‘ಸರತಿ ಸಾಲಿನಲ್ಲಿ ಬನ್ನಿ’ ಎಂದು ಸೂಚಿಸಿದ್ದಕ್ಕೆ ಆಸ್ಪತ್ರೆಯ ಸ್ವಾಗತಕಾರ್ತಿ (ರಿಷಪ್ಶನಿಸ್ಟ್) ಮೇಲೆ ವ್ಯಕ್ತಿಯೊಬ್ಬ ಭೀಕರವಾಗಿ ಹಲ್ಲೆ ನಡೆಸಿರುವ ಆಘಾತಕಾರಿಒ ಘಟನೆ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್‌ನಲ್ಲಿರುವ ಖಾಸಗಿ ಆಸ್ಪತ್ರೆ ‘ಶ್ರೀ ಬಾಲ್ ಚಿಕಿತ್ಸಾಲಯ’ದಲ್ಲಿ ಘಟನೆ ನಡೆದಿದೆ. ಆಸ್ಪತ್ರೆಯ ರಿಷಪ್ಶನಿಸ್ಟ್ ಸೋನಾಲಿ ಕಲಾಸರೆ (25) ಎಂಬವರ ಮೇಲೆ ದುರುಳ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಲ್ಲೆಗೊಳಗಾದ ಸಂತ್ರಸ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಯನ್ನು ಗೋಪಾಲ್ ಝಾ ಎಂದು ಗುರುತಿಸಲಾಗಿದೆ.
ಆರೋಪಿ ಗೋಪಾಲ್ ಝಾ ಮದ್ಯ ಸೇವಿನ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಲ್ಲಿ ವೈದ್ಯರ ಕ್ಯಾಬಿನ್‌ಗೆ ಹೋಗಲು ಯತ್ನಸಿದ್ದರು. ಈ ವೇಳೆ, ರಿಷಪ್ಶನಿಸ್ಟ್ ಸೋನಾಲಿ ಅವರು ‘ಸರತಿ ಸಾಲಿನಲ್ಲಿ ಬನ್ನಿ’ ಎಂದು ಸೂಚಿಸಿದ್ದಾರೆ. ಇದರಿಂದ ವಿಚಲಿತಗೊಂಡ ಗೋಪಾಲ್, ಯುವತಿಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.