“1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ. ಅದು ಭಿಕ್ಷೆ. ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ” ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಬಾಲಿವುಡ್‌ನ ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್, ಈಗ ಮತ್ತೊಮ್ಮೆ ವಿಚಿತ್ರ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ಬಿಜೆಪಿಯು ಇತ್ತೀಚೆಗೆ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಕೆಲದಿನಗಳ ಹಿಂದೆ ‘ಟೈಮ್ಸ್ ನೌ’ ನ್ಯೂಸ್ ಚಾನೆಲ್ ಆಯೋಜಿಸಿದ್ದ ಸಮ್ಮಿಟ್‌ನಲ್ಲಿ ನಿರೂಪಕಿ ನವಿಕಾ ಕುಮಾರ್ ಅವರನ್ನು ಸಂದರ್ಶನ ನಡೆಸಿದ್ದರು.
ಈ ಸಂದರ್ಶನದಲ್ಲಿ ಕಂಗನಾ ರಣಾವತ್ ಅವರು, “ಸುಭಾಷ್ ಚಂದ್ರ ಬೋಸ್ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ” ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಅಲ್ಲದೇ, ವ್ಯಾಪಕ ಟ್ರೋಲ್‌ಗೂ ಕೂಡ ಕಾರಣವಾಗಿದೆ.
Hey Prabhu 🙏 pic.twitter.com/G0hbuH7MvA
— Srinivas BV (@srinivasiyc) April 4, 2024
ಕಂಗನಾ ತಪ್ಪಾಗಿ ಹೇಳಿದರೂ, ನಿರೂಪಕಿಯಾಗಿದ್ದ ನವಿಕಾ ಕುಮಾರ್ ಅವರಲ್ಲಿ, ಕಂಗನಾ ರಣಾವತ್ ಅವರನ್ನು ಸರಿಪಡಿಸಲು ಪ್ರಯತ್ನಿಸಲಿಲ್ಲ. ಆದರೆ, ಸುಭಾಷ್ ಚಂದ್ರ ಬೋಸ್ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಅಲ್ಲ ಎಂದು ನವಿಕಾ ಹೇಳಿದಾಗ, ಕಂಗನಾ “ಹಾಗಾದರೆ ಅವರೇಕೆ ಪ್ರಧಾನಿಯಾಗಲಿಲ್ಲ?’ ಎಂದು ಮರು ಪ್ರಶ್ನಿಸಿದ್ದಾರೆ. ಕಂಗನಾರ ಈ ಸಂದರ್ಶನ ನಡೆದು ಒಂದು ವಾರದ ಬಳಿಕ ಈ ಹೇಳಿಕೆ ಸುದ್ದಿಯಾಗಿದೆ.
Vote for educated and sensible people pic.twitter.com/NlnwaHpQKg
— Swati Maliwal (@SwatiJaiHind) April 4, 2024
ಈ ವಿಡಿಯೋವನ್ನು ಕಾಂಗ್ರೆಸ್ ನಾಯಕ ಬಿ ವಿ ಶ್ರೀನಿವಾಸ್ ಅವರು, ‘ಹೇ ಪ್ರಭು’ ಎಂದು ಹೇಳಿ ಹಂಚಿಕೊಂಡಿದ್ದಾರೆ. ಅಲ್ಲದೇ ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್, ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು ಮಂದಿ ಇತರರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ನಟ ಪ್ರಕಾಶ್ ರಾಜ್ ಅವರು, “ಮಹಾಪ್ರಭುವಿನ ಆಸ್ಥಾನ ವಿದೂಷಕರು” ಎಂದು ಉಲ್ಲೇಖಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕಾಲೆಳೆದಿದ್ದಾರೆ.
ಅಲ್ಲದೇ, ಹಲವು ಮಂದಿ ನೆಟ್ಟಿಗರು ಈ ವಿಡಿಯೋವನ್ನು ಹಂಚಿಕೊಂಡು, ನಮ್ಮ ದೇಶಕ್ಕೆ ಒಬ್ಬ ಹೊಸ ಇತಿಹಾಸ ತಜ್ಞೆ ಸಿಕ್ಕಿದ್ದಾರೆ. ಇವರೇನಾದರೂ ಅಪ್ಪಿತಪ್ಪಿ ಗೆದ್ದು ಲೋಕಸಭೆಗೆ ಬಂದರೆ, ಇಂತಹ ಇನ್ನಷ್ಟು ಹೊಸ ಹೊಸ ಇತಿಹಾಸದ ಮಹತ್ವದ ಅಂಶಗಳು ತಿಳಿದು ಬರಲಿದೆ” ಎಂದು ಬರೆಯುವ ಮೂಲಕ ವ್ಯಾಪಕ ಟ್ರೋಲ್ ಮಾಡುತ್ತಿದ್ದಾರೆ.
Clowns of Supreme Joker’s Party… what a Disgrace..#justasking .. ಮಹಾಪ್ರಭುವಿನ ಆಸ್ಥಾನ ವಿದೂಷಕರು… https://t.co/Q17wagFd0M
— Prakash Raj (@prakashraaj) April 4, 2024
ಹಿಮಾಚಲ ಪ್ರದೇಶದ ಮಂಡಿ ನಿವಾಸಿಯಾಗಿರುವ ನಟಿ ಕಂಗನಾಗೆ ಬಿಜೆಪಿ ಹೈಕಮಾಂಡ್ ಮಂಡಿ ಲೋಕಸಭಾ ಕ್ಷೇತ್ರದಿಂದಲೇ ಟಿಕೆಟ್ ನೀಡಿದೆ. ರಾಜಕೀಯದಲ್ಲಿ ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದ ಕಂಗನಾ, ಇಂತಹಾ ತಲೆಬುಡವಿಲ್ಲದ ಹೇಳಿಕೆಯಿಂದಲೇ ಸುದ್ದಿಯಾಗುತ್ತಿದ್ದಾರೆ.
