ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 6 ನವಜಾತ ಶಿಶುಗಳು ಸಾವನ್ನಪ್ಪಿದ್ದು, ಇನ್ನೂ ಕೆಲವು ಶಿಶುಗಳ ಸ್ಥಿತಿ ಗಂಭೀರವಾಗಿದೆ.
ವಿವೇಕ್ ವಿಹಾರ್‌ನಲ್ಲಿರುವ ನ್ಯೂ ಬಾರ್ನ್ ಬೇಬಿ ಕೇರ್ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.
#WATCH | Rajesh, Fire Officer says, ” At 11:32 pm, Fire Service Control Room received information that fire broke out at a hospital…total 16 fire tenders reached the spot and fire has been extinguished completely. 2 buildings were affected by the fire, one is the hospital… https://t.co/lHzou6KkHH pic.twitter.com/gdVD9nNOGy
— ANI (@ANI) May 25, 2024
ಅಗ್ನಿಶಾಮಕ ಅಧಿಕಾರಿಯ ಪ್ರಕಾರ, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಒಟ್ಟು 12 ಮಕ್ಕಳನ್ನು ರಕ್ಷಿಸಲಾಗಿದ್ದು ಅದರಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಒಂದು ಮಗು ವೆಂಟಿಲೇಟರ್‌ನಲ್ಲಿದ್ದು ಐದು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ದಳ ತಿಳಿಸಿದೆ.
ಇದನ್ನು ಓದಿದ್ದೀರಾ? ದೆಹಲಿ -ಬೆಂಗಳೂರು | 175 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನವೊಂದರಲ್ಲಿ ಅಗ್ನಿ ಅವಘಡ
“ರಾತ್ರಿ 11:32 ಕ್ಕೆ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಸೇವಾ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿದೆ. ಒಟ್ಟು 16 ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ” ಎಂದು ಅಗ್ನಿಶಾಮಕ ಅಧಿಕಾರಿ ರಾಜೇಂದ್ರ ಅತ್ವಾಲ್ ಮಾಹಿತಿ ನೀಡಿದ್ದಾರೆ.
#WATCH | Delhi: A massive fire broke out at a New Born Baby Care Hospital in Vivek Vihar
As per a Fire Officer, Fire was extinguished completely, 11-12 people were rescued and taken to hospital and further details are awaited.
(Video source – Fire Department) https://t.co/lHzou6KkHH pic.twitter.com/pE95ffjm9p
— ANI (@ANI) May 25, 2024
“2 ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಒಂದು ಆಸ್ಪತ್ರೆಯ ಕಟ್ಟಡ ಮತ್ತು ಬಲಭಾಗದಲ್ಲಿರುವ ವಸತಿ ಕಟ್ಟಡದ 2 ಮಹಡಿಗಳು ಸಹ ಬೆಂಕಿಗೆ ಆಹುತಿಯಾಗಿವೆ. 1-12 ಜನರನ್ನು ರಕ್ಷಿಸಲಾಗಿದೆ ಮತ್ತು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ” ಎಂದು ತಿಳಿಸಿದ್ದಾರೆ.