ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಬ್ರಮಣಿಯನ್ ಸ್ವಾಮಿ ಚೀನಾವು ಭಾರತವನ್ನು ಆಕ್ರಮಿಸಿಕೊಂಡಿರುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಚೀನಾ ಭಾರತದ ಗಡಿ ಆಕ್ರಮಿಸಿಕೊಂಡರೂ ಪ್ರಧಾನಿ ಮೌನವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ “ಭಾರತ ಮಾತೆಗೆ ಮೋದಿ ದ್ರೋಹ ಬಗೆದಿದ್ದಾರೆಂದು ಘೋಷಿಸೋಣವೇ” ಎಂದು ಪ್ರಶ್ನಿಸಿದ್ದಾರೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅರುಣಾಚಲ ಪ್ರದೇಶದಲ್ಲಿ ಕನಿಷ್ಠ 60 ಕಿಲೋಮೀಟರ್ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ವರದಿಯನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ ಚೀನಾದೊಂದಿಗೆ ರಾಯಭಾರಿ ಮಟ್ಟದ ಸಂಬಂಧವನ್ನು ಕಡಿದುಕೊಳ್ಳಲು ಆಗ್ರಹಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ನಾಯಕ, “ಚೀನಾವು ಪೀಪಲ್ಸ್ ಲಿಬರೇಶನ್ ಆರ್ಮಿಯು (ಪಿಎಲ್‌ಎ) ಭಾರತೀಯ ಭೂಪ್ರದೇಶದೊಳಗೆ 60 ಕಿ.ಮೀ.ನಷ್ಟು ಆಕ್ರಮಿಸಿಕೊಂಡು ಬೀಡುಬಿಟ್ಟಿದೆ ಎಂದು ವರದಿಯಾಗಿದೆ. ಈಗ ನಾವು ಭಾರತ ಮಾತೆಯ ಗೌರವಕ್ಕೆ ಮೋದಿ ದ್ರೋಹ ಬಗೆದಿದ್ದಾರೆ ಎಂದು ಘೋಷಿಸೋಣವೇ? ಚೀನಾದೊಂದಿಗೆ ರಾಯಭಾರಿ ಮಟ್ಟದ ಸಂಬಂಧವನ್ನು ಕಡಿದುಕೊಳ್ಳಲು ನಾನು ಆಗ್ರಹಿಸುತ್ತೇನೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮೋದಿ 75 ವರ್ಷಕ್ಕೆ ನಿವೃತ್ತಿ ಘೋಷಿಸದಿದ್ದರೆ, ಕಿತ್ತು ಹಾಕಲಾಗುತ್ತದೆ: ಸುಬ್ರಮಣಿಯನ್ ಸ್ವಾಮಿ
“ಮಾಲ್ಡೀವ್ಸ್ ಸಿಂಡ್ರೋಮ್ ಬಾಂಗ್ಲಾದೇಶದಲ್ಲಿ ಮೌನವಾಗಿ ಹರಡುತ್ತಿದೆ ಮತ್ತು ಮೋದಿ ಅವರ ಪರಂಪರೆಯು ಭಾರತದ ವಿಘಟನೆಗಾಗಿ ಕೆಲಸ ಮಾಡುವ ನೆರೆಹೊರೆಯವರನ್ನು ಸೃಷ್ಟಿಸುತ್ತಿದೆ. ಮುಂಬರುವ 25 ವರ್ಷಗಳ ‘ಅದ್ಭುತ’ ಮೋದಿ ಪರಂಪರೆ: ಭಾರತವನ್ನು ಸುತ್ತುವರೆದಿರುವ ನೆರೆಹೊರೆಯವರು ನಮ್ಮ ವಿಘಟನೆಗಾಗಿ ಕೆಲಸ ಮಾಡುತ್ತಾರೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಬಿಜೆಪಿಯ ಹಿರಿಯ ನಾಯಕ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವಾರು ಬಾರಿ ಸರ್ಕಾರದ ಕೆಲವು ನಿಲುವುಗಳನ್ನು ವಿರೋಧಿಸಿದ್ದಾರೆ. ಪ್ರಧಾನಿ ವಿರುದ್ಧ, ವಿದೇಶಾಂಗ ನೀತಿಯ ವಿರುದ್ಧ ಕಿಡಿಕಾರಿದ್ದಾರೆ.
Chinese PLA incursion: Troops reportedly camp 60 km inside Indian Territory: Shall we declare Modi as betraying Bharat Mata’s honour? I demand breaking Ambassador level relationship with China. https://t.co/7nhqCgmCJA
— Subramanian Swamy (@Swamy39) September 11, 2024
