ಸ್ಪೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ ಕಾನೂನುಬಾಹಿರ : ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ

Date:

Advertisements

ಸ್ಪೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ) ಅನ್ನು ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಅನ್ವಯ ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಸಬಹುದಾಗಿದೆ ಎಂದು ರಾಜ್ಯ ಗುಪ್ತಚರ ಇಲಾಖೆಯ ನಿರ್ದೇಶನಾಲಯವು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರವು ಉಪ ಕಲಂ(1) -3 ಕಾನೂನು ಬಾಹಿರ ಚಟುವಟಿಕೆಗಳ (ತಡೆ ಕಾಯ್ದೆ) 1967 (37 ಆಫ್ 1967) ರ ಅಡಿಯಲ್ಲಿ ತನಗೆ ಪ್ರದತ್ತವಾದ ಅಧಿಕಾರದ ಅನ್ವಯ ಸ್ಪೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಅನ್ನು ಕಾನೂನು ಬಾಹಿರ ಸಂಘಟನೆ ಎಂದು ಕೇಂದ್ರ ಸರ್ಕಾರ 2024ರ ಜನವರಿ 29ರಂದು ಘೋಷಿಸಿದೆ ಎಂದು ದೆಹಲಿ ಉಚ್ಛ ನ್ಯಾಯಾಲಯದ ಕಾನೂನು ಬಾಹಿರ ಚಟುವಟಿಕೆ(ತಡೆ) ನ್ಯಾಯಾಧೀಕರಣ ರಿಜಿಸ್ಟ್ರಾರ್ ಜಿತೇಂದ್ರ ಪ್ರಸಾತ್ ಸಿಂಗ್ ಅವರು ತಿಳಿಸಿದ್ದಾರೆ.

ಈ ಕಾಯ್ದೆಯ ಉಪ ಕಲಂ (1) ಕಲಂ 4ರಲ್ಲಿ ತಿಳಿಸಿರುವಂತೆ ಸ್ಪೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ ಅನ್ನು ಕಾನೂನು ಬಾಹಿರ ಸಂಘಟನೆಯೆಂದು ಘೋಷಿಸಲು ಸಾಕಷ್ಟು ಕಾರಣಗಳು ಇವೆಯೇ ಎಂಬ ಬಗ್ಗೆ ನಿರ್ಣಯಿಸಲು ಕಲಂ 5(1) ಕಾಯ್ದೆ ಅಡಿ ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಪುರುಷೇಂದ್ರ ಕುಮಾರ್ ಕೌರವ್ ರವರನ್ನೂಳಗೊಂಡ ನ್ಯಾಯಾಧೀಕರಣವನ್ನು ರಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

Advertisements

ಈಗ ಕಾಯ್ದೆಯ ಕಲಂ 4 ಉಪ ಕಲಂ-2ರ ಅಡಿಯಲ್ಲಿ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಈ ನೋಟೀಸ್ ಜಾರಿ ಮಾಡಿದ 30 ದಿನದೊಳಗೆ ಸ್ಪೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಅನ್ನು ಸಾಕಷ್ಟು ಕಾರಣಗಳಿಂದ ಕಾನೂನು ಬಾಹಿರವೆಂದು ತೀರ್ಮಾನಿಸಿ ಘೋಷಿಸಿರುವುದನ್ನು ಏಕೆ ಒಪ್ಪಬಾರದು ಹಾಗೂ ಕಲಂ 4(3)ರ ಅಡಿಯಲ್ಲಿ ಈ ನಿರ್ಣಯವನ್ನು ಒಪ್ಪಿಕೊಂಡು ಏಕೆ ಅಂತಹ ಘೋಷಣೆಯನ್ನು ದೃಢೀಕರಿಸಬಾರದೆಂಬುದಕ್ಕೆ ಕಾರಣಗಳನ್ನು ನೀಡಲು ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಟ್ಯಾನರಿ ರಸ್ತೆಯಲ್ಲಿ ಹೊಸ ಕೆಳಸೇತುವೆ ನಿರ್ಮಾಣ: ಟ್ರಾಫಿಕ್ ಸಮಸ್ಯೆಗೆ ಕಡಿವಾಣ

ಆಕ್ಷೇಪಣೆಗಳು ಅಥವಾ ಉತ್ತರ ಏನಾದರೂ ಇದ್ದದಲ್ಲಿ ಒಂದು ವಾರದೊಳಗಾಗಿ ಕಚೇರಿ ಕೊಠಡಿ ಸಂಖ್ಯೆ: 104, ಮೊದಲನೆಯ ಮಹಡಿ, ಎ ಬ್ಲಾಕ್, ದೆಹಲಿ ಉಚ್ಚ ನ್ಯಾಯಾಲಯ, ಶೇರ್ ಷಾ ರಸ್ತೆ, ನವದೆಹಲಿ-110503ರಲ್ಲಿ ಕಳುಹಿಸಬಹುದಾಗಿದೆ. ಆಕ್ಷೇಪಣೆಗಳು / ಉತ್ತರ/ ದಾಖಲೆಗಳು ಪ್ರಾಂತೀಯ ಭಾಷೆಯಲ್ಲಿ ಇದ್ದಲ್ಲಿ ಅದರ ಯಥಾವತ್ತಾದ ಆಂಗ್ಲ ಭಾಷಾಂತರದ ಪ್ರತಿಯನ್ನು ಲಗತ್ತಿಸಬೇಕು.

ನೀವು ಖುದ್ದಾಗಿ ಅಥವಾ ನಿಮ್ಮ ಅಧಿಕೃತ ಅನುಮತಿ ಪಡೆದ ವ್ಯಕ್ತಿಯ ಮೂಲಕ ಕೊಠಡಿ ಸಂಖ್ಯೆ: 16, ದೆಹಲಿ ಉಚ್ಚ ನ್ಯಾಯಾಲಯ, ಶೇರ್ ಷಾ ರಸ್ತೆ, ನವದೆಹಲಿ – 110503 ರ ದೆಹಲಿಯಲ್ಲಿರುವ ಟ್ರಿಬ್ಯೂನಲ್‌ನ ಮುಂದೆ 2024ರ ಮೇ 4ರ ಸಂಜೆ 4.30 ಗಂಟೆಗೆ ಹಾಜರಾಗಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X