Shame on you ದೆಹಲಿ ಪೊಲೀಸ್; ನಾಚಿಕೆ ಆಗಲ್ವಾ ಮೋದಿ?

Date:

ಪೊಲೀಸರು ಮತ್ತು ಯಾವುದೇ ಬ್ಯಾಡ್ಜ್‌ ಇಲ್ಲದ ಸಮವಸ್ತ್ರ ಧರಿಸಿದ್ದ ವ್ಯಕ್ತಿಗಳು ಪ್ರತಿಭಟನಾನಿರಕ ವಿದ್ಯಾರ್ಥಿಗಳು ಮತ್ತು ಯುವಜನರ ಮೇಲೆ ತಲೆ, ಮುಖ, ಕುತ್ತಿಗೆಯನ್ನೂ ನೋಡದೆ ಭೀಕರವಾಗಿ ಲಾಠಿ ಬೀಸಿದ್ದಾರೆ. ತಲೆಗಳಿಗೆ ನೇರವಾಗಿ ಹೊಡೆದಿದ್ದಾರೆ. ಒಬ್ಬರನ್ನೇ ಹಲವರು ಸುತ್ತುವರೆದು,ನೆಲಕ್ಕೆ ಬೀಳುವವರೆಗೂ ಅಥವಾ ಹಿಂದೆ ಸರಿಯುವವರೆಗೂ ಥಳಿಸಿದ್ದಾರೆ.

- Advertisement -

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಅಪರಾಧವಲ್ಲ. ಆಡಳಿತದ ವಿರುದ್ಧ ಪ್ರಶ್ನೆ ಕೇಳುವುದು ದೇಶದ್ರೋಹವಲ್ಲ. ವಿದ್ಯಾರ್ಥಿಗಳು ತಮ್ಮ ಭವಿಷ್ಯ, ಶಿಕ್ಷಣ, ಉದ್ಯೋಗ ಅಥವಾ ಸಾರ್ವಜನಿಕ ನೀತಿಗಳ ವಿರುದ್ಧ ಧ್ವನಿ ಎತ್ತುವುದು ಸಂವಿಧಾನ ನೀಡಿರುವ ಹಕ್ಕು. ಆದರೆ, ಸೋಮವಾರ ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ನಡೆದ ದೃಶ್ಯಗಳು ಭಾರತದ ಪ್ರಜಾಪ್ರಭುತ್ವದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಅನೇಕ ವಿಡಿಯೋಗಳಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ದಾಳಿ, ವಿದ್ಯಾರ್ಥಿನಿಯ ಮೇಲೆ ದುರ್ವರ್ತನೆ, ನೆಲಕ್ಕೆ ಬಿದ್ದವರನ್ನು ಎಳೆದೊಯ್ಯುವುದು, ಗಾಯಗೊಂಡವರ ಮೇಲೆ ಮತ್ತೆ ಹಲ್ಲೆ ನಡೆಸುವುದು ಮುಂತಾದ ದೃಶ್ಯಗಳು ಮನಕಲಕಿವೆ. ಹೃದಯ ಹಿಂಡಿವೆ. ಕಾರ್ಯಾಚರಣೆ ಹೆಸರಿನಲ್ಲಿ ನಡೆಯುವ ಪೊಲೀಸ್ ದೌರ್ಜನ್ಯ-ಕ್ರೌರ್ಯದ ಬಗ್ಗೆ ಕಳವಳ ಹುಟ್ಟುಹಾಕಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಯಾವುದೇ ಪ್ರಜಾಪ್ರಭುತ್ವದಲ್ಲಿ ಪೊಲೀಸರ ಜವಾಬ್ದಾರಿ ಕಾನೂನು ಸುವ್ಯವಸ್ಥೆ ಕಾಪಾಡುವುದು. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡುವ ಹೆಸರಿನಲ್ಲಿ ನಾಗರಿಕರ ಮೂಲಭೂತ ಹಕ್ಕುಗಳನ್ನು ತುಳಿಯುವ ಅಧಿಕಾರ ಅವರಿಗಿಲ್ಲ. ಆದರೆ, ಸೋಮವಾರ ದೆಹಲಿಯಲ್ಲಿ ದೆಹಲಿ ಪೊಲೀಸರ ಕ್ರೌರ್ಯದ ಅಟ್ಟಹಾಸವೇ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋಗಳನ್ನು ಗಮನಿಸಿದರೆ ಮೋದಿ ಸರ್ಕಾರ ಮತ್ತು ದೆಹಲಿ ಪೊಲೀಸರ ಕ್ರೌರ್ಯ ಹಿಟ್ಲರ್‌ನನ್ನೂ ಮೀರಿಸುವಂತಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಅರ್ಥವಾಗುತ್ತದೆ.

ಪೊಲೀಸರು ಮತ್ತು ಯಾವುದೇ ಬ್ಯಾಡ್ಜ್‌ ಇಲ್ಲದ ಸಮವಸ್ತ್ರ ಧರಿಸಿದ್ದ ವ್ಯಕ್ತಿಗಳು ಪ್ರತಿಭಟನಾನಿರಕ ವಿದ್ಯಾರ್ಥಿಗಳು ಮತ್ತು ಯುವಜನರ ಮೇಲೆ ತಲೆ, ಮುಖ, ಕುತ್ತಿಗೆಯನ್ನೂ ನೋಡದೆ ಭೀಕರವಾಗಿ ಲಾಠಿ ಬೀಸಿದ್ದಾರೆ. ತಲೆಗಳಿಗೆ ನೇರವಾಗಿ ಹೊಡೆದಿದ್ದಾರೆ. ಒಬ್ಬರನ್ನೇ ಹಲವರು ಸುತ್ತುವರೆದು,ನೆಲಕ್ಕೆ ಬೀಳುವವರೆಗೂ ಅಥವಾ ಹಿಂದೆ ಸರಿಯುವವರೆಗೂ ಥಳಿಸಿದ್ದಾರೆ.

ಮಾತ್ರವಲ್ಲ, ನೆಲಕ್ಕೆ ಬಿದ್ದವರ ಮೇಲೂ ದೌರ್ಜನ್ಯ ಎಸಗಿದ್ದಾರೆ. ಕೆಲವು ವಿಡಿಯೋಗಳಲ್ಲಿ; ನೆಲಕ್ಕೆ ಉರುಳಿದ ಪ್ರತಿಭಟನಾಕಾರರನ್ನು ಎಬ್ಬಿಸುವ ಬದಲು ಅವರ ಮೇಲೆಯೇ ಮತ್ತೆ ಹಲ್ಲೆ ನಡೆಸಲಾಗಿದೆ. ಅಮಾನುಷವಾಗಿ ಎಳೆದೊಯ್ಯುವುದು ಕಂಡುಬಂದಿದೆ. ಮಾತ್ರವಲ್ಲ, ಮೊಳೆ ಹೊಡೆದ ಲಾಠಿಗಳನ್ನು ಬಳಸಿ ಹಲ್ಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ.

CJP Protest Photos 12

ಪ್ರತಿಭಟನೆಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತು ದೇಶದಾದ್ಯಂತ ಸರ್ಕಾರಗಳು ಮತ್ತು ನ್ಯಾಯಾಲಯಗಳು ಹಲವು ಬಾರಿ ಮಾರ್ಗಸೂಚಿಗಳನ್ನು ನೀಡಿವೆ. ಮಹಿಳೆಯರನ್ನು ಬಂಧಿಸುವುದು, ಅವರೊಂದಿಗೆ ವರ್ತಿಸುವುದು, ಬಲಪ್ರಯೋಗ ನಡೆಸುವುದು ಇವೆಲ್ಲಕ್ಕೂ ನಿರ್ದಿಷ್ಟ ನಿಯಮಗಳಿವೆ. ಆದರೆ, ನಿನ್ನೆಯ ಪ್ರತಿಭಟನೆ ವೇಳೆ ಪೊಲೀಸರು ಈ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿದ್ದಾರೆ. ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಪುರುಷ ಪೊಲೀಸ್ ಸಿಬ್ಬಂದಿಗಳೇ ವಿದ್ಯಾರ್ಥಿನಿಯರನ್ನೂ ಎಳೆದು ತಳ್ಳಾಡಿದ್ದಾರೆ. ಲಾಠಿಯಿಂದ ಅಮಾನುಷವಾಗಿ ಥಳಿಸಿದ್ದಾರೆ. ವಿದ್ಯಾರ್ಥಿನಿಯರ ಬಟ್ಟೆಗಳನ್ನೂ ಹರಿದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಅಷ್ಟೇ ಏಕೆ? ಓಡಿ ಹೋಗುತ್ತಿದ್ದವರನ್ನು ಬೆನ್ನಟ್ಟಿ ಹಲ್ಲೆಗೈಯ್ಯಲಾಗಿದೆ. ಪ್ರತಿಭಟನಾನಿರತ ಗುಂಪು ಚದುರಿದ ನಂತರ, ಪಕ್ಕಕ್ಕೆ ಓಡುತ್ತಿದ್ದ ಯುವಜನರನ್ನು ಪೊಲೀಸರು ಬೆನ್ನಟ್ಟಿ ಥಳಿಸಿರುವ ಹಾಗೂ ಪ್ರತಿಭಟನಾಕಾರರ ಕೈ-ಕಾಲುಗಳನ್ನು ಹಿಂಸಾತ್ಮಕವಾಗಿ ಹಿಡಿದು, ರಸ್ತೆಗಳಲ್ಲಿ ಎಳೆದೊಯ್ದು, ಪೊಲೀಸ್‌ ವಾಹನಗಳಿಗೆ ದಬ್ಬಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಗಾಯಗೊಂಡ ಯುವಜನರು ಕೂಡಲೇ ಚಿಕಿತ್ಸೆ ತೆರಳಲು ಬಿಡದೆ, ಗಾಯಗೊಂಡವರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡು ಹಿಂಸಿಸಿದ್ದಾರೆ ಎಂದು ಸಿಜೆಪಿ ಆರೋಪಿಸಿದೆ.

ಜಂತರ್‌ ಮಂತರ್‌, ಪ್ರತಿಭಟನೆ, ಸಿಜೆಪಿ, ಮೋದಿ ಸರ್ಕಾರ, ಪರೀಕ್ಷಾ ಅಕ್ರಮ, ಧರ್ಮೇಂದ್ರ ಪ್ರಧಾನ್, ಸಂಸತ್ ಚಲೋ, Jantar Mantar, Protest, CJP, Modi Government, Examination Illegality, Dharmendra Pradhan, Parliament Chalo, ಉಪವಾಸ ಸತ್ಯಾಗ್ರಹ, Hunger Strike

ಗಮನಾರ್ಹವಾಗಿ, ಸಮವಸ್ತ್ರವಿಲ್ಲದ ಕೆಲವರು ಲಾಠಿ ಹಿಡಿದು ಪೊಲೀಸರೊಂದಿಗೆ ಸೇರಿ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸಗಿರುವ ದೃಶ್ಯಗಳು ಕಂಡುಬಂದಿವೆ. ಅವರು ಯಾರು? ಮೋದಿ ಸರ್ಕಾರ ಮತ್ತು ಬಿಜೆಪಿ ಪ್ರಯೋಜಿತ ಖಾಸಗಿ ವ್ಯಕ್ತಿಗಳು. ಪೊಲೀಸರ ಜೊತೆಗೆ ಖಾಸಗಿ ಗೂಂಡಾಗಳನ್ನೂ ಛೂಬಿಟ್ಟು ಪ್ರತಿಭಟನಾಕಾರರ ಮೇಲೆ ಮೋದಿ ಸರ್ಕಾರ ಕ್ರೌರ್ಯ ಮರೆದಿದೆ ಎಂದು ಸಿಜೆಪಿ ಆರೋಪಿಸಿದೆ.

ಪೊಲೀಸರ ಈ ಭೀಕರ ಹಿಂಸಾಚಾರದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಜನರು ಗಾಯಗೊಂಡಿದ್ದಾರೆ. 135ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ, ಓರ್ವ ವಿದ್ಯಾರ್ಥಿನಿಯ ತಲೆಗೆ ಗಂಭೀರ ಪೆಟ್ಟುಬಿದ್ದಿದ್ದು, ಆಕೆಯ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.

ಇಷ್ಟೆಲ್ಲ ಭೀಕರ ಕೃತ್ಯಗಳನ್ನು ದೆಹಲಿ ಪೊಲೀಸರು ಎಸಗಿದ್ದರೂ, ಪ್ರಧಾನಿ ಮೋದಿ ಮತ್ತು ಅವರ ಪಟಾಲಮ್ ನಿರ್ಲಜ್ಜ ಮೌನಕ್ಕೆ ಶರಣಾಗಿದೆ. ಆದಾಗ್ಯೂ ಪ್ರಧಾನಿ ಮೋದಿ ಅವರು ಹಲವು ಸಂದರ್ಭಗಳಲ್ಲಿ ಭಾರತದ ಪ್ರಜಾಪ್ರಭುತ್ವದ ಶಕ್ತಿಯನ್ನು ವಿಶ್ವದ ಮುಂದೆ ಹೆಮ್ಮೆಯಿಂದ ಉಲ್ಲೇಖಿಸಿದ್ದಾರೆ. ಆದರೆ, ರಾಷ್ಟ್ರ ರಾಜಧಾನಿಯಲ್ಲೇ ವಿದ್ಯಾರ್ಥಿಗಳು ಪೊಲೀಸರ ಲಾಠಿಯಿಂದ ರಕ್ತಸಿಕ್ತರಾಗುವ ಚಿತ್ರಗಳು ಹೊರಬಂದಾಗ, ಮೋದಿ ಮೌನವಾಗಿದ್ದಾರೆ. ಆದ್ದರಿಂದಲೇ, ಮೋದಿ ಕ್ರೌರ್ಯವನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್ ಅವರು ಹಿಟ್ಲರ್‌ಗೆ ಹೋಲಿಸಿದ್ದಾರೆ.

ಮೋದಿ ಸರ್ಕಾರವು ಪ್ರಶ್ನಿಸುವವರನ್ನು, ವಿಮರ್ಶಿಸುವವರನ್ನು ಶತ್ರುವಾಗಿ ನೋಡುತ್ತದೆ. ದಮನಿಸುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ಆದರೂ, ಮೋದಿ ಸರ್ಕಾರದ ಕ್ರೌರ್ಯಕ್ಕೆ ದೇಶದ ಯುವಜನರು ಮಣಿದಿಲ್ಲ. ಬದಲಾಗಿ, ದೆಹಲಿಯಲ್ಲಿ ಮಂಗಳವಾರವೂ ಒಗ್ಗೂಡಿದ್ದಾರೆ. ಈಗ, ದೆಹಲಿಯಲ್ಲಿ ಘೋಷಣೆಗಳು ಮೊಳಗುತ್ತಿವೆ. ‘ಶೇಮ್ ಆನ್ ಯೂ ದೆಹಲಿ ಪೊಲೀಸ್’ – ‘ನಾಚಿಕೆ ಆಗಲ್ವೇ ಮೋದಿ’ ಎಂಬ ಆಕ್ರೋಶ ದೇಶದ ಕಿವಿಗೆ ಬೀಳುತ್ತಿದೆ.

ಈ ಪರಿಸ್ಥಿತಿಯಲ್ಲಿ, ಮೋದಿ ಮತ್ತು ಅವರ ಪಕ್ಷವು ಒಂದು ಸತ್ಯವನ್ನು ಅರಿತುಕೊಳ್ಳಬೇಕು; ‘ಭಯದ ಮೇಲೆ ನಿಂತ ವ್ಯವಸ್ಥೆ ಕೆಲಕಾಲ ಉಳಿಯಬಹುದು; ಆದರೆ ಜನರ ವಿಶ್ವಾಸದ ಮೇಲೆ ನಿಂತ ವ್ಯವಸ್ಥೆಯಷ್ಟೇ ಶಾಶ್ವತ’. ಮೋದಿ ಸರ್ಕಾರದ ಅಳಿವು ಈ ದೇಶದ ಯುವಜನರ ಕೈಯಲ್ಲಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...

ಹೊರದೇಶಗಳ ದೊಂಬಿಯನ್ನು ಭಾರತದ ಯುವ ಹೋರಾಟಕ್ಕೆ ಸಮೀಕರಿಸುತ್ತಿರುವ ʼಮಡಿಲ ಮಾಧ್ಯಮʼಗಳು; ಇದೇನಾ ಪತ್ರಿಕೋದ್ಯಮ?

ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ...

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...