ಶ್ರೀಲಂಕಾ ಜಲ ಗಡಿಯಲ್ಲಿ ಮೀನುಗಾರಿಕೆ ನಡೆಸಿದ ಆರೋಪ ಮಂಗಳವಾರ ಮುಂಜಾನೆ ಡೆಲ್ಫ್ಟ್ ದ್ವೀಪದ ಬಳಿ ಒಂಬತ್ತು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ. ಜೊತೆಗೆ ಎರಡು ದೋಣಿಗಳನ್ನು ಶ್ರೀಲಂಕಾ ನೌಕಾಪಡೆಯು ವಶಕ್ಕೆ ಪಡೆದಿದೆ. ಬಂಧಿತರನ್ನು ಶ್ರೀಲಂಕಾಕ್ಕೆ ಕರೆದೊಯ್ಯಲಾಗಿದೆ.
ರಾಮೇಶ್ವರಂನಿಂದ 500ಕ್ಕೂ ಹೆಚ್ಚು ದೋಣಿಗಳು ಸೋಮವಾರ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದಿದೆ. ಮೀನುಗಾರರು ಐಎಂಬಿಎಲ್ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ, ಕೆಲವು ದೋಣಿಗಳು ಐಎಂಬಿಎಲ್‌ಗೆ ಪ್ರವೇಶಿಸಿವೆ ಎಂದು ಆರೋಪಿಸಲಾಗಿದೆ.
ಶ್ರೀಲಂಕಾ ನೌಕಾಪಡೆಯ ಗಸ್ತು ಘಟಕವು ದೋಣಿಗಳನ್ನು ಬೆನ್ನಟ್ಟಿದ್ದು, ಶ್ರೀಲಂಕಾ ಜಲ ಗಡಿಯನ್ನು ದಾಟುತ್ತಿದ್ದಂತೆ ಭಾರತೀಯ ದೋಣಿಯನ್ನು ವಶಕ್ಕೆ ಪಡೆದು ಭಾರತೀಯ ಮೀನುಗಾರರನ್ನು ಬಂಧಿಸಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಶ್ರೀಲಂಕಾದಿಂದ 21 ಮೀನುಗಾರರ ಬಂಧನ: ಬಿಡುಗಡೆಗೆ ಒತ್ತಾಯಿಸಿ ತಮಿಳುನಾಡು ಪಕ್ಷಗಳಿಂದ ಕೇಂದ್ರಕ್ಕೆ ಒತ್ತಾಯ
ಬಂಧಿತ ಮೀನುಗಾರರು ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ಮೂಲದವರು ಎಂದು ರಾಮನಾಥಪುರದ ಮೀನುಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊದಲ ದೋಣಿಯಲ್ಲಿದ್ದ ಬಂಧಿತ ಐವರು ಮೀನುಗಾರರನ್ಜು ಸಹಾಯ ರಾಬರ್ಟ್ (49), ಯಾಕೋಬ್ (24), ಮುತ್ತುರಾಮಲಿಂಗಂ (65), ರಾಧಾ (44), ಮತ್ತು ಶೇಖರ್ (40) ಎಂದು ಗುರುತಿಸಲಾಗಿದೆ. ಎರಡನೇ ದೋಣಿಯಲ್ಲಿ ಹರಿಕೃಷ್ಣನ್ (50), ಪೊನ್ ರಾಮರಾಜ್ (26), ರಾಮ್‌ಕುಮಾರ್ (24), ಮತ್ತು ಲಿಬಿನ್ ಸಾಯಿ (25) ಎಂಬ ನಾಲ್ವರು ಮೀನುಗಾರರು ಇದ್ದರು. ಬಂಧಿತರನ್ನು ಕಾನೂನು ಕ್ರಮಗಳಿಗಾಗಿ ಶ್ರೀಲಂಕಾಕ್ಕೆ ಕರೆದೊಯ್ಯಲಾಗಿದೆ.
ಭಾರತೀಯ ಮೀನುಗಾರರ ಬಂಧನಕ್ಕೆ ರಾಮೇಶ್ವರಂನ ಮೀನುಗಾರರ ಸಂಘ ಖಂಡನೆ ವ್ಯಕ್ತಪಡಿಸಿದೆ. ಇನ್ನು ಶ್ರೀಲಂಕಾ ನೌಕಾಪಡೆಯಿಂದ ಮೀನುಗಾರರನ್ನು ಬಂಧಿಸಿರುವುದನ್ನು ಖಂಡಿಸಿ ಕಳೆದ ವಾರ ಡಿಎಂಕೆ ಮತ್ತು ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದ್ದರು.
ಜುಲೈನಲ್ಲಿ ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾದ ಭಾರತೀಯ ಮೀನುಗಾರರನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಭಾರತೀಯ ಮೀನುಗಾರರನ್ನು ಮತ್ತು ಶ್ರೀಲಂಕಾ ಸರ್ಕಾರವು ಜಪ್ತಿ ಮಾಡಿರುವ ಬೋಟ್‌ಗಳನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರರ ಸಂಘ ಒತ್ತಾಯಿಸಿದೆ.
Nine #fishermen from #Rameswaram and #Thangachimdam, were #arrested by #SriLankan #Navy while fishing in two mechanized #boats near #Neduntheevu in early hours of Tuesday. They had set sailing from Rameswaram on Monday. @THChennai
— Sundar Subbiah (@SundarSubbiah) July 23, 2024