ಆಗಸ್ಟ್ 1ರಿಂದ ಬಾಕಿ ಪರಿಶೀಲನೆ ಸೇರಿ ಯುಪಿಐ ವಹಿವಾಟಿನಲ್ಲಿ ಹಲವು ಬದಲಾವಣೆಗಳು

Date:

Advertisements

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ಆಗಸ್ಟ್ 1ರಿಂದ ಜಾರಿಯಾಗುವಂತೆ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ)ನಲ್ಲಿ ಬದಲಾವಣೆಗಳನ್ನು ಪ್ರಕಟಿಸಿದೆ. ಬದಲಾವಣೆಗಳಲ್ಲಿ ಪ್ರಮುಖವಾಗಿ ಬಾಕಿ ಪರಿಶೀಲನೆ ಮತ್ತು ವಹಿವಾಟಿನ ಸ್ಥಿತಿಗತಿ ಸೇರಿದೆ. ಇಂಟರ್‌ಫೇಸನ್ನು ಸ್ಥಿರ ಮತ್ತು ಹೆಚ್ಚು ದಕ್ಷವಾಗಿ ಮಾಡುವ ಉದ್ದೇಶದಿಂದ ಈ ಬದಲಾವಣೆ ತರಲಾಗಿದೆ.

ಯುಪಿಐ ಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಸ್ಪಂದನೆ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗು 2025ರ ಏಪ್ರಿಲ್ 26ರಂದು ಹೊರಡಿಸಿದ ಸುತ್ತೋಲೆಯಲ್ಲಿ ಎನ್‌ಸಿಪಿಐ ಹೇಳಿತ್ತು. ಈ ಹೊಂದಾಣಿಕೆಯು ಪಾವತಿಸುವ ಬ್ಯಾಂಕ್‌ಗಳಿಗೆ, ಫಲಾನುಭವಿ ಬ್ಯಾಂಕ್‌ಗಳಿಗೆ ಮತ್ತು ಪಾವತಿ ಸೇವೆ ಒದಗಿಸುವ ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂಗಳಿಗೆ ಲಾಭವಾಗಲಿದೆ ಎಂದು ಹೇಳಿತ್ತು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಾನವೀಯತೆಯ ಪಸೆ ಉಳಿದಿದೆಯೇ ತುಸುವಾದರೂ?

ಬಾಕಿ ತಪಾಸಣೆಗೆ ದೈನಿಕ ಮಿತಿ: ಯುಪಿಐ ಆ್ಯಪ್ ನಲ್ಲಿ ಬಳಕೆದಾರ ದಿನಕ್ಕೆ ಕೇವಲ 50 ಬಾರಿ ಮಾತ್ರ ತನ್ನ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಸಾಧ್ಯವಾಗಲಿದೆ. ಈ ಮಿತಿಯು ಪ್ರತಿ ಆ್ಯಪ್‌ಗೆ ಪ್ರತ್ಯೇಕವಾಗಿ ಅನ್ವಯವಾಗುತ್ತದೆ. ವಹಿವಾಟು ಸ್ಥಿತಿ ತಪಾಸಣೆಯ ಮಿತಿಯನ್ನೂ ನಿಗದಿಪಡಿಸಲಾಗಿದ್ದು, ಪ್ರತಿ ಪರಿಶೀಲನೆಯ ನಡುವೆ 90 ಸೆಕೆಂಡ್ ಅಂತರದಲ್ಲಿ 3 ಬಾರಿ ಮಾತ್ರ ಪರಿಶೀಲನೆ ಮಾಡಬಹುದಾಗಿದೆ. ಅಂತೆಯೇ ಬೆಳಿಗ್ಗೆ 10ಕ್ಕೆ ಮುನ್ನ, ಮಧ್ಯಾಹ್ನ 1 ರಿಂದ ಸಂಜೆ 5 ಹಾಗೂ ರಾತ್ರಿ 9.30ರ ಬಳಿಕ ಸ್ವಯಂಚಾಲಿತ ವಹಿವಾಟುಬ್ಯಾಂಕ್ ಗಳಿಗೆ ವ್ಯವಸ್ಥೆ ಇರುತ್ತದೆ.

  • ದಿನಕ್ಕೆ 25 ಬಾರಿ ಮಾತ್ರ ಸಂಪರ್ಕಿತ ಬ್ಯಾಂಕ್ ಖಾತೆಗಳನ್ನು ನೋಡಬಹುದಾಗಿದೆ.
  • ಪಾವತಿ ವಾಪಸ್ಸಾತಿ ಮಿತಿ: 30 ದಿನಗಳಲ್ಲಿ ಪಾವತಿ ವಾಪಸ್ಸಾತಿ ಮಿತಿಯನ್ನು 10ಕ್ಕೆ ಏರಿಸಲಾಗಿದೆ.
  • ಪಾವತಿ ದೃಢಪಡಿಸುವ ಮುನ್ನ ಸ್ವೀಕರಿಸುವ ವ್ಯಕ್ತಿಯ ಬ್ಯಾಂಕ್‌ನಲ್ಲಿ ನೋಂದಾಯಿಸಲ್ಪಟ್ಟ ಹೆಸರು ಪ್ರದರ್ಶನಗೊಳ್ಳಲಿದೆ.
  • ಯುಪಿಐ ಬಳಕೆಯ ಮೇಲೆ ಎನ್‌ಸಿಪಿಐ ನಿಗಾ ಇಡಲಿದೆ. ಅನುಸರಣೆ ಮಾಡದ ಬ್ಯಾಂಕ್ ಹಾಗೂ ಆ್ಯಪ್‌ಗಳ ಮೇಲೆ ದಂಡ ವಿಧಿಸಲಾಗುತ್ತದೆ ಮತ್ತು ಲಭ್ಯತೆಯನ್ನು ನಿರ್ಬಂಧಿಸಲಾಗುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಾತಿ ಧರ್ಮ ಭಾಷೆಗಳ ಸಂಘರ್ಷ ತಡೆಗೆ ಗಾಂಧೀಜಿ ದಾರಿ ಮುಖ್ಯ: ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ

ʼʼಜಾತಿ,ಧರ್ಮಗಳ, ಮಧ್ಯೆ, ಭಾಷೆ ಮತ್ತು ಪ್ರದೇಶಗಳ ಮಧ್ಯೆ ವೈಷಮ್ಯ ಮಾಡಿಕೊಂಡು ಸಂಘರ್ಷ...

ಒಳ ಮೀಸಲಾತಿ | ಎಐಸಿಸಿ ಹಸ್ತಕ್ಷೇಪಕ್ಕೆ ಹೆಚ್ಚಿದ ಆಗ್ರಹ, ದೆಹಲಿ ಬಿಡದಿರಲು ಅಲೆಮಾರಿ ಸಂಸತ್ತು ತೀರ್ಮಾನ

ಒಳ ಮೀಸಲಾತಿ ವಿತರಣೆಯಲ್ಲಿ ಕರ್ನಾಟಕದ ಅಸ್ಪೃಶ್ಯ ದಲಿತ ಅಲೆಮಾರಿ ಸಮುದಾಯಗಳಿಗೆ ಆಗಿರುವ...

RSSಅನ್ನು ‘ಸರ್ವಾಧಿಕಾರಿ ದೃಷ್ಟಿಕೋನ ಹೊಂದಿರುವ ಕೋಮುವಾದಿ ಸಂಸ್ಥೆ’ ಎಂದಿದ್ದರು ಗಾಂಧಿ

ಆರ್‌ಎಸ್‌ಎಸ್‌ ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಆರ್‌ಎಸ್‌ಎಸ್‌ಅನ್ನು ಹೊಗಳಿರುವ ಪ್ರಧಾನಿ ಮೋದಿ ಅವರು,...

Download Eedina App Android / iOS

X