ಸಿಕ್ಕಿಂ ಹೈಕೋರ್ಟ್ ತನ್ನ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಪಾಲಿಸಿಯನ್ನು ಪರಿಚಯಿಸಿದ್ದು ಮುಟ್ಟಿನ ರಜೆ ಘೋಷಿಸಿದ ಮೊದಲ ಹೈಕೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೇ 27ರಂದು ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಸಿಕ್ಕಿಂ ಹೈಕೋರ್ಟ್ ರಿಜಿಸ್ಟ್ರಿ ಮಹಿಳಾ ಉದ್ಯೋಗಿಗಳು ಒಂದು ತಿಂಗಳಲ್ಲಿ ‘2-3 ದಿನಗಳ ಮುಟ್ಟಿನ ರಜೆ’ ಪಡೆಯಬಹುದು ಎಂದು ಹೇಳಿದೆ.
ಆದರೆ ಹೈಕೋರ್ಟ್‌ನ ವೈದ್ಯಕೀಯ ಅಧಿಕಾರಿಯ ಪೂರ್ವ ಶಿಫಾರಸಿನ ಮೇರೆಗೆ ಮಾತ್ರ ಈ ರಜೆಗಳನ್ನು ಪಡೆಯಲು ಅವಕಾಶವಿದೆ ಎಂದು ಹೇಳಿದೆ. ‘ಈ ರಜೆಯನ್ನು ಉದ್ಯೋಗಿಯ ಒಟ್ಟಾರೆ ರಜೆಯಲ್ಲಿ ಸೇರಿಸಿ ಲೆಕ್ಕಾಚಾರ ಮಾಡಲಾಗುವುದಿಲ್ಲ’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮುಟ್ಟು ಅಂಗವೈಕಲ್ಯವಲ್ಲ; ಸ್ಮೃತಿ ಇರಾನಿ ಹೇಳಿಕೆ ಯಾರನ್ನು ಮೆಚ್ಚಿಸಲು?
ದೇಶದ ಅತ್ಯಂತ ಚಿಕ್ಕ ಹೈಕೋರ್ಟ್ ಸಿಕ್ಕಿಂ ಹೈಕೋರ್ಟ್ ಆಗಿದ್ದು ಮೂರು ನ್ಯಾಯಾಧೀಶರನ್ನು ಈ ಹೈಕೋರ್ಟ್ ಹೊಂದಿದೆ. ಹೈಕೋರ್ಟ್ ವೆಬ್‌ಸೈಟ್ ಪ್ರಕಾರ, ಒಬ್ಬ ಮಹಿಳಾ ಅಧಿಕಾರಿ ಸೇರಿದಂತೆ ನೋಂದಾವಣೆಯಲ್ಲಿ ಕೇವಲ 9 ಅಧಿಕಾರಿಗಳು ಇದ್ದಾರೆ.
Sikkim High Court Grants Menstrual Leave for Women Employees in the Registry.
The High Court Registry has announced a new policy allowing women employees to take #menstrualleave for 2-3 days each month.
To access this leave, employees must first consult the Medical Officer… pic.twitter.com/jxPOpPcLR8
— All India Radio News (@airnewsalerts) May 28, 2024
ಮುಟ್ಟಿನ ರಜೆ ಪಾಲಿಸಿಯನ್ನು ಪರಿಚಯಿಸಿದ ದೇಶದ ಮೊದಲ ಹೈಕೋರ್ಟ್ ಎಂಬ ಹೆಗ್ಗಳಿಕೆಯನ್ನು ಸಿಕ್ಕಿಂ ಹೈಕೋರ್ಟ್ ಪಡೆದುಕೊಂಡಿದೆ. ಪ್ರಸ್ತುತ, ಮುಟ್ಟಿನ ರಜೆಗೆ ಯಾವುದೇ ರಾಷ್ಟ್ರೀಯ ನೀತಿ ಅಥವಾ ಕಾನೂನು ಇಲ್ಲ.
ದೇಶದಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಘೋಷಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 2023ರಲ್ಲಿ ನಿರಾಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಅರ್ಜಿದಾರರು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಈ ಅರ್ಜಿಯನ್ನು ಸಲ್ಲಿಸಲು ಶಿಫಾರಸು ಮಾಡಿದೆ.
ಇದನ್ನು ಓದಿದ್ದೀರಾ? ಮುಟ್ಟಿನ ರಜೆ | ಮಹಿಳಾ ಸಮಸ್ಯೆಗಳ ಕುರಿತ ವಿ’ಸ್ಮೃತಿ’ಗೆ ಕೊನೆಯೆಲ್ಲಿ?
ಮುಟ್ಟಿನ ರಜೆ ವಿರೋಧಿಸಿದ್ದ ಸ್ಮೃತಿ ಇರಾನಿ
ಇನ್ನು ಡಿಸೆಂಬರ್ 2023 ರಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಈ ಮುಟ್ಟಿನ ರಜೆ ಪಾಲಿಸಿಯನ್ನು ವಿರೋಧಿಸಿದ್ದರು. “ಮುಟ್ಟು ಒಂದು ಅಂಗವೈಕಲ್ಯವಲ್ಲ ಎಂದು ನಾನು ನಂಬುತ್ತೇನೆ” ಎಂದು ಇರಾನಿ ಹೇಳಿದ್ದರು. ಈ ಮೂಲಕ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದರು.
ಅದೇ ತಿಂಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮುಟ್ಟಿನ ನೈರ್ಮಲ್ಯದ ಕರಡು ನೀತಿಯನ್ನು ರೂಪಿಸಿದೆ. ಈ ಪಾಲಿಸಿ ಮಹಿಳೆಯರಿಗೆ ಯಾವುದೇ ತಾರತಮ್ಯವಾಗದಂತೆ ಮನೆಯಿಂದ ಕೆಲಸ ಅಥವಾ ಬೆಂಬಲ ರಜೆಗಳು ಲಭ್ಯವಿರಬೇಕು ಎಂದು ಹೇಳಿದೆ.