ಸ್ನೇಹಿತೆ ಸಾವಿನಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ವಿದ್ಯಾರ್ಥಿ ಬಸ್ಸಿನ ಮುಂಭಾಗಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಶನಿವಾರ ನಡೆದಿದೆ.
ಒಂದೇ ದಿನ ಎರಡು ದುರಂತಗಳು ನಡೆದಿದೆ. ಶನಿವಾರ ಬೈಕ್ ಅಪಘಾತದಲ್ಲಿ 20 ವರ್ಷದ ಯುವತಿ ಸಾವನ್ನಪ್ಪಿದ್ದು, ಇದಾದ ಸುಮಾರು 30 ನಿಮಿಷಗಳ ನಂತರ ಆಕೆಯ ಗೆಳೆಯ ಬಸ್ಸಿನ ಮುಂಭಾಗಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯುವಕ ಆಕೆಯ ಸ್ನೇಹಿತನಾಗಿದ್ದ ಮತ್ತು ಕಾಲೇಜು ಸಹಪಾಠಿ ಕೂಡ ಆಗಿದ್ದ ಎಂದು ಮಾಧ್ಯಮಗಳು ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | 3ನೇ ಮಹಡಿಯಿಂದ ಜಿಗಿದ ಉಪ ಸಭಾಧ್ಯಕ್ಷ – ಮೂವರು ಶಾಸಕರು; ಆತ್ಮಹತ್ಯೆಯ ನಾಟಕೀಯ ಯತ್ನ
ಮೃತರನ್ನು ಉತಿರಮೇರೂರಿನ ಎಸ್ ಯೋಗೇಶ್ವರನ್ ಮತ್ತು ಮದುರಾಂತಕಂನ ಇ ಶಬರಿನಾ ಎಂದು ಗುರುತಿಸಲಾಗಿದೆ. ಇಬ್ಬರೂ ಪಡಲಂ ಕಾಲೇಜಿನ ಮೂರನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದರು.
ಆಸ್ಪತ್ರೆಯಲ್ಲಿ ಶಬರಿನಾ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿದ್ದು, ಈ ಸುದ್ದಿ ತಿಳಿದ ಕೂಡಲೇ ಯೋಗೇಶ್ವರನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
