ಒಡಿಶಾದ ಪುರಿಯಲ್ಲಿ ಶುಕ್ರವಾರ ನಡೆಯುತ್ತಿದ್ದ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಸಂಭವಿಸಿದ್ದು, 600ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿದ್ದಾರೆ. 40ಕ್ಕೂ ಹೆಚ್ಚು ಭಕ್ತರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಜಗನ್ನಾಥ ದೇವರು ಮತ್ತು ಅವರ ಅಣ್ಣ ಬಲಭದ್ರ ಮತ್ತು ತಂಗಿ ದೇವಿ ಸುಭದ್ರಾ ದೇವಿಯ ರಥಯಾತ್ರೆಯ ಸಂದರ್ಭದಲ್ಲಿ ಅತಿಯಾದ ಸೆಕೆ ಮತ್ತು ಕಿಕ್ಕಿರಿದ ಜನದಟ್ಟಣೆಯಿಂದಾಗಿ ಜನರು ಕುಸಿದು ಬಿದ್ದಿದ್ದಾರೆ.
ಜನದಟ್ಟಣೆ ಹೆಚ್ಚಾಗಿದ್ದರಿಂದ ಕಾಲ್ತುಳಿತ ಸಂಭವಿಸಿದ್ದು, 600ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ಭಕ್ತರನ್ನ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರಿಗೂ ಅಗತ್ಯ ವೈದ್ಯಕೀಯ ನೆರವು ನೀಡಲಾಗುತ್ತಿದೆ.
ಒಡಿಶಾ ಸಚಿವ ಮುಖೇಶ್ ಮಹಾಲಿಂಗ್ ಮಾತನಾಡಿದ್ದು, “ಘಟನೆ ನಿಜಕ್ಕೂ ಆಘಾತಕಾರಿಯಾಗಿದೆ. ರಕ್ಷಣಾ ತಂಡವು ಕೂಡಲೇ ನೆರವಿಗೆ ಧಾವಿಸಿ ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಆರೋಗ್ಯ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ನೀರು ಮತ್ತು ಗ್ಲೂಕೋಸ್‌ಗೆ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿ ಭಕ್ತರ ಆರೋಗ್ಯ ವಿಚಾರಿಸುತ್ತೇನೆ” ಎಂದಿದ್ದಾರೆ.
148ನೇ ಜಗನ್ನಾಥ ರಥಯಾತ್ರೆ
ಜಗನ್ನಾಥ ರಥಯಾತ್ರೆ ಐತಿಹಾಸಿಕ ಹಬ್ಬ. 1878ರಿಂದಲೂ ಪ್ರತಿವರ್ಷ ರಥೋತ್ಸವ ಜರುಗುತ್ತಿದೆ. ಜಗನ್ನಾಥ ದೇವಸ್ಥಾನವು ಆಷಾಢ ಸುಧ್ ಬಿಜ್‌ನಂದು ರಥಯಾತ್ರೆ ಮೆರವಣಿಗೆ ಆಯೋಜಿಸುತ್ತದೆ. ಈ ಹಬ್ಬದಂದು ಜಗನ್ನಾಥ, ಬಲರಾಮ ಮತ್ತು ಸುಭದ್ರ ದೇವತೆಗಳನ್ನು ಪೂಜಿಸಲಾಗುತ್ತದೆ. ಇದು 148ನೇ ಜಗನ್ನಾಥ ರಥಯಾತ್ರೆ ಆಗಿದೆ.