ಸೋನಿಯಾ ಗಾಂಧಿ ಆತ್ಮಕಥೆ ಪ್ರಕಟಣೆಯ ಹೊಣೆ ಹೊತ್ತ ಹಾರ್ಪರ್ ಕಾಲಿನ್ಸ್ ಸಂಸ್ಥೆ

Date:

ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಅನ್ನು ಭಾರತದಲ್ಲಿ ‘ಹಾರ್ಪರ್ ಕಾಲಿನ್ಸ್ ಇಂಡಿಯಾ’ ಪ್ರಕಟಿಸಲಿದೆ. ಹಸ್ತಪ್ರತಿಯಲ್ಲಿದ್ದ ಕೆಲವು ಅಂಶಗಳ ಬದಲಾವಣೆಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಹಾಗೂ ‘ಪೆಂಗ್ವಿನ್ ಇಂಡಿಯಾ’ ನಡುವೆ ಭಿನ್ನಾಭಿಪ್ರಾಯ ಮೂಡಿ, ಪ್ರಕಾಶನ ಸಂಸ್ಥೆಯು ಹಿಂದೇಟು ಹಾಕಿದ್ದರಿಂದ ಮೂಡಿದ್ದ ಗೊಂದಲಕ್ಕೆ ಈಗ ಅಧಿಕೃತವಾಗಿ ತೆರೆ ಬಿದ್ದಿದೆ.

- Advertisement -

ಸೋನಿಯಾ ಅವರ 544 ಪುಟಗಳ ಈ ಪುಸ್ತಕವು ನವೆಂಬರ್ 10ರಂದು ಮಾರುಕಟ್ಟೆಗೆ ಬರಲಿದೆ. ಆದರೆ, ಇದಕ್ಕೂ ಮುನ್ನ ಆಗಸ್ಟ್ 18ರಂದು ಹೇಳಿಕೆ ಬಿಡುಗಡೆ ಮಾಡಿದ್ದ ಪೆಂಗ್ವಿನ್ ಇಂಡಿಯಾ, ತಾನು ಈ ಪುಸ್ತಕದ ಪ್ರಕಾಶಕನಲ್ಲ ಎಂದು ಸ್ಪಷ್ಟಪಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ, ಆರ್.ಎಸ್.ಎಸ್ ಹಾಗೂ ಭಾರತದ ಗಡಿಭಾಗವನ್ನು ಚೀನಾ ಅತಿಕ್ರಮಿಸಿರುವ ವಿಚಾರಗಳಿಗೆ ಸಂಬಂಧಿಸಿದ ಕೆಲವು ಉಲ್ಲೇಖಗಳನ್ನು ಕೈಬಿಡಲು ಸೋನಿಯಾ ಗಾಂಧಿ ಅವರು ನಿರಾಕರಿಸಿದ್ದೇ ಪೆಂಗ್ವಿನ್ ಸಂಸ್ಥೆ ಹಿಂದೆ ಸರಿಯಲು ಪ್ರಮುಖ ಕಾರಣ ಎನ್ನಲಾಗಿದೆ. ಕೆಲವು ವಿಚಾರಗಳಲ್ಲಿ ಉಭಯ ಬಣಗಳ ನಡುವೆ ಒಮ್ಮತ ಮೂಡಿದ್ದರೂ, ಈ ಪ್ರಮುಖ ಅಂಶಗಳ ಬದಲಾವಣೆಗೆ ಸೋನಿಯಾ ಸಮ್ಮತಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಜಾಗತಿಕ ಪ್ರಕಾಶನ ಸಂಸ್ಥೆಯಾದ ಪೆಂಗ್ವಿನ್ ರ‍್ಯಾಂಡಮ್ ಹೌಸ್‌ನ (PRHI) ಅಂಗಸಂಸ್ಥೆ ‘ಆಲ್ಫ್ರೆಡ್ ಎ. ಕ್ನಾಫ್’ ಈ ಪುಸ್ತಕವನ್ನು ವಿಶ್ವದ ಇತರ ಭಾಗಗಳಲ್ಲಿ ಬಿಡುಗಡೆ ಮಾಡುವುದಾಗಿ ಆಗಸ್ಟ್ 18ರಂದೇ ಪ್ರಕಟಿಸಿತ್ತು. ವಿದೇಶದಲ್ಲಿ ಮೂಲ ಸ್ವರೂಪದಲ್ಲಿ ಮತ್ತು ಭಾರತದಲ್ಲಿ ಕೆಲವು ಅಂಶಗಳನ್ನು ಕೈಬಿಟ್ಟು ಪ್ರಕಟಿಸಿದರೆ ಒಂದೇ ಪುಸ್ತಕದ ಎರಡು ವಿಭಿನ್ನ ಆವೃತ್ತಿಗಳು ಸೃಷ್ಟಿಯಾಗಲಿವೆ ಎಂಬ ಕಾರಣಕ್ಕೆ ಬದಲಾವಣೆಗೆ ಸೋನಿಯಾ ಗಾಂಧಿ ಒಲವು ತೋರಿರಲಿಲ್ಲ. ಬಲಪಂಥೀಯ ಕಾರ್ಯಕರ್ತರ ವಿರೋಧದ ಹಿನ್ನೆಲೆಯಲ್ಲಿ ಈ ಹಿಂದೆಯೂ ಪೆಂಗ್ವಿನ್ ಇಂಡಿಯಾ ಹಲವು ಪುಸ್ತಕಗಳ ಪ್ರಕಟಣೆಯನ್ನು ರದ್ದುಗೊಳಿಸಿದ ಅಥವಾ ಹಿಂದೇಟು ಹಾಕಿದ ಇತಿಹಾಸವಿದೆ. ವಿವಾದದ ಹಿನ್ನೆಲೆಯಲ್ಲಿ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’, ಮುಜಾಫರ್‌ನಗರ ಗಲಭೆ ಕುರಿತ ಜೋ ಸ್ಯಾಕೋ ಅವರ ‘ದಿ ಒನ್ಸ್ ಅಂಡ್ ಫ್ಯೂಚರ್ ರಿಯೋಟ್ಸ್’ ಹಾಗೂ ವೆಂಡಿ ಡೊನಿಗರ್ ಅವರ ‘ದಿ ಹಿಂದೂಸ್: ಆನ್ ಆಲ್ಟರ್ನೇಟಿವ್ ಹಿಸ್ಟರಿ’ ಪುಸ್ತಕಗಳ ಪ್ರಕಟಣೆಯಿಂದಲೂ ಸಂಸ್ಥೆ ಹಿಂದೆ ಸರಿದಿತ್ತು.

ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಹಾರ್ಪರ್ ಕಾಲಿನ್ಸ್ ಇಂಡಿಯಾ, “ಇದೊಂದು ಅಚ್ಚರಿಯ ಹಾಗೂ ಶ್ರೀಮಂತ ಅನುಭವಗಳನ್ನೊಳಗೊಂಡ ಆತ್ಮಕಥೆಯಾಗಿದ್ದು, ವೈಯಕ್ತಿಕ ಹಾಗೂ ರಾಜಕೀಯ ವಿಚಾರಗಳನ್ನು ಮನಮೋಹಕವಾಗಿ ಹೆಣೆಯಲಾಗಿದೆ. ಪ್ರೀತಿ, ಕುಟುಂಬ, ಗುರುತು, ಕರ್ತವ್ಯ ಮತ್ತು ಭಾರತ ಎಂಬ ವಿಸ್ಮಯಕಾರಿ ದೇಶದ ಜೊತೆಗಿನ ನಂಟನ್ನು ಇದು ಒಳಗೊಂಡಿದೆ. ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಏರಿಳಿತಗಳು ಹಾಗೂ ಕಳೆದ 60 ವರ್ಷಗಳ ದೇಶದ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳ ಸ್ಪಷ್ಟ ಒಳನೋಟವನ್ನು ಈ ಕೃತಿ ಓದುಗರಿಗೆ ನೀಡಲಿದೆ” ಎಂದು ಬಣ್ಣಿಸಿದೆ.

1965ರಲ್ಲಿ ಕೇಂಬ್ರಿಡ್ಜ್‌ನಲ್ಲಿ 19 ವರ್ಷದ ಯುವತಿ ಸುಂದರ ಯುವಕನನ್ನು ಕಂಡು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುವ ಘಟನೆಯಿಂದ (ರಾಜೀವ್ ಗಾಂಧಿ ಜೊತೆಗಿನ ಒಡನಾಟ) ಈ ಪುಸ್ತಕ ಆರಂಭವಾಗುತ್ತದೆ. ಎರಡನೇ ಮಹಾಯುದ್ಧದ ನಂತರದ ಇಟಲಿಯ ಬಾಲ್ಯದ ದಿನಗಳು, ಭಾರತಕ್ಕೆ ಕರೆತಂದ ಪ್ರೀತಿ, ಗಾಂಧಿ ಕುಟುಂಬ ಎದುರಿಸಿದ ಹೃದಯವಿದ್ರಾವಕ ದುರಂತಗಳು, ರಾಜಕೀಯಕ್ಕೆ ಬರುವಂತೆ ಇದ್ದ ತೀವ್ರ ಒತ್ತಡವನ್ನು ನಿಭಾಯಿಸಿದ ರೀತಿ ಹಾಗೂ ತಮ್ಮ ತಾಯ್ನಾಡಾಗಿ ಒಪ್ಪಿಕೊಂಡ ಭಾರತಕ್ಕಾಗಿ ಹೊಸ ಬದುಕು ಕಟ್ಟಿಕೊಂಡು ಸೇವೆ ಸಲ್ಲಿಸಿದ ಬಗೆಯನ್ನು ಸೋನಿಯಾ ಗಾಂಧಿ ಅವರು ಈ ಪುಸ್ತಕದಲ್ಲಿ ಅತ್ಯಂತ ನೈಜವಾಗಿ ಹಾಗೂ ಮಾರ್ಮಿಕವಾಗಿ ಹಂಚಿಕೊಂಡಿದ್ದಾರೆ ಎಂದು ಪ್ರಕಾಶನ ಸಂಸ್ಥೆ ವಿವರಿಸಿದೆ.

ಹಾರ್ಪರ್ ಕಾಲಿನ್ಸ್ (HarperCollins) ವಿಶ್ವದ ಅತಿ ದೊಡ್ಡ ಮತ್ತು ಪ್ರತಿಷ್ಠಿತ ‘ಬಿಗ್ ಫೈವ್’ (Big Five) ಆಂಗ್ಲ ಭಾಷಾ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಗಿದೆ. ‘ನ್ಯೂಸ್ ಕಾರ್ಪ್’ (News Corp) ಒಡೆತನದಲ್ಲಿರುವ ಈ ಸಂಸ್ಥೆಯು ಭಾರತದಲ್ಲಿ ‘ಹಾರ್ಪರ್ ಕಾಲಿನ್ಸ್ ಇಂಡಿಯಾ’ ಹೆಸರಿನಲ್ಲಿ ವ್ಯಾಪಕವಾಗಿ ಕಾರ್ಯಾಚರಿಸುತ್ತಿದ್ದು, ಕಾದಂಬರಿ, ರಾಜಕೀಯ, ಇತಿಹಾಸ, ಕಲೆ ಹಾಗೂ ಆತ್ಮಕಥೆಗಳಂತಹ ವೈವಿಧ್ಯಮಯ ಕೃತಿಗಳನ್ನು ಪ್ರಕಟಿಸುತ್ತಿದೆ. ಭಾರತೀಯ ಮತ್ತು ಅಂತಾರಾಷ್ಟ್ರೀಯ ಲೇಖಕರ ಗುಣಮಟ್ಟದ ಸಾಹಿತ್ಯವನ್ನು ಓದುಗರಿಗೆ ತಲುಪಿಸುವಲ್ಲಿ ಮುಂಚೂಣಿಯಲ್ಲಿರುವ ಈ ಸಂಸ್ಥೆಯು, ಪ್ರಕಾಶನ ಉದ್ಯಮದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಓದುಗರ ವಲಯದಲ್ಲಿ ತನ್ನದೇ ಆದ ವಿಶ್ವಾಸಾರ್ಹತೆ ಹಾಗೂ ಮನ್ನಣೆಯನ್ನು ಕಾಯ್ದುಕೊಂಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಗಾಯಕ ದೇವದಾಸಗೆ ಒಲಿದ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ

ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು,...

ಬಡತನ ಮೆಟ್ಟಿ ಬಿಲ್ಲುಗಾರಿಕೆ ಒಲಿಸಿಕೊಂಡ ದೇವಮ್ಮ: ಒಲಂಪಿಕ್ಸ್‌ ಕನಸಿಗೆ ಸ್ಪೂರ್ತಿ ತುಂಬಿದ ಎಂ.ಬಿ ಪಾಟೀಲ್‌

ಬಡತನದ ನಡುವೆಯೂ ಬಿಲ್ಲುಗಾರಿಕೆಯಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಲ್ಯಾಣ ಕರ್ನಾಟಕದ ಪ್ರತಿಭೆ...

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ ಲಾರೆನ್ಸ್ ಬಿಷ್ಣೋಯ್‌ವರೆಗೆ!

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ...

CJP ನಾಯಕರ ನ್ಯಾಯಾಂಗ ಬಂಧನ ವಿಸ್ತರಣೆಗೆ ಪೊಲೀಸರ ಮನವಿ; ಮ್ಯಾಜಿಸ್ಟ್ರೇಟ್ ಮುಂದೆ ಹಾಜರು

CJP ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ಸೋಮವಾರ...