“ನಾಳೆಯಿಂದ ನನಗೆ ನ್ಯಾಯ ನೀಡಲು ಸಾಧ್ಯವಾಗುವುದಿಲ್ಲ. ಆದರೆ ನಾನು ನನ್ನ ಸೇವೆಯಿಂದ ತೃಪ್ತನಾಗಿದ್ದೇನೆ” ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಚಂದ್ರಚೂಡ್ ಅವರ ಅಧಿಕಾರವಾಧಿಯ ಅಂತಿಮ ದಿನ ‘ಶುಕ್ರವಾರ’ ಅವರು ವಿಧ್ಯುಕ್ತ ಪೀಠದಲ್ಲಿ ಮಾತನಾಡಿದರು. “ನಾನು ಜೀವನದ ಬಗ್ಗೆ ತುಂಬಾ ಕಲಿತಿದ್ದೇನೆ. ನ್ಯಾಯಾಲಯದಲ್ಲಿ ನಾನು ಯಾರಿಗಾದರೂ ನೋವುಂಟು ಮಾಡಿದ್ದರೆ, ದಯವಿಟ್ಟು ನನ್ನನ್ನು ಕ್ಷಮಿಸಿ. ನನ್ನಿಂದ ತಪ್ಪಾಗಿದ್ದರೆ, ಆ ಎಲ್ಲ ತಪ್ಪುಗಳಿಗೂ ಕ್ಷಮೆ ಇರಲಿ” ಎಂದು ಹೇಳಿದ್ದಾರೆ.
“ನ್ಯಾಯಾಲಯದ ಸಿಬ್ಬಂದಿಗಳು ವಿಧ್ಯುಕ್ತ ಪೀಠವನ್ನು ಯಾವಾಗ ಕೊನೆಗೊಳಿಸಬೇಕು ಎಂದು ಗುರುವಾರ ನನ್ನನ್ನು ಕೇಳಿದರು. ನಾನು ಸಾಧ್ಯವಾದಷ್ಟು ಕೆಲಸ ಮಾಡುತ್ತೇನೆ ಎಂದಿದ್ದೆ. ಕೊನೆಯ ಸಮಯದವರೆಗೆ ನ್ಯಾಯ ಸಲ್ಲಿಸುವ ಅವಕಾಶವನ್ನು ನಾನು ಕೊಳೆದುಕೊಳ್ಳಲಾರೆ” ಎಂದಿದ್ದಾರೆ.
ನಾವು ಮಾಡುವ ಕೆಲಸವು ಪ್ರಕರಣಗಳನ್ನು ಇತ್ಯರ್ಥಪಡಿಸಬಹುದು ಅಥವಾ ಮುರಿಯಬಹುದು” ಎಂದು ಅವರು ಹೇಳಿದರು.
2022ರ ನವೆಂಬರ್ 9ರಂದು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡಿದ್ದ ಡಿ.ವೈ ಚಂದ್ರಚೂಡ್ ಅವರು ತಮ್ಮ ಎರಡು ವರ್ಷಗಳ ಅಧಿಕಾರವಧಿಯ ಬಳಿಕ, ಶುಕ್ರವಾರ ತಮ್ಮ ಹುದ್ದೆಗೆ ವಿದಾಯ ಹೇಳಿದ್ದಾರೆ.
ಅವರ ಉತ್ತರಾಧಿಕಾರಿಯಾಗಿ ಸಂಜೀವ್ ಖನ್ನಾ ಆಯ್ಕೆಯಾಗಿದ್ದಾರೆ. ಅವರು ನವೆಂಬರ್ 11ರಂದು ಭಾರತದ 51ನೇ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.