ಹಿಮಾಚಲ ಪ್ರದೇಶದ ಪ್ರಾಕೃತಿಕ ಅಸಮತೋಲನದ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಜ್ಯವೇ ಭೂಪಟದಿಂದ ಕಣ್ಮರೆಯಾಗಬಹುದು ಎಂದು ಎಚ್ಚರಿಕೆ ನೀಡಿದೆ.
ಪರಿಸರದ ಮೇಲೆ ಚೆಲ್ಲಾಟವಾಡಿ ಆದಾಯಗಳಿಸುವುದೇ ಸರ್ವಸ್ವವಲ್ಲ ಎಂಬುದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ನಾವು ಬಯಸುತ್ತೇವೆ. ಪರಿಸರ ಮತ್ತು ಹವಾಮಾನ ಬಲಿಕೊಟ್ಟು ಆದಾಯಗಳಿಸಲು ಸಾಧ್ಯವಿಲ್ಲ. ಹವಾಮಾನ ಬದಲಾವಣೆಯಿಂದ ರಾಜ್ಯಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ನ್ಯಾಯಮೂರ್ತಿ ಜೆ ಪಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹದೇವನ್ ಅವರ ಪೀಠ ತಿಳಿಸಿದೆ.
ಪರಿಸರವನ್ನು ಬಲಿಕೊಟ್ಟು ಆದಾಯ ಗಳಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವರಿಕೆ ಮಾಡಲು ಬಯಸುವುದಾಗಿ ಕೋರ್ಟ್ ಹೇಳಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಸಾಂಸ್ಥಿಕ ಹತ್ಯೆಗಳಲ್ಲವೇ?
ಹಿಮಾಚಲ ಪ್ರದೇಶ ಹೈಕೋರ್ಟ್ ಆದೇಶದ ವಿರುದ್ಧದ ಮೇಲ್ಮನವಿ ವಿಚಾರಣೆಯ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, 2025ರ ಜೂನ್ನಲ್ಲಿ ಕೆಲವು ಪ್ರದೇಶಗಳನ್ನು ಹಸಿರು ಪ್ರದೇಶ ಎಂದು ಘೋಷಿಸುವ ರಾಜ್ಯದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
“ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಇಡೀ ಹಿಮಾಚಲ ಪ್ರದೇಶವೇ ಭೂಪಟದಿಂದಲೇ ಕಣ್ಮರೆಯಾಗುವ ದಿನ ದೂರವಿಲ್ಲ. ಆದರೆ ದೇವರು ಹಾಗಾದಿರುವಂತೆ ಮಾಡಲಿ ಎಂದು ಪೀಠ ಹೇಳಿದೆ.
