ತನ್ನ ಇಬ್ಬರು ಮಕ್ಕಳನ್ನು ಕೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿ ಯಲ್ಲಿ ನಡೆದಿದೆ. ಮೃತರು 9 ವರ್ಷದ ಬಾಲಕಿ ಹಾಗೂ 15 ವರ್ಷದ ಬಾಲಕ ಸೇರಿದ್ದಾನೆ.
ಮಕ್ಕಳ ತಾಯಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿ ಪೊಲೀಸರ ಪ್ರಕಾರ ಶನಿವಾರ(ಏ.21) ಮಧ್ಯಾಹ್ನ 2 ಗಂಟೆಗೆ ಶುಕ್ರವಾರದಿಂದ ಮನೆಯೊಂದು ಬೀಗ ಹಾಕಲಾಗಿದೆ ಎಂದು ಪೂರ್ವ ದೆಹಲಿಯ ಶಶಿ ಗಾರ್ಡನ್‌ನಿಂದ ಠಾಣೆಗೆ ಕರೆ ಬಂದಿದೆ.
ಪೊಲೀಸರು ಸ್ಥಳಕ್ಕೆ ತೆರಳಿ ಬೀಗ ಮುರಿದು ಮನೆಯನ್ನು ಪ್ರವೇಶಿಸಿದಾಗ ಒಂದು ಕೋಣೆಯಲ್ಲಿ ಇಬ್ಬರ ಮಕ್ಕಳ ಮೃತದೇಹ, ಮತ್ತೊಂದು ಕೋಣೆಯಲ್ಲಿ ಗಂಭೀರ ಗಾಯಗೊಂಡ ಮಕ್ಕಳ ತಾಯಿ ಪ್ರಜ್ಞಾಹೀನವಾಗಿ ಬಿದ್ದಿದ್ದರು. ಮಕ್ಕಳ ತಂದೆ ನಾಪತ್ತೆಯಾಗಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಡಿ ಎಂಬ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಮೋದಿಯ ‘ಮಹಾನ್’ ಸಾಧನೆ
ಆರೋಪಿ ಶ್ಯಾಮ್‌ಜಿ ದೆಹಲಿಯ ಮಯೂರಿ ವಿಹಾರ್‌ನಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ. ಮಕ್ಕಳನ್ನು ಕತ್ತು ಹಿಸುಕಿ ಕೊಂದ ನಂತರ ಪತ್ನಿಯ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಆನಂದ್ ವಿಹಾರ್ ರೈಲ್ವೆ ಹಳಿಯ ಮೇಲೆ ಆರೋಪಿಯ ಮೃತದೇಹ ಬಿದ್ದಿರುವುದಾಗಿ ತಿಳಿದು ಬಂಂದಿದೆ.
ಕೊಲೆಯ ಬಗ್ಗೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
