ನ್ಯಾಯದೇವತೆ ಪ್ರತಿಮೆ,ಸುಪ್ರೀಂ ಕೋರ್ಟ್ ಲಾಂಛನದಲ್ಲಿ ಏಕಪಕ್ಷೀಯ ಬದಲಾವಣೆ: ಎಸ್‌ಸಿಬಿಎ ಆಕ್ಷೇಪ

Date:

Advertisements

ವಕೀಲ ವರ್ಗದೊಂದಿಗೆ ಸಮಾಲೋಚಿಸದೆಯೇ ನ್ಯಾಯದೇವತೆಯ ಪ್ರತಿಮೆ ಮತ್ತು ಸುಪ್ರೀಂ ಕೋರ್ಟ್‌ ಲಾಂಛನದಲ್ಲಿ ಏಕಪಕ್ಷೀಯವಾಗಿ ಬದಲಾವಣೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ ವಕೀಲರ ಸಂಘದ (ಎಸ್‌ಸಿಬಿಎ) ಕಾರ್ಯಕಾರಿ ಸಮಿತಿ ಸರ್ವಾನುಮತದ ನಿರ್ಣಯ ಕೈಗೊಂಡಿದೆ.

ಸಿಜೆಐ ಡಿ ವೈ ಚಂದ್ರಚೂಡ್‌ ನೇತೃತ್ವದ ಆಡಳಿತ ಏಕಪಕ್ಷೀಯವಾಗಿ ಬದಲಾವಣೆ ಮಾಡಿರುವುದಕ್ಕೆ ಸಂಘದ ಅಧ್ಯಕ್ಷ ಕಪಿಲ್ ಸಿಬಲ್ ನೇತೃತ್ವದ ಕಾರ್ಯಕಾರಿ ಸಮಿತಿ ಅಸಮಾಧಾನ ವ್ಯಕ್ತಪಡಿಸಿತು. ಈ ಬೆಳವಣಿಗೆಯನ್ನು ನ್ಯಾಯಿಕ ಆಡಳಿತದಲ್ಲಿ ಸಮಪಾಲು ಇರುವ ವಕೀಲ ವರ್ಗದ ಗಮನಕ್ಕೆ ತಂದಿಲ್ಲ. ಬದಲಾವಣೆಗಳ ಹಿಂದಿನ ತಾರ್ಕಿಕತೆ ಏನೆಂಬುದು ವಕೀಲ ವರ್ಗಕ್ಕೆ ಸ್ವಲ್ಪವೂ ಅರ್ಥವಾಗುತ್ತಿಲ್ಲ ಎಂದು ಅಕ್ಟೋಬರ್ 22 ರಂದು ಎಸ್‌ಸಿಬಿಎ ಕೈಗೊಂಡಿರುವ ನಿರ್ಣಯ ತಿಳಿಸಿದೆ.

ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಜಿಲ್ಲಾ ನ್ಯಾಯಾಂಗದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಸುಪ್ರೀಂ ಕೋರ್ಟ್‌ನ ಹೊಸ ಧ್ವಜ ಮತ್ತು ಲಾಂಛನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅನಾವರಣಗೊಳಿಸಿದ್ದರು.

Advertisements

ಈ ಸುದ್ದಿ ಓದಿದ್ದೀರಾ? ಈದಿನ ಸಂಪಾದಕೀಯ | ಮಳೆ ನಿರ್ವಹಣೆಗೆ ಬೇಕು 500 ವರ್ಷಗಳ ದೂರದೃಷ್ಟಿ

ಅಶೋಕ ಚಕ್ರ, ಸುಪ್ರೀಂ ಕೋರ್ಟ್ ಕಟ್ಟಡ ಮತ್ತು ಭಾರತದ ಸಂವಿಧಾನ ಹೀಗೆ ಹೊಸದಾಗಿ ಅನಾವರಣಗೊಂಡ ಧ್ವಜದಲ್ಲಿ ಭಾರತದ ಕಾನೂನು ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಧಾನ ಚಿಹ್ನೆಗಳಿವೆ. ಹೊಸ ಸುಪ್ರೀಂ ಕೋರ್ಟ್ ಧ್ವಜ ನೀಲಿ ಬಣ್ಣದಲ್ಲಿದೆ. ಚಿಹ್ನೆಯ ಮೇಲೆ ‘ಭಾರತದ ಸರ್ವೋಚ್ಚ ನ್ಯಾಯಾಲಯ’ ಮತ್ತು ‘ಯತೋ ಧರ್ಮಸ್ತತೋ ಜಯಃ’ ಎಂದು (ದೇವನಾಗರಿ ಲಿಪಿಯಲ್ಲಿ) ಕೆತ್ತಲಾಗಿದೆ.

ಇತ್ತೀಚೆಗೆ ಸಿಜೆಐ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ಅಂಗಳದಲ್ಲಿ ಅನಾವರಣಗೊಳಸಿದ ಹೊಸ ನ್ಯಾಯದೇವತೆಯ ಪ್ರತಿಮೆ ಸೀರೆಯಿಂದ ಅಲಂಕೃತವಾಗಿದ್ದು ಆಕೆಯ ಕಣ್ಣಿಗೆ ಈ ಹಿಂದೆ ಕಟ್ಟಿರುತ್ತಿದ್ದ ಬಟ್ಟೆಯನ್ನು ತೆಗೆಯಲಾಗಿದೆ. ಒಂದು ಕೈಯಲ್ಲಿ ತಕ್ಕಡಿ ಮತ್ತೊಂದು ಕೈಯಲ್ಲಿ ದೇಶದ ಸಂವಿಧಾನ ಹಿಡಿದಿರುವಂತೆ ಮೂರ್ತಿಯನ್ನು ಕೆತ್ತಲಾಗಿದೆ.

ವಕೀಲ ವರ್ಗ ಮನವಿ ಮಾಡಿದಂತೆ ಕೆಫೆ ಮತ್ತು ಲೈಬ್ರರಿ ಬದಲಿಗೆ ಪೂರ್ವ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸುವುದಕ್ಕೆ ಅದು ಆಕ್ಷೇಪ ವ್ಯಕ್ತಪಡಿಸಿದೆ. ಈಗಿನ ಕೆಫೆಟೇರಿಯಾ ವಕೀಲ ವರ್ಗದ ಅಗತ್ಯತೆ ಪೂರೈಸಲು ಅಸಮರ್ಪಕವಾಗಿರುವುದರಿಂದ ಗ್ರಂಥಾಲಯ ಮತ್ತು ಕೆಫೆ ಕಮ್‌ ಲಾಂಜ್‌ ಸೌಲಭ್ಯವನ್ನು ಅದು ಕೇಳಿತ್ತು. ಈಗಾಗಲೇ ವಸ್ತು ಸಂಗ್ರಹಾಲಯದ ವಿರುದ್ಧ ಧ್ವನಿ ಎತ್ತಿದ್ದರೂ ಅದರ ಕಾಮಗಾರಿ ಆರಂಭವಾಗಿರುವುದು ಕಳವಳಕಾರಿ ಎಂದು ಸಂಘ ತಿಳಿಸಿದೆ.

ಅತಿ ಭದ್ರತಾ ವಲಯದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸುತ್ತಿರುವುದನ್ನು ಸರ್ವಾನುಮತದಿಂದ ಖಂಡಿಸಿರುವ ಸಂಘ ಗ್ರಂಥಾಲಯ ಮತ್ತು ಕೆಫೆ ಕಮ್‌ ಲಾಂಜ್‌ ಸ್ಥಾಪಿಸುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X