ದೆಹಲಿ ನಂತರ ಜೈಪುರ ಶಾಲೆಗಳಿಗೆ ಬಾಂಬ್ ಬೆದರಿಕೆ

Date:

ದೆಹಲಿ ಶಾಲೆ ಹಾಗೂ ಆಸ್ಪತ್ರೆಗಳ ನಂತರ ರಾಜಸ್ಥಾನದ ರಾಜಧಾನಿ ಜೈಪುರ ದ ಶಾಲೆಗಳಿಗೆ ಇಮೇಲ್‌ ಮೂಲಕ ಇಂದು ಬಾಂಬ್‌ ಬೆದರಿಕೆಯೊಡ್ಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಬಾಂಬ್‌ ಬೆದರಿಕೆ ಬಂದ ತಕ್ಷಣ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳನ್ನು ಹೊರಗೆ ಕಳಿಸಲಾಗಿದೆ. ಬಾಂಬ್‌ ಹಾಗೂ ಶ್ವಾನ ದಳಗಳೊಂದಿಗೆ ಪೊಲೀಸರು ಸಹ ಶಾಲೆಗಳಿಗೆ ತಲುಪಿದ್ದು, ಪರಿಶೋಧನೆ ನಡೆಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

“ನಾಲ್ಕರಿಂದ ಐದು ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿದೆ. ಪೊಲೀಸರು ಶಾಲೆಗಳಿಗೆ ತಲುಪಿದ್ದಾರೆ ಎಂದು ಜೈಪುರದ ಪೊಲೀಸ್ ಆಯುಕ್ತರಾದ ಬಿಜು ಜಾರ್ಜ್ ತಿಳಿಸಿದ್ದಾರೆ.

ಇಮೇಲ್‌ ಮೂಲಕ ಬೆದರಿಕೆ ಬಂದಿರುವ ಕಾರಣ ಇದಕ್ಕೆ ಕಾರಣಕರ್ತರಾದವರನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

ಒಂದು ದಿನದ ಹಿಂದೆಯಷ್ಟೆ(ಮೇ.12) ರಾಷ್ಟ್ರ ರಾಜಧಾನಿ ದೆಹಲಿಯ ಎರಡು ಪ್ರಮುಖ ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ ಕರೆ ಬಂದಿತ್ತು. ಬುರಾರಿ ಆಸ್ಪತ್ರೆ ಹಾಗೂ ಸಂಜಯ್‌ ಗಾಂಧಿ ಆಸ್ಪತ್ರೆಗೆ ಇಮೇಲ್‌ ಮೂಲಕ ಬೆದರಿಕೆ ಬಂದಿತ್ತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅರವಿಂದ್ ಕೇಜ್ರಿವಾಲ್ ಆಗಮನ ಮೋದಿ ನಿರ್ಗಮನದ ಸೂಚಕವೇ?

ಕಳೆದ ವಾರ ದೆಹಲಿ ಹಾಗೂ ಗುಜರಾತ್‌ನ ಅಹಮದಾಬಾದ್‌ನ ಶಾಲೆಗಳಿಗೆ ಇಮೇಲ್‌ ಮೂಲಕ ಹುಸಿ ಬಾಂಬ್‌ ಬೆದರಿಕೆ ಸ್ವೀಕರಿಸಲಾಗಿತ್ತು.

ದೆಹಲಿ, ನೋಯ್ಡಾ ಹಾಗೂ ಗುರುಗ್ರಾಮ್‌ನ ಸುಮಾರು 131 ಶಾಲೆಗಳಿಗೆ ಮೇ 2 ರಂದು ಬೆದರಿಕೆ ಕರೆ ಬಂದಿತ್ತು.

ಮೂರು ದಿನಗಳ ನಂತರ ಅಹಮದಾಬಾದ್‌ನ ಮೂರು ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿತ್ತು.

ಏಕ ಐಪಿ ಅಡ್ರಸ್‌ ಮೂಲಕ ಶಾಲೆಗಳು ಬೆದರಿಕೆ ಇಮೇಲ್‌ ಸ್ವೀಕರಿಸಿದ್ದವು. ಇವು ವಿಪಿಎಲ್‌ ಸಂಪರ್ಕ ಬಳಸಿ ಇಮೇಲ್‌ ಮಾಡಲಾಗಿತ್ತು. ಇವುಗಳ ಮೂಲ ರಷ್ಯಾದ ಡೊಮೈನ್‌ ಹೊಂದಿದ್ದವು.

ಇದಕ್ಕೂ ಮೊದಲು ಬೆಂಗಳೂರು, ಚೆನ್ನೈ, ಮುಂಬೈ ಶಾಲೆಗಳಿಗೆ ಇದೇ ರೀತಿ ಇಮೇಲ್ ಮೂಲಕ ಬೆದರಿಕೆ ಕರೆ ಬಂದಿದ್ದವು. ಆನಂತರ ಇವು ಹುಸಿ ಬೆದರಿಕೆ ಎಂದು ತಿಳಿಯಲಾಯಿತು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಓವೈಸಿ: ಅರ್ಜಿಯ ತುರ್ತು ವಿಚಾರಣೆಗೆ ಮನವಿ

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ನಡೆಸುತ್ತಿರುವ ಚುನಾವಣಾ ಆಯೋಗದ...

ಪೊಲೀಸರು ಇಷ್ಟೊಂದು ಭೀಕರ ಮತ್ತು ಕ್ರೂರವಾಗಿ ವರ್ತಿಸುವುದೇಕೆ?

ಸ್ವತಂತ್ರ ದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಶಾಂತಿಯುತವಾಗಿ ಬೀದಿಗಿಳಿದ ಯುವಕ-ಯುವತಿಯರು,...

ಪೈಲಟ್‌ನಿಂದ ವಿಮಾನ ಅಪಹರಣದ ತುರ್ತು ಸಂದೇಶ: ಜೈಪುರದಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್‌ನಿಂದ ಶಂಕಿತ...

ದೆಹಲಿ SIR | ತಾರ್ಕಿಕ ವ್ಯತ್ಯಾಸದ ಲಿಸ್ಟ್‌ನಲ್ಲಿ ಮುಸ್ಲಿಂ ಮತದಾರರೇ ಟಾರ್ಗೆಟ್!

ದೆಹಲಿಯಲ್ಲಿ EC ಕೈಗೊಂಡಿರುವ SIR ಪ್ರಕ್ರಿಯೆಯ ಕರಡು ಮತದಾರರ ಪಟ್ಟಿ ವಿಶ್ಲೇಷಣೆಯು...