ಶಿರೂರು ದುರಂತ | ಭಾರೀ ಜನಸ್ತೋಮದೊಂದಿಗೆ ತವರಲ್ಲಿ ಕೇರಳದ ಲಾರಿ ಚಾಲಕ ಅರ್ಜುನ್ ಅಂತ್ಯಸಂಸ್ಕಾರ

Date:

Advertisements

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡ ಕುಸಿತ ದುರಂತದಲ್ಲಿ ಬರೋಬ್ಬರಿ 72 ದಿನಗಳ ಬಳಿಕ ಪತ್ತೆಯಾಗಿದ್ದ ಕೇರಳದ ಭಾರತ್ ಬೆಂಝ್ ಲಾರಿ ಚಾಲಕ ಅರ್ಜುನ್ ಮೃತದೇಹದ ಅಂತ್ಯಸಂಸ್ಕಾರವು ಇಂದು ಭಾರೀ ಜನಸ್ತೋಮದೊಂದಿಗೆ ಅವರ ಊರಾದ ಕೋಝಿಕ್ಕೋಡ್‌ನ ಕನ್ನಾಡಿಕ್ಕಲ್‌ನಲ್ಲಿ ನೆರವೇರಿತು.

ಕಳೆದ ಜುಲೈ 16ರಂದು ಶಿರೂರು ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿ ಎರಡು ತಿಂಗಳ ಬಳಿಕ ನಡೆಸಿದ ಡ್ರಜ್ಜಿಂಗ್ ಕಾರ್ಯಾಚರಣೆಯ ವೇಳೆ ಗಂಗಾವಳಿ ನದಿಯಲ್ಲಿ ಲಾರಿ ಸಹಿತ ಚಾಲಕ ಅರ್ಜುನ್ ಶವವು ಸೆ.25ರಂದು ಪತ್ತೆಯಾಗಿತ್ತು. ಡಿಎನ್‌ಎ ಪರೀಕ್ಷೆಯಲ್ಲಿ ಶವ ಅರ್ಜುನ್‌ನದ್ದೇ ಎಂದು ದೃಢೀಕರಿಸಿದ ಬಳಿಕ ಉತ್ತರ ಕನ್ನಡ ಜಿಲ್ಲಾಡಳಿತವು ಶವವನ್ನು ಪೊಲೀಸ್‌ ಸೂಕ್ತ ಬೆಂಗಾವಲಿನೊಂದಿಗೆ ಕೇರಳದ ಕೋಝಿಕ್ಕೂಡ್‌ನ ಅರ್ಜುನ್‌ನ ಕುಟುಂಬಸ್ಥರಿಗೆ ಹಸ್ತಾಂತರಿಸಿತ್ತು.

ಬಳಿಕ ಚಾಲಕ ಶಂಶುದ್ದೀನ್ ಅವರ ಜನತಾ ಆ್ಯಂಬುಲೆನ್ಸ್‌ ಮೂಲಕ ಶುಕ್ರವಾರ ತಡರಾತ್ರಿ ಮೃತದೇಹವನ್ನು ಕಳುಹಿಸಿಕೊಡಲಾಗಿತ್ತು. ಈ ವೇಳೆ ಶೋಧ ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಂಡಿದ್ದ ಕಾರವಾರ ಶಾಸಕ ಸತೀಶ್ ಸೈಲ್, ಸಾಮಾಜಿಕ ಕಾರ್ಯಕರ್ತ, ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಕೂಡ ಜೊತೆಗೆ ತೆರಳಿತ್ತು.

Advertisements

ಇಂದು ಬೆಳಗ್ಗೆ ಕೋಝಿಕ್ಕೋಡ್‌ನ ಕನ್ನಡಿಕ್ಕಲ್‌ನಲ್ಲಿರುವ ಅರ್ಜುನ್ ಅವರ ಮನೆಗೆ ಮೃತದೇಹ ತಲುಪಿದ್ದು ಈ ಸುದ್ದಿ ತಿಳಿಯುತ್ತಿದ್ದಂತೆಯೇ ಭಾರೀ ಜನಸ್ತೋಮ ನೆರೆದಿತ್ತು. ಬಂದಿದ್ದ ಅನೇಕರಲ್ಲಿ ಅರ್ಜುನ್ ಅವರು ಪರಿಚಯ ಇಲ್ಲದಿದ್ದರೂ ಅವರ ಮೃತದೇಹದ ಮುಂದೆ ಕಣ್ಣೀರು ಸುರಿಸುತ್ತಾ ನಿಂತಿದ್ದ ದೃಶ್ಯ ಕಂಡುಬಂತು.

ಬೆಳಿಗ್ಗೆ 11 ಗಂಟೆಯವರೆಗೆ ಸಾರ್ವಜನಿಕ ದರ್ಶನವನ್ನು ನಿಗದಿಪಡಿಸಲಾಗಿತ್ತು. ಆದಾಗ್ಯೂ, ಮತ್ತಷ್ಟು ಜನರು ಬಂದಿದ್ದರಿಂದ ಮಧ್ಯಾಹ್ನದ ವೇಳೆಗೆ ಅರ್ಜುನ್ ಅವರ ಸಹೋದರನ ನೇತೃತ್ವದಲ್ಲಿ ಅಂತಿಮ ವಿಧಿಗಳನ್ನು ನಡೆಸಲಾಯಿತು. ಅರ್ಜುನ್ ಅವರ ಮಗ ಅಯಾನ್ ಅವರನ್ನು ಕೊನೆಯ ಕ್ಷಣದಲ್ಲಿ ಸ್ಥಳಕ್ಕೆ ಕರೆತರಲಾಯಿತು. ಅಪ್ಪನನ್ನು ನೆನೆದು ಕಣ್ಣೀರಿಡುತ್ತಿದ್ದ ಮಗ, ಪತಿಯನ್ನು ನೆನೆದು ಪತ್ನಿ, ಮಗನನ್ನು ನೆನೆದು ಅರ್ಜುನ್ ಪೋಷಕರು ಕಣ್ಣೀರಿಡುತ್ತಿದ್ದ ದೃಶ್ಯ ಅಲ್ಲಿ ನೆರೆದಿದ್ದವರ ಕಣ್ಣುಗಳನ್ನು ತೇವಗೊಳಿಸಿತು.

ಅಂತಿಮವಾಗಿ ಅರ್ಜುನ್ ಮೃತದೇಹವನನ್ನು ಅವರು ನಿರ್ಮಿಸಲು ಬಯಸಿದ್ದ ಮನೆಯ ಬಳಿಯಲ್ಲಿಯೇ ದಹನ ಮಾಡಲಾಯಿತು. ಕೇರಳದ ಸಚಿವರಾದ ಎ.ಕೆ.ಶಶೀಂದ್ರನ್, ಕೆ.ಬಿ.ಗಣೇಶ್ ಕುಮಾರ್, ಸಂಸದ ಎಂ.ಕೆ.ರಾಘವನ್, ಕಾರವಾರ ಶಾಸಕ ಸತೀಶ್ ಸೈಲ್, ಈಶ್ವರ್ ಮಲ್ಪೆ, ಅರ್ಜುನ್ ಅವರ ಲಾರಿ ಮಾಲೀಕ ಮನಾಫ್ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಇದನ್ನು ಓದಿದ್ದೀರಾ? ಶಿರೂರು ದುರಂತ | ಎರಡು ತಿಂಗಳ ಬಳಿಕ ಲಾರಿ ಸಹಿತ ಚಾಲಕ ಅರ್ಜುನ್ ಶವ ಪತ್ತೆ

ಕರ್ನಾಟಕ ಸರ್ಕಾರದಿಂದ ಅರ್ಜುನ್ ಕುಟುಂಬಕ್ಕೆ 5 ಲಕ್ಷ ಪರಿಹಾರ

ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದಲ್ಲಿ ಮೃತನಾದ ಕೇರಳದ ಲಾರಿ ಚಾಲಕ ಅರ್ಜುನ್ ಇವರ ಕುಟುಂಬಕ್ಕೆ ಕರ್ನಾಟಕ ರಾಜ್ಯ ಸರ್ಕಾರ ವಿಪತ್ತು ನಿಧಿಯಿಂದ 5 ಲಕ್ಷ ರೂ ಪರಿಹಾರವನ್ನು ಉತ್ತರ ಕನ್ನಡ ಜಿಲ್ಲಾಡಳಿತದಿಂದ ಮಂಜೂರು ಮಾಡಲಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X