ಇತ್ತೀಚಿನ ವರ್ಷಗಳಲ್ಲಿ ಸಿಬ್ಬಂದಿ ಸಂಖ್ಯೆಯ ಕುಸಿತದ ಬಗ್ಗೆ ಹಲವಾರು ಬ್ಯಾಂಕ್ ಒಕ್ಕೂಟಗಳು ಕಳವಳ ವ್ಯಕ್ತಪಡಿಸಿವೆ. ಈ ವರ್ಷದ ಆರಂಭದಲ್ಲಿ, ಕೆಲವು ನಗರಗಳಲ್ಲಿ ಬ್ಯಾಂಕ್ ನೌಕರರು ಪ್ರತಿಭಟನೆಗಳನ್ನೂ ಕೂಡ ನಡೆಸಿದರು.
ಕಳೆದ ಮೂರು ವರ್ಷಗಳಲ್ಲಿ, ಹೆಚ್ಚಿನ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ(ಪಿಎಸ್‌ಬಿ) ಉದ್ಯೋಗಿಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗಿದೆ. ಆದರೆ ಬ್ಯಾಂಕುಗಳು ತಮ್ಮ ಶಾಖೆಗಳನ್ನು ವಿಸ್ತರಿಸುವುದನ್ನು ಮುಂದುವರಿಸಿವೆ. ಇದರಿಂದ ಸೇವಾ ಗುಣಮಟ್ಟ ಕುಂಠಿತವಾಗುತ್ತಿದೆ ಎಂದು ವರದಿಯಾಗಿದೆ.
ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಹಾಗೂ ಯುಕೊ ಬ್ಯಾಂಕ್ ಸೇರಿದಂತೆ ಹಲವು ಪಿಎಸ್‌ಬಿಗಳಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಕುಸಿತ ಕಂಡರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳು ಸಿಬ್ಬಂದಿ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳ ಕಂಡಿವೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಪ್ರಕಾರ ಬಹಿರಂಗವಾಗಿದೆ.
2023ರ ಹಣಕಾಸು ವರ್ಷದಲ್ಲಿ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಗಳ ಸಂಖ್ಯೆ 52,374ರಷ್ಟಿತ್ತು. 2024ರಲ್ಲಿ 50,944ಕ್ಕೆ ಇಳಿದಿರುವುದು ಕಂಡುಬಂದಿದೆ. ಆದರೆ, 2025ರಲ್ಲಿ 50,564ಕ್ಕೆ ಇಳಿದಿದೆ.
ಅದೇ ರೀತಿ, ಕೆನರಾ ಬ್ಯಾಂಕ್‌ನಲ್ಲಿಯೂ ಉದ್ಯೋಗಿಗಳ ಸಂಖ್ಯೆಯಲ್ಲಿ ಇಳಿಕೆಯ ಪ್ರವೃತ್ತಿ ಕಂಡುಬಂದಿದೆ. 2023ರಲ್ಲಿ 84,978ರಷ್ಟಿದ್ದ ಉದ್ಯೋಗಿಗಳ ಸಂಖ್ಯೆ 2024ರಲ್ಲಿ 82,638ಕ್ಕೆ ಮತ್ತು 2025ರಲ್ಲಿ 81,260ಕ್ಕೆ ಇಳಿದಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿಯೂ ಕೂಡ 2023ರಲ್ಲಿ 76,513ರಿಂದ 2024ರಲ್ಲಿ 74,227ಕ್ಕೆ ಮತ್ತು 2025ರಲ್ಲಿ 73,742ಕ್ಕೆ ಇಳಿಕೆ ಕಂಡಿದ್ದು, 2,607 ಉದ್ಯೋಗಗಳನ್ನು ಕಡಿತಗೊಳಿಸಿವೆ. ಹೆಚ್ಚಿದ ಡಿಜಿಟಲೀಕರಣ ಮತ್ತು ಕೆಳಹಂತದ ಅಸೋಸಿಯೇಟ್ ಕೆಲಸಗಳ ಮೇಲೆ ಕೇಂದ್ರೀಕರಿಸುವಿಕೆಯಿಂದಾಗಿ ಉದ್ಯೋಗ ಕಡಿತ ಹೆಚ್ಚಳವಾಗಿದೆ.
ಯುಕೋ ಬ್ಯಾಂಕಿನ ಸಿಬ್ಬಂದಿ ಸಂಖ್ಯೆ 2023ರಲ್ಲಿ 21,698 ರಿಂದ 2024ರಲ್ಲಿ 21,456ಕ್ಕೆ ಮತ್ತು 2025ರಲ್ಲಿ 21,049ಕ್ಕೆ ಇಳಿದಿದೆ. ಮತ್ತೊಂದೆಡೆ, ಭಾರತದ ಅತಿದೊಡ್ಡ ಪಿಎಸ್‌ಬಿ ಆಗಿರುವ ಎಸ್‌ಬಿಐ, ಹಣಕಾಸು ವರ್ಷ 2023ರಲ್ಲಿ 2,35,858 ರಿಂದ ಹಣಕಾಸು ವರ್ಷ 24ರಲ್ಲಿ 2,32,596ಕ್ಕೆ ಇಳಿದ ನಂತರ ಸ್ವಲ್ಪ ಚೇತರಿಕೆ ಕಂಡಿದೆ. ಹಣಕಾಸು ವರ್ಷ 2025ರಲ್ಲಿ, ಸಿಬ್ಬಂದಿ ಸಂಖ್ಯೆ 2,36,226ಕ್ಕೆ ಏರಿದೆ ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ, ಪಿಎನ್‌ಬಿ ತನ್ನ ಉದ್ಯೋಗಿಗಳ ಸಂಖ್ಯೆಯು ಹಣಕಾಸು ವರ್ಷ 2023ರಲ್ಲಿ 1,02,319 ರಿಂದ ಹಣಕಾಸು ವರ್ಷ 2024ರಲ್ಲಿ 1,02,349ಕ್ಕೆ ಸ್ವಲ್ಪ ಏರಿಕೆ ಕಂಡಿದ್ದು, ನಂತರ ಹಣಕಾಸು ವರ್ಷ 2025ರಲ್ಲಿ 1,02,316ಕ್ಕೆ ಸ್ವಲ್ಪ ಕುಸಿದಿದೆ.
ಈ ಎಲ್ಲ ಸಾರ್ವಜನಿಕ ಬ್ಯಾಂಕ್‌ಗಳ ಶಾಖೆಗಳ ಜಾಲಗಳು 2025ರ ಹಣಕಾಸು ವರ್ಷದಲ್ಲಿ ಹೆಚ್ಚಾದವು.
ಇತ್ತೀಚಿನ ವರ್ಷಗಳಲ್ಲಿ ಸಿಬ್ಬಂದಿ ಸಂಖ್ಯೆಯ ಕುಸಿತದ ಬಗ್ಗೆ ಹಲವಾರು ಬ್ಯಾಂಕ್ ಒಕ್ಕೂಟಗಳು ಕಳವಳ ವ್ಯಕ್ತಪಡಿಸಿವೆ. ಈ ವರ್ಷದ ಆರಂಭದಲ್ಲಿ, ಕೆಲವು ನಗರಗಳಲ್ಲಿ ಬ್ಯಾಂಕ್ ನೌಕರರು ಪ್ರತಿಭಟನೆಗಳನ್ನೂ ಕೂಡ ನಡೆಸಿದರು. ಅಲ್ಪಾವಧಿಯ ವ್ಯವಹಾರವು ಗ್ರಾಹಕ ಸೇವೆ ಮತ್ತು ಸಿಬ್ಬಂದಿಯ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತಿದೆಯೆಂಬ ದೂರುಗಳೂ ಕೂಡ ಕೇಳಿಬಂದಿವೆ.
“ಇಬ್ಬರು ಉದ್ಯೋಗಿಗಳು ಮಾತ್ರ ಕೆಲಸ ಮಾಡುತ್ತಿರುವಂತಹ ಅನೇಕ ಶಾಖೆಗಳಿವೆ. ಕೆಲವು ಸಂದರ್ಭಗಳಲ್ಲಿ, ಒಂದು ಅಥವಾ ಎರಡು ಶಾಖೆಗಳಲ್ಲಿ ಕೇವಲ ಮೂವರು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿರುವುದು ನಮಗೆ ಕಂಡುಬಂದಿದೆ. ಇದನ್ನು ಪರಿಹರಿಸಬೇಕಾಗಿದೆ” ಎಂದು ಹಿರಿಯ ಬ್ಯಾಂಕ್ ಅಧಿಕಾರಿಯೊಬ್ಬರು ಬಿಸಿನೆಸ್ ಸ್ಟ್ಯಾಂಡರ್ಡ್‌ಗೆ ತಿಳಿಸಿದ್ದಾರೆ.
ಬ್ಯಾಂಕ್ ಆವರಣದಲ್ಲಿ ಬ್ಯಾಂಕ್ ಸಿಬ್ಬಂದಿಯ ವಿರುದ್ಧ ಮೌಖಿಕ ನಿಂದನೆ, ದೈಹಿಕ ಹಲ್ಲೆ ಹಾಗೂ ಹಿಂಸಾತ್ಮಕ ಕ್ರಮಗಳಂತಹ ಬೆದರಿಕೆಯ ಘಟನೆಗಳ ಸುದ್ದಿ ವರದಿಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳು ವೈರಲ್ ಆದ ನಂತರ, ಹಣಕಾಸು ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಬ್ಯಾಂಕ್ ಉದ್ಯೋಗಿಗಳಿಗೆ ಜಾಗೃತಿ ಮೂಡಿಸಲು ಹಾಗೂ ಸಾರ್ವಜನಿಕರಿಗೆ ನಿರಂತರ ಸೇವೆ ಒದಗಿಸಲು ನೌಕರರನ್ನು ಕೇಳಿಕೊಂಡಿರುವುದಾಗಿ ವರದಿಯಾಗಿದೆ.
ಸಿಬ್ಬಂದಿ ಕೊರತೆಗೆ ಕಾರಣಗಳು:
ಭಾರತದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ(PSB) ಸಿಬ್ಬಂದಿಗಳ ಕೊರತೆ ಇರುವುದರಿಂದ, ಇರುವ ಕೆಲವೇ ಸಿಬ್ಬಂದಿಗಳೇ ಅತಿಯಾದ ಕೆಲಸ ಮಾಡುತ್ತಿದ್ದಾರೆ. ಇದರಿಂದ, ಸೇವಾ ಗುಣಮಟ್ಟ ಕುಸಿಯುತ್ತಿದೆ. ಒಂದು ದಶಕದಲ್ಲಿ 1.4 ಲಕ್ಷಕ್ಕೂ ಹೆಚ್ಚು ನೌಕರರು ನಿರ್ಗಮಿಸಿದ್ದಾರೆ ಎನ್ನಲಾಗಿದೆ.
ಕಳೆದ ದಶಕದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಎಟಿಎಂಗಳ ಮೇಲೆ ಹೆಚ್ಚಿದ ಅವಲಂಬನೆಯಿಂದಾಗಿ ಕ್ಲರ್ಕ್ ಮತ್ತು ಅಧೀನ ಹುದ್ದೆಗಳಿಗೆ ಶೇ.26% ರಷ್ಟು ನೇಮಕಾತಿ ಕಡಿಮೆಯಾಗಿದೆ. ಅಲ್ಲದೆ, ನೌಕರರ ನಿವೃತ್ತಿ ಮತ್ತು ಸ್ವಯಂಪ್ರೇರಿತ ನಿವೃತ್ತಿ ಯೋಜನೆಗಳಿಂದ ಗಣನೀಯ ಖಾಲಿ ಹುದ್ದೆಗಳು ಉಂಟಾಗಿವೆ. ಆದರೆ, ಈ ಖಾಲಿಯನ್ನು ಭರ್ತಿ ಮಾಡಲು ಸಾಕಷ್ಟು ನೇಮಕಾತಿಯಾಗಿಲ್ಲ.
ಇದನ್ನೂ ಓದಿದ್ದೀರಾ? ಮಧ್ಯಪ್ರದೇಶ | ಪಡಿತರ ಖರೀದಿ ವಿವಾದ: ದಲಿತ ಯುವಕನ ಕೊಲೆ, ಸಹೋದರನಿಗೆ ಗಂಭೀರ ಗಾಯ
2019ರಲ್ಲಿ 10 ಬ್ಯಾಂಕುಗಳ ವಿಲೀನ ಮತ್ತು ವೆಚ್ಚ ಕಡಿತದಂತಹ ಯೋಜನೆಗಳು ಹೊಸ ನೇಮಕಾತಿಗಳಿಗೆ, ವಿಶೇಷವಾಗಿ ಆಡಳಿತಾತ್ಮಕ ಹುದ್ದೆಗಳ ನೇಮಕಾತಿ ಕಡಿಮೆಯಾಗಿದೆ.
ಖಾಸಗಿ ಬ್ಯಾಂಕುಗಳು 2014 ರಿಂದ ತಮ್ಮ ಸಿಬ್ಬಂದಿ ಸಂಖ್ಯೆಯನ್ನು ದ್ವಿಗುಣಗೊಳಿಸಿವೆ. ಆದರೆ ಖಾಸಗಿ ಬ್ಯಾಂಕುಗಳು ಶ್ರೇಣಿ 2 ಮತ್ತು 3 ನಗರಗಳಿಗೆ ವಿಸ್ತರಿಸಿ, ಉತ್ತಮ ವೇತನ ಮತ್ತು ಕೆಲಸದ ವಾತಾವರಣದೊಂದಿಗೆ ಪ್ರತಿಭೆಗಳನ್ನು ಆಕರ್ಷಿಸುತ್ತಿರುವುದರಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಕುಸಿತವಾಗಿದೆ.