ಫೆ.27 ರಂದು ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಪ್ರಕಟಿಸಿದ್ದು, ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಒಳಗೊಂಡು ನಾಲ್ವರನ್ನು ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್ ಘೋಷಿಸಿದೆ.
ಸೋನಿಯಾ ಗಾಂಧಿ ರಾಜಸ್ಥಾನ,ಅಭಿಷೇಕ್ ಮನು ಸಿಂಘ್ವಿ ಹಿಮಾಚಲ ಪ್ರದೇಶ, ಬಿಹಾರದಿಂದ ಅಕಿಲೇಶ್ ಪ್ರಸಾದ್ ಸಿಂಗ್, ಮಹಾರಾಷ್ಟ್ರದಿಂದ ಚಂದ್ರಶೇಖರ ಹಂಡೋರೆ ಸ್ಪರ್ಧಿಸಲಿದ್ದಾರೆ.
ಉತ್ತರ ಪ್ರದೇಶ ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಕಳೆದ 5 ಬಾರಿಯಿಂದ ಸಂಸದರಾಗಿರುವ 77 ವರ್ಷದ ಸೋನಿಯಾ ಗಾಂಧಿ ಮೊದಲ ಬಾರಿ ರಾಜ್ಯಸಭೆಗೆ ಸ್ಪರ್ಧಿಸಿದ್ದಾರೆ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಜೈಪುರದಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಶ್ನಿಸುವವರಿಗೆ ನೈತಿಕತೆ ಇದ್ದರೆ ಪ್ರಶ್ನೆಗೆ ಬೆಲೆ, ಅಲ್ಲವೇ?
ನೆಹರು ಕುಟುಂಬದಿಂದ ಇಲ್ಲಿಯವರೆಗೂ ರಾಜ್ಯಸಭೆ ಇಬ್ಬರು ರಾಜ್ಯಸಭೆ ಸ್ಪರ್ಧಿಸಿದ್ದಾರೆ. ಈ ಮೊದಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1964 ಆಗಸ್ಟ್‌ನಿಂದ 1967ರ ಫೆಬ್ರವರಿವರೆಗೂ ರಾಜ್ಯಸಭೆ ಸದಸ್ಯರಾಗಿದ್ದರು.
15 ರಾಜ್ಯಗಳ ಒಟ್ಟು 56 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಫೆ.15 ನಾಮಪತ್ರ ಪ್ರಕಟಿಸಲುವ ಕೊನೆಯ ದಿನವಾಗಿದೆ. ರಾಜಸ್ಥಾನ ವಿಧಾನಸಭೆ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಮೂರು ಸ್ಥಾನ ಗೆಲ್ಲಲಿದೆ.