ಭೋಪಾಲ್ | 90 ಡಿಗ್ರಿ ಕೋನದ ಮೇಲ್ಸೇತುವೆ ಮರು ವಿನ್ಯಾಸಕ್ಕೆ ಮುಂದಾದ ರಾಜ್ಯ ಸರ್ಕಾರ

Date:

Advertisements

90 ಡಿಗ್ರಿ ಕೋನದಷ್ಟು ತೀಕ್ಷ್ಣ ತಿರುವು ಹೊಂದಿರುವ ನೂತನವಾಗಿ ನಿರ್ಮಾಣಗೊಂಡಿರುವ ಮೇಲ್ಸೇತುವೆಯ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಿಗೇ, ಈ ಸೇತುವೆಯನ್ನು ಮರುವಿನ್ಯಾಸಗೊಳಿಸಲು ಸರ್ಕಾರ ನಿರ್ಧರಿಸಿದೆ.

ಇದಕ್ಕಾಗಿ ಹೆಚ್ಚುವರಿ ಭೂಮಿ ಒದಗಿಸಲು ಭಾರತೀಯ ರೈಲ್ವೆ ಕೂಡಾ ಸಮ್ಮತಿ ಸೂಚಿಸಿದೆ.‌ ಈ ಮೇಲ್ಸೇತುವೆಯ ವಿನ್ಯಾಸ ಬಗ್ಗೆ ಸಾರ್ವಜನಿಕರಿಂದ ತೀವ್ರ ಕಳವಳ ಹಾಗೂ ಮಾಧ್ಯಮಗಳಿಂದ ಒತ್ತಡ ವ್ಯಕ್ತವಾಗಿದ್ದರಿಂದ, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

648 ಮೀಟರ್ ಉದ್ದ ಹಾಗೂ 8.5 ಮೀಟರ್ ಅಗಲ ಹೊಂದಿರುವ ಈ ಮೇಲ್ಸೇತುವೆಯನ್ನು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ, ಈ ಸೇತುವೆ 90 ಡಿಗ್ರಿ ಕೋನದಷ್ಟು ತೀಕ್ಷ್ಣ ತಿರುವು ಹೊಂದಿದ್ದು, ಇದರಿಂದಾಗಿ ಈ ತಿರುವು ಅಪಘಾತಗಳ ಕೇಂದ್ರ ಸ್ಥಾನವಾಗಬಹುದು ಎಂಬ ತೀವ್ರ ಕಳವಳ ಸ್ಥಳೀಯ ನಿವಾಸಿಗಳು ಹಾಗೂ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ವ್ಯಕ್ತವಾಗಿತ್ತು.

Advertisements

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪಾದಚಾರಿಗಳನ್ನು ‘ಬೇವರ್ಸಿ’ಗಳಂತೆ ನಡೆಸಿಕೊಳ್ತಿದೆ ಬೆಂಗಳೂರು ನಗರ!

ಈ ಕುರಿತು ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಇಲಾಖೆ, ರೈಲ್ವೆಯು ಅಗತ್ಯ ಭೂಮಿಯನ್ನು ಹಸ್ತಾಂತರಿಸುತ್ತಿದ್ದಂತೆಯೇ, ಮೇಲ್ಸೇತುವೆಗೆ ಸೂಕ್ತ ಮಾರ್ಪಾಡುಗಳನ್ನು ಮಾಡಲಾಗುವುದು ಎಂದು ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಈ ಮಾರ್ಪಾಡು ಕ್ರಮವು 90 ಡಿಗ್ರಿಯಷ್ಟು ತೀಕ್ಷ್ಣ ತಿರುವು ಹೊಂದಿರುವ ಜಾಗದಲ್ಲಿನ ಹಳಿಗಳನ್ನು ಕಿತ್ತು ಹಾಕುವುದು ಸೇರಿದೆ. ಈ ಸ್ಥಳವು ಭಾರಿ ಸಂಚಾರಿ ದಟ್ಟಣೆಯ ಕೇಂದ್ರ ಸ್ಥಾನ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

90 ಡಿಗ್ರಿ ಕೋನದ ತಿರುವು ಹೊಂದಿರುವ ಮೇಲ್ಸೇತುವೆಯ ಬಳಿಗೆ ಬುಧವಾರ ತಂಡವೊಂದು ವಿಸ್ತೀರ್ಣ ಮಾಪಕ ಯಂತ್ರದೊಂದಿಗೆ ತೆರಳಿ ಪರೀಕ್ಷಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X