ನು ಗೋಡೆಗೆ ವಿರುದ್ಧವಾಗಿದೆ. ನಾವು ಇದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತೇವೆ. ನಾವು ಉದ್ದೇಶಪೂರ್ವಕ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸುತ್ತೇವೆ” ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಎ ಅಮಾನುಲ್ಲಾ ಅವರ ಪೀಠ ಹೇಳಿದೆ.
ವಿಚಾರಣೆಯ ಆರಂಭದಲ್ಲಿ, ರಾಮ್‌ದೇವ್ ಮತ್ತು ಬಾಲಕೃಷ್ಣ ಅವರು ಮೊದಲು ಮಾಧ್ಯಮಗಳಿಗೆ ಕ್ಷಮೆಯಾಚಿಸಿದರು ಎಂಬ ಅಂಶವನ್ನು ಪೀಠವು ಒತ್ತಿ ಹೇಳಿದೆ. “ವಿಷಯವು ನ್ಯಾಯಾಲಯದ ಮೆಟ್ಟಿಲೇರುವವರೆಗೂ, ನಮಗೆ ಅಫಿಡವಿಟ್‌ಗಳನ್ನು ಕಳುಹಿಸುವುದು ಸೂಕ್ತವೆಂದು ಅವರಿಗೆ ಅನಿಸಿಲ್ಲ. ಅವರು ಅಫಿಡವಿಟ್ ಅನ್ನು ಮೊದಲು ಮಾಧ್ಯಮಗಳಿಗೆ ಕಳುಹಿಸಿದ್ದು ನಿನ್ನೆ ಸಂಜೆ 7.30 ರವರೆಗೆ ಅದನ್ನು ಕೋರ್ಟ್‌ಗೆ ನೀಡಿಲ್ಲ. ಇದು ಅವರು ಪ್ರಚಾರವನ್ನು ನಂಬುತ್ತಾರೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ” ಎಂದು ನ್ಯಾಯಮೂರ್ತಿ ಕೊಹ್ಲಿ ಹೇಳಿದರು.
ಇದನ್ನು ಓದಿದ್ದೀರಾ? ಜಾಹೀರಾತು ಪ್ರಕರಣ | ರಾಮ್‌ದೇವ್‌ಗೆ ಸುಪ್ರೀಂ ಸಮನ್ಸ್ ಬೆನ್ನಲ್ಲೇ ಕ್ಷಮೆಯಾಚಿಸಿದ ಪತಂಜಲಿ
ಇನ್ನು ಪತಂಜಲಿ ಸಂಸ್ಥಾಪಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, “ಕಕ್ಷಿದಾರರ ಪರವಾಗಿ ಮಾತನಾಡಲು ಸಾಧ್ಯವಿಲ್ಲ ಮತ್ತು ಕ್ಷಮೆ ಕೇಳಲಾಗಿದೆ” ಎಂದು ಹೇಳಿದರು. ಅಫಿಡವಿಟ್‌ಗಳನ್ನು ಓದುತ್ತಿದ್ದಂತೆ ನ್ಯಾಯಮೂರ್ತಿ ಅಮಾನುಲ್ಲಾ ಅವರು, “ನೀವು ಅಫಿಡವಿಟ್‌ಗೆ ವಂಚಿಸುತ್ತಿದ್ದೀರಿ. ಈ ಅಫಿಡವಿಟ್ ಮಾಡಿದ್ದು ಯಾರು, ನನಗೆ ಆಶ್ಚರ್ಯವಾಗಿದೆ” ಎಂದರು.
#WATCH | Yog guru Baba Ramdev and Patanjali Ayurved’s Managing Director Acharya Balkrishna arrive at Supreme Court to attend the hearing relating to misleading advertisements by Patanjali Ayurved pic.twitter.com/Dha2ILrpLc
— ANI (@ANI) April 10, 2024
ಮುಕುಲ್ ರೋಹಟಗಿ ‘ತಪ್ಪಾಗಿದೆ’ ಎಂದು ಹೇಳಿದ್ದು, ಅದಕ್ಕೆ ನ್ಯಾಯಾಲಯವು “ತುಂಬಾ ಸಣ್ಣ ಮಾತು” ಎಂದು ಉತ್ತರಿಸಿದೆ. ಕ್ಷಮೆಯಾಚನೆಯು ‘ಹೃದಯಪೂರ್ವಕವಾಗಿದೆಯೇ’ ಎಂದು ನ್ಯಾಯಮೂರ್ತಿ ಅಮಾನುಲ್ಲಾ ಪ್ರಶ್ನಿಸಿದರು. “ಇನ್ನೇನು ಹೇಳುವುದು, ನೀವು ಹೇಳಿದಂತೆ ಮಾಡುತ್ತೇವೆ. ಅವರು ವೃತ್ತಿಪರ ದಾವೆದಾರರಲ್ಲ. ಜನರು ಜೀವನದಲ್ಲಿ ತಪ್ಪುಗಳನ್ನು ಮಾಡುತ್ತಾರೆ” ಎಂದು ರೋಹಟಗಿ ಉತ್ತರಿಸಿದರು.
“ನಮ್ಮ ಆದೇಶದ ನಂತರವೂ ತಪ್ಪು ಮಾಡುತ್ತಾರೆಯೇ? ಈ ಪ್ರಕರಣದಲ್ಲಿ ನಾವು ತುಂಬಾ ಉದಾರವಾಗಿರಲು ಬಯಸುವುದಿಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ. “ಕೇವಲ ಒಂದು ಎಫ್‌ಎಂಸಿಜಿಯ ವಿಚಾರವಲ್ಲ, ಇದು ಕಾನೂನಿನ ಉಲ್ಲಂಘನೆ ವಿಚಾರವಾಗಿದೆ. ರಾಜ್ಯ ಪ್ರಾಧಿಕಾರವು ನಿಮ್ಮನ್ನು ಹಿಂತೆಗೆದುಕೊಳ್ಳುವಂತೆ ಕೇಳಿದಾಗ ನಿಮ್ಮ ಪ್ರತ್ಯುತ್ತರಗಳನ್ನು ನೋಡಿ” ಎಂದು ತರಾಟೆಗೆ ತೆಗೆದುಕೊಂಡರು.