ಮೊದಲ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ‘ಕೋವಿಶೀಲ್ಡ್ ಲಸಿಕೆ’ಯನ್ನು ಬಿಡುಗಡೆ ಮಾಡಿದ್ದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲ ಅವರು ಬಿಜೆಪಿಗೆ ಎಲೆಕ್ಟೋರಲ್ ಬಾಂಡ್‌ನ ಮೂಲಕ ಸುಮಾರು ₹52 ಕೋಟಿ ನೀಡಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ವರದಿ ಪ್ರಕಟಿಸಿರುವ ರಾಯಿಟರ್ಸ್ ಸುದ್ದಿ ಸಂಸ್ಥೆ ಪ್ರಕಾರ, ಈ ಭಾರೀ ಮೊತ್ತದ ಹಣವನ್ನು ಬಿಜೆಪಿಗೆ ದೇಣಿಗೆ ರೂಪದಲ್ಲಿ ನೀಡಲಾಗಿದೆ. 2022ರ ಆಗಸ್ಟ್‌ನ ಒಂದೇ ತಿಂಗಳಲ್ಲಿ ಈ ಗಮನಾರ್ಹ ದೇಣಿಗೆ ನೀಡಿದೆ ಎಂದು ವರದಿಯಾಗಿದೆ. 48 ಗಂಟೆಗಳಲ್ಲಿ 50 ಕೋಟಿ ದೇಣಿಗೆ ನೀಡಿದ್ದರೆ, ಉಳಿದ ಎರಡು ಕೋಟಿ ಮೊತ್ತವನ್ನು ಮುಂದಿನ 15 ದಿನಗಳ ಅವಧಿಯಲ್ಲಿ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಕಮಿಷನ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಗಳನ್ನು ಪರಿಶೀಲಿಸಿದ ನಂತರ ಈ ಮಾಹಿತಿಯನ್ನು ರಾಯಿಟರ್ಸ್ ಬಹಿರಂಗಪಡಿಸಿದೆ.
BIG EXPOSE 🚨
In a shocking revelation, a list of electoral bonds given to BJP is out.
Many big corporates donated massive chunks of money to BJP & received huge benefits in return.
e.g, Serum Institute of India had also donated ₹50 crores to BJP.
In return, they were… pic.twitter.com/mO7qKPUdNe
— Ankit Mayank (@mr_mayank) March 14, 2024
“ಆಗಸ್ಟ್ 2022 ರಲ್ಲಿ, ಔಷಧೀಯ ಕಂಪನಿಯಾದ ಸೀರಮ್ ಮೂರು ಕಂತುಗಳಲ್ಲಿ ಒಟ್ಟು 52.5 ಕೋಟಿಯನ್ನು ಪುಡೆಂಟ್ ಟ್ರಸ್ಟ್‌ಗೆ ವರ್ಗಾಯಿಸಿತ್ತು. ಆಗಸ್ಟ್ 1 ರಂದು 40 ಕೋಟಿ, ಆಗಸ್ಟ್ 2ರಂದು 10 ಕೋಟಿ ಮತ್ತು ಆಗಸ್ಟ್ 17 ರಂದು 2.5 ಕೋಟಿಯಷ್ಟು ಮೊತ್ತವನ್ನು ಪುಡೆಂಟ್ ಟ್ರಸ್ಟ್ ಮುಖಾಂತರ ಬಿಜೆಪಿಗೆ ದೇಣಿಗೆ ರೂಪದಲ್ಲಿ ವರ್ಗಾಯಿಸಿತ್ತು” ಎಂದು ತಿಳಿಸಿದೆ.
ಕೋವಿಡ್‌ನ ಸಂದರ್ಭದಲ್ಲಿ ಲಸಿಕೆ ತಯಾರಿಸುವಂತೆ ಸೀರಮ್ ಇನ್‌ಸ್ಟಿಟ್ಯೂಟ್‌ಗೆ ಕೇಂದ್ರ ಸರ್ಕಾರವು ಏಕಸ್ವಾಮ್ಯ ಹಕ್ಕು ನೀಡಿತ್ತು. ಯಾವುದೇ ಇತರ ಕಂಪನಿ ಅಥವಾ ಸರ್ಕಾರಿ ಸಂಸ್ಥೆಗಳಿಗೆ ಲಸಿಕೆಗಳನ್ನು ತಯಾರಿಸಲು ಅನುಮತಿಸಿರಲಿಲ್ಲ. ಇದಕ್ಕೆ ಪ್ರತಿಯಾಗಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ ಬಿಜೆಪಿಗೆ ₹52 ಕೋಟಿ ದೇಣಿಗೆ ನೀಡಿರುವುದಾಗಿ ತಿಳಿದುಬಂದಿದೆ.
CAT IS OUT OF THE BAG !!
Govt. Procured Covid Vaccine #Covishield from Serum Institute of India.
In Return, Serum Institute of India donated 50 crores to BJP via electoral bonds.
Hmm !! pic.twitter.com/qniXgPa87Y
— Mahua Moitra Fans (@MahuaMoitraFans) March 14, 2024
2011 ರಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಅದಾರ್ ಪೂನಾವಾಲ್ಲಾ ಅವರು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಸುದ್ದಿಯಲ್ಲಿದ್ದರು. ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ್ದ ಸೀರಮ್ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಿದರು. ಇದನ್ನು ಕೇಂದ್ರ ಸರ್ಕಾರವು ಲಕ್ಷಾಂತರ ಜನರಿಗೆ ವಿತರಿಸಿತ್ತು.
ಚುನಾವಣಾ ಬಾಂಡ್
ಫೆಬ್ರವರಿ 15ರಂದು ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಮಾರ್ಚ್ 13ರೊಳಗೆ ದೇಣಿಗೆಯ ವಿವರಗಳನ್ನು ಸಾರ್ವಜನಿಕಗೊಳಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. 2017ರಲ್ಲಿ ನರೇಂದ್ರ ಮೋದಿ ಸರ್ಕಾರ ತಂದಿದ್ದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಲಾಗಿದೆ.
ಸುಪ್ರೀಂ ಕೋರ್ಟ್ ಚಾಟಿ ಬಳಿಕ ಎಚ್ಚೆತ್ತುಕೊಂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಭಾರತೀಯ ಚುನಾವಣಾ ಆಯೋಗಕ್ಕೆ ಎಲ್ಲ ಚುನಾವಣಾ ಬಾಂಡ್‌ಗಳ ಡೇಟಾವನ್ನು ಸಲ್ಲಿಸಿದೆ. ಭಾರತೀಯ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಮಾರ್ಚ್ 15ರಂದು ಸಾರ್ವಜನಿಕರಿಗಾಗಿ ಪ್ರಕಟಿಸುವ ನಿರೀಕ್ಷೆ ಇದೆ.
