ದೆಹಲಿ | ಕಾಳಸಂತೆಯ ಪಾಲಾದ ಕಾರ್ಮಿಕರ ಅಕ್ಕಿ: 28 ಕೋಟಿ ರೂ. ಹಗರಣದ ಬೆನ್ನತ್ತಿದ ಸಿಬಿಐ

Date:

ಕಾರ್ಮಿಕರು ಹಾಗೂ ಬಡವರಿಗೆ ರಿಯಾಯಿತಿ ದರದಲ್ಲಿ ವಿತರಿಸಬೇಕಿದ್ದ ಅಕ್ಕಿಯನ್ನು ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡಿ ಬರೋಬ್ಬರಿ ₹28.87 ಕೋಟಿ ವಂಚಿಸಿರುವ ಬೃಹತ್ ಹಗರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಭಾರತೀಯ ಆಹಾರ ನಿಗಮ (ಎಫ್‌ಸಿಐ), ಈಶಾನ್ಯ ಪ್ರಾದೇಶಿಕ ಕೃಷಿ ಮಾರುಕಟ್ಟೆ ನಿಗಮದ (ನೆರಾಮ್ಯಾಕ್‌- NERAMAC) ಮಾಜಿ ಅಧಿಕಾರಿಗಳು ಹಾಗೂ ಖಾಸಗಿ ವ್ಯಾಪಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.

- Advertisement -

ಆರೋಪಿಗಳಾದ ರಾಜೇಶ್ ಬಜಾಜ್ ಮತ್ತು ಪಂಕಜ್ ಸರಾಫ್ ಎಂಬುವವರು ಅಕ್ಕಿಯನ್ನು ಬಡವರಿಗೆ ಹಂಚುವ ಬದಲು, ದೆಹಲಿ-ಎನ್‌ಸಿಆರ್‌ನ ಖಾಸಗಿ ವ್ಯಾಪಾರಿಗಳನ್ನು ಸಂಪರ್ಕಿಸಿದ್ದರು. ವ್ಯಾಪಾರಿಗಳಿಂದ ಪ್ರತಿ ಕೆ.ಜಿ ಅಕ್ಕಿಗೆ ₹23.25 ರಂತೆ ‘ನೆರಾಮ್ಯಾಕ್’ ಬ್ಯಾಂಕ್ ಖಾತೆಗೆ ಮುಂಗಡ ಹಣ ಜಮೆ ಮಾಡಿಸಿಕೊಂಡಿದ್ದಲ್ಲದೆ, ಕೆ.ಜಿಗೆ 64 ಪೈಸೆಯಿಂದ ₹2.50 ರವರೆಗೆ ಕಮಿಷನ್ ಪಡೆದಿದ್ದರು. ನೆರಾಮ್ಯಾಕ್ ಖಾತೆಗೆ ಜಮೆಯಾದ ಹಣದಲ್ಲಿ ಪ್ರತಿ ಕೆ.ಜಿಗೆ 5 ಪೈಸೆಯಷ್ಟು ಆಡಳಿತಾತ್ಮಕ ಶುಲ್ಕವನ್ನು ಕಡಿತಗೊಳಿಸಿ, ಉಳಿದ ಹಣವನ್ನು ಅಕ್ಕಿ ಬಿಡುಗಡೆಗಾಗಿ ಎಫ್‌ಸಿಐ ದೆಹಲಿ ವಿಭಾಗಕ್ಕೆ ವರ್ಗಾಯಿಸಲಾಗುತ್ತಿತ್ತು. ಹೀಗೆ ದೆಹಲಿಯ ಘೇವ್ರಾ, ಮಾಯಾಪುರಿ ಮತ್ತು ನರೇಲಾ ಎಫ್‌ಸಿಐ ಡಿಪೋಗಳಿಂದ ಅಕ್ಕಿಯನ್ನು ಎತ್ತಿದ ಖಾಸಗಿ ವ್ಯಾಪಾರಿಗಳು, ಅದನ್ನು ಇತರ ವ್ಯಾಪಾರಿಗಳಿಗೆ ಹೆಚ್ಚಿನ ಬೆಲೆಗೆ ಮಾರಿ ಭಾರೀ ಲಾಭ ಗಳಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಪಡಿತರ ಚೀಟಿ ಇಲ್ಲದ ಬಡವರು, ದಿನಗೂಲಿ ನೌಕರರು, ದೆಹಲಿಯ ವಲಸೆ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ವಿತರಿಸುವ ಉದ್ದೇಶದಿಂದ ಪ್ರತಿ ವಾರ 31,000 ಮೆಟ್ರಿಕ್ ಟನ್ ಅಕ್ಕಿ ಹಂಚಿಕೆ ಮಾಡುವಂತೆ ‘ನೆರಾಮ್ಯಾಕ್’ ಕೋರಿತ್ತು. ಆದರೆ, ವಾಸ್ತವದಲ್ಲಿ ಈ ಅಕ್ಕಿಯನ್ನು ಉದ್ದೇಶಿತ ಫಲಾನುಭವಿಗಳಿಗೆ ಹಂಚಿಲ್ಲ. ಬದಲಾಗಿ, ಖಾಸಗಿ ಸಂಸ್ಥೆಗಳು ಮತ್ತು ವ್ಯಾಪಾರಿಗಳ ಮೂಲಕ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂನ ಎರಡು ಮತ್ತು ಕೋಲ್ಕತ್ತಾದ ಒಂದು ಕಂಪನಿ ಸೇರಿದಂತೆ ಒಟ್ಟು ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಎಫ್‌ಸಿಐನ ದೆಹಲಿ ವಿಭಾಗವು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ [OMSS(D)] 2025-26ರ ಅಡಿ ‘ನೆರಾಮ್ಯಾಕ್’ಗೆ 62,000 ಮೆಟ್ರಿಕ್ ಟನ್ (ಎಂ.ಟಿ) ಅಕ್ಕಿಯನ್ನು ಹಂಚಿಕೆ ಮಾಡಿತ್ತು. ಇದರಡಿ ‘ನೆರಾಮ್ಯಾಕ್‌’ ಪ್ರತಿ ಕೆ.ಜಿಗೆ ಕೇವಲ ₹23.20 ರಂತೆ (ಮೆಟ್ರಿಕ್ ಟನ್‌ಗೆ ₹23,200) ಒಟ್ಟು 50,645 ಮೆಟ್ರಿಕ್ ಟನ್ ಅಕ್ಕಿಯನ್ನು ರಿಯಾಯಿತಿ ದರದಲ್ಲಿ ಖರೀದಿಸಿತ್ತು. ಆದರೆ, ಆ ಸಮಯದಲ್ಲಿ ಮಾರುಕಟ್ಟೆಯಲ್ಲಿ ಈ ಅಕ್ಕಿಯ ಕನಿಷ್ಠ ಬೆಲೆ (ರಿಸರ್ವ್ ಪ್ರೈಸ್) ಮೆಟ್ರಿಕ್ ಟನ್‌ಗೆ ₹28,900 ಇತ್ತು.

2025ರ ಜುಲೈ 10ರ ನೀತಿಯ ಪ್ರಕಾರ, ಹರಾಜು ಪ್ರಕ್ರಿಯೆ ಇಲ್ಲದೆ ನೇರವಾಗಿ ಅಕ್ಕಿ ಪಡೆಯುವ ಸೌಲಭ್ಯ ಕೇವಲ ರಾಜ್ಯ ಸರ್ಕಾರಗಳು ಮತ್ತು ರಾಜ್ಯ ನಿಗಮಗಳಿಗೆ ಮಾತ್ರ ಸೀಮಿತವಾಗಿತ್ತು. ಕೇಂದ್ರ ಸರ್ಕಾರದ ಸ್ವಾಮ್ಯದ ‘ನೆರಾಮ್ಯಾಕ್’ ಈ ಸೌಲಭ್ಯ ಪಡೆಯಲು ಅರ್ಹವಾಗಿರಲಿಲ್ಲ. ಒಂದು ವೇಳೆ ಈ ಅಕ್ಕಿಯನ್ನು ಕನಿಷ್ಠ ಬೆಲೆಗೆ ಹರಾಜು ಹಾಕಿದ್ದರೆ, ಎಫ್‌ಸಿಐಗೆ ಹೆಚ್ಚುವರಿಯಾಗಿ ₹28.87 ಕೋಟಿ ಆದಾಯ ಬರುತ್ತಿತ್ತು ಎಂದು ಸಿಬಿಐ ಆರೋಪಿಸಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ವಿಜಿಲೆನ್ಸ್ ವಿಭಾಗ ಮತ್ತು ತಟಸ್ಥ ಸಮಿತಿಯ (ನ್ಯೂಟ್ರಲ್ ಕಮಿಟಿ) ವರದಿಗಳ ಆಧಾರದ ಮೇಲೆ ಸಿಬಿಐ ಈ ದೂರು ದಾಖಲಿಸಿಕೊಂಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತ & ಚೀನಾದ H-1B ಉದ್ಯೋಗಿಗಳಿಂದ ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು; ಸಂಸದ ರಿಲೆ ಮೂರ್ ಆರೋಪ

ಅಮೆರಿಕದ ಕಂಪ್ಯೂಟರ್‌ ಸೈನ್ಸ್‌ ಪದವೀಧರರ ಉದ್ಯೋಗಾವಕಾಶಗಳನ್ನು ಭಾರತ ಮತ್ತು ಚೀನಾದಿಂದ ಬರುವ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ; ಸುಪ್ರೀಂನದ್ದು ದ್ವಂದ್ವ ನಿಲುವಲ್ಲವೇ?

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ...

ದೇಶ ತೊರೆಯುವಂತೆ ನೋಟಿಸ್‌; ಹೈಕೋರ್ಟ್ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ...

ಅವಧಿ ಮೀರಿದ ಆಹಾರ ಮರುಮಾರಾಟ ಆರೋಪ: ರಿಲಯನ್ಸ್‌, ಬ್ಲಿಂಕಿಟ್‌ ಘಟಕಗಳ ವಿರುದ್ಧ ತನಿಖೆ

ಅವಧಿ ಮೀರಿದ, ಹಾಳಾದ ಹಾಗೂ ಗ್ರಾಹಕರು ತಿರಸ್ಕರಿಸಿದ ಆಹಾರ ಪದಾರ್ಥಗಳನ್ನು ನಾಶಪಡಿಸುವ...